More

    ಆರೋಗ್ಯ ಸೇತು ಆ್ಯಪ್​ ಇಲ್ಲದೆ ದೆಹಲಿಗೆ ಪ್ರವೇಶ ಕೊಡಬೇಡಿ; ಲೆಫ್ಟಿನೆಂಟ್​ ಗವರ್ನರ್​​ ಅನಿಲ್​ ಬೈಜಾಲ್​ ಸಲಹೆ

    ನವದೆಹಲಿ: ರಾಷ್ಟ್ರ ರಾಜಧಾನಿಯ ಹಿತದೃಷ್ಟಿಯಿಂದ ಆರೋಗ್ಯ ಆ್ಯಪ್​ ಸೇತು ಹೊಂದಿರದವರಿಗೆ ದೆಹಲಿಗೆ ಪ್ರವೇಶಾವಕಾಶ ಕೊಡಬಾರದು ಎಂದು ಲೆಫ್ಟಿನೆಂಟ್​ ಗವರ್ನರ್​​​ ಅನಿಲ್​ ಬೈಜಾಲ್​ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಶುಕ್ರವಾರ ಆಯೋಜನೆಗೊಂಡಿದ್ದ ಕೋವಿಡ್​ 19 ಸಂಬಂಧಿತ ಸಭೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಈ ಸಲಹೆ ಕುರಿತು ದೆಹಲಿ ಸರ್ಕಾರ ಗಂಭೀರ ಚಿಂತನೆ ಆರಂಭಿಸಿದೆ. ಆದರೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.

    ರಾಷ್ಟ್ರೀಯ ಕಾಯಿಲೆಗಳ ನಿಯಂತ್ರಣ ಕೇಂದ್ರದ ನಿರ್ದೇಶಕ ಸುರ್ಜಿತ್​ ಕುಮಾರ್​ ಸಿಂಗ್​ ಕೂಡ ಇದೇ ಬಗೆಯ ಶಿಫಾರಸು ಮಾಡಿದ್ದರು. ಜತೆಗೆ 3, 5 ಮತ್ತು 14ನೇ ದಿನ ಸೇರಿ ರ‍್ಯಾಪಿಡ್​ ಟೆಸ್ಟ್​ ಸೇರಿ ದೆಹಲಿಯಲ್ಲಿ ಟೆಸ್ಟಿಂಗ್​ ಪ್ರಮಾಣವನ್ನು ಹೆಚ್ಚಿಸಬೇಕು. ತನ್ಮೂಲಕ ಕೋವಿಡ್​ 19 ಸೋಂಕಿತರು ಯಾರೂ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದರು.

    ಇದನ್ನು ಆಲಿಸಿದ ಬಳಿಕ ಆ ಸಭೆಯಲ್ಲಿ ಲೆಫ್ಟಿನೆಂಟ್​ ಗವರ್ನರ್​​​ ಅನಿಲ್​ ಬೈಜಾಲ್​ ಕೂಡ ಆರೋಗ್ಯ ಸೇತು ಆ್ಯಪ್​ ಹೊಂದಿದ್ದರೆ ಮಾತ್ರ ದೆಹಲಿಗೆ ಪ್ರವೇಶ ಕೊಡಬೇಕು ಎಂದು ಹೇಳಿದರು ಎನ್ನಲಾಗಿದೆ.

    ಕ್ಷೌರದಂಗಡಿ, ಸಲೂನ್​, ರೆಸ್ಟೋರಂಟ್​, ಮದ್ಯದಂಗಡಿ ತೆರೆಯುವಂತಿಲ್ಲ; ಯಾವುದಕ್ಕೆಲ್ಲ ಕೇಂದ್ರ ಗೃಹ ಸಚಿವಾಲಯದಿಂದ ನಿರ್ಬಂಧ ತೆರವು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts