More

    ಟ್ರಂಪ್​ ಟ್ವಿಟ್ಟರ್​ ಖಾತೆ ಸ್ಥಗಿತವಾಗೋಕೆ ಕಾರಣರಾದ ಭಾರತೀಯ ಮೂಲದ ಮಹಿಳೆ ಇವರೇ..

    ವಾಷಿಂಗ್ಟನ್​: ಟ್ವಿಟ್ಟರ್​ನಲ್ಲಿ ಸದಾ ಆ್ಯಕ್ಟಿವ್​ ಇರುತ್ತಿದ್ದ ಡೊನಾಲ್ಡ್​​ ಟ್ರಂಪ್​ಗೆ ಇದೀಗ ಟ್ವಿಟ್ಟರ್​ನಿಂದ ಔಟ್​ ಆಗಿದ್ದಾರೆ. ಟ್ರಂಪ್​ ಟ್ವಿಟ್ಟರ್​ ಖಾತೆಯನ್ನು ಟ್ವಿಟ್ಟರ್​ ಖಾತೆ ಶಾಶ್ವತವಾಗಿ ತೆಗೆದುಹಾಕಿದೆ. ಶ್ವೇತಭವನದ ಮೇಲೆ ಟ್ರಂಪ್​ ಅನುಯಾಯಿಗಳಿಂದ ಮುತ್ತಿಗೆಯಾದ ಹಿನ್ನೆಲೆಯಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದರ ಹಿಂದೆ ಇದ್ದಿದ್ದು ಭಾರತೀಯ ಮೂಲದ ಮಹಿಳೆಯೊಬ್ಬರ ಕೈ.

    ಇದನ್ನೂ ಓದಿ: ಅವನು ಕುಡಿದು ಬಂದು ತೆಗಿ ಅಂತ ಒತ್ತಾಯಿಸ್ತಿದ್ದ, ಇವನು ಜೀವವನ್ನೇ ತೆಗೆದ; ಕೊಲೆಯಲ್ಲಿ ಅಂತ್ಯವಾಯ್ತು ಸಲಿಂಗ ಕಾಮ!

    ಹೌದು, ಈ ನಿರ್ಧಾರವನ್ನು ಟ್ವಿಟ್ಟರ್​ ತೆಗೆದುಕೊಳ್ಳಲು ಸಾಧ್ಯವಾಗಿದ್ದು ಭಾರತೀಯ ಮೂಲದ ಅಮೆರಿಕ ನಿವಾಸಿ ವಿಜಯಾ ಗದ್ದೆಯಿಂದಾಗಿಯೇ. 45 ವರ್ಷದ ವಿಜಯಾ ವೃತ್ತಿಯಲ್ಲಿ ಟ್ವಿಟ್ಟರ್​ ಸಂಸ್ಥೆಯ ವಕೀಲೆಯಾಗಿದ್ದು, ಟ್ರಂಪ್​ ಅವರ ವಿರುದ್ಧ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟ್ವಿಟ್ಟರ್ ಸುರಕ್ಷತೆ, ದೇಶದ ಭದ್ರತೆಗೆ ತೊಂದರೆಯಾಗಲಿದೆ ಎಂದು ವಿಜಯಾ ವಾದಿಸಿದ್ದರಿಂದಲೇ ಇದು ಸಾಧ್ಯವಾಗಿದೆ.

    ವಿಜಯಾ ಗದ್ದೆ ಅವರ ತಂದೆ ಭಾರತದಲ್ಲಿ ಜನಿಸಿದವರು. ಕೆಮಿಕಲ್​ ಇಂಜಿನಿಯರ್​ ಕೆಲಸದ ನಿಮಿತ್ತ ಅಮೆರಿಕದ ಟೆಕ್ಸಾಸ್​ಗೆ ಹೋಗಿ ಅಲ್ಲಿಯೇ ಜೀವನ ಆರಂಭಿಸಿದರು. ವಿಜಯಾ ಅವರು ಹುಟ್ಟಿದ್ದು ಅದೇ ಟೆಕ್ಸಾಸ್​ನಲ್ಲಿ. ಅವರ ಬಾಲ್ಯವನ್ನೂ ಅಲ್ಲಿಯೇ ಕಳೆದಿದ್ದಾರೆ. ಅದಾದ ನಂತರ ಅವರ ತಂದೆ ಈಸ್ಟ್​ ಕೋಸ್ಟ್​ಗೆ ಶಿರ್ಪಟ್​ ಆಗಿದ್ದು, ವಿಜಯಾ ನ್ಯೂಜೆರ್ಸಿಯಲ್ಲಿ ಹೈ ಸ್ಕೂಲ್​ ವಿದ್ಯಾಭ್ಯಾಸ ನಡೆಸಿದರು. ಕಾರ್ನೆಲ್​ ವಿವಿ ಮತ್ತು ನ್ಯೂಯಾರ್ಕ್​ ಯುನಿವರ್ಸಿಟಿ ಲಾ ಸ್ಕೂಲ್​ನಲ್ಲಿ ಪದವಿ ಪಡೆದರು. ಆರಂಭದಲ್ಲಿ ಕೆಲ ಸ್ಟಾರ್ಟ್​ ಅಪ್​ ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದರು. 2011ರಲ್ಲಿ ಟ್ವಿಟ್ಟರ್​ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದರು. ಟ್ವಿಟ್ಟರ್​ನಲ್ಲಿ ಕಾರ್ಪೋರೇಟ್​ ವಕೀಲೆಯಾಗಿ, ನೀತಿಗಳನ್ನು ರೂಪಿಸುವ ಕೆಲಸ ನಿರ್ವಹಿಸುತ್ತಾರೆ.

    ಇದನ್ನೂ ಓದಿ: ಶಾಲೆಯಿಲ್ಲ, ಭೇಟಿ ಮಾಡಲಾಗುತ್ತಿಲ್ಲ ಎಂದು ಮನೆ ಬಿಟ್ಟು ಓಡಿ ಹೋಗಿ ಒಟ್ಟಿಗೆ ಬದುಕಿದ ಅಪ್ರಾಪ್ತ ವಯಸ್ಕರು

    2018ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವಿಟ್ಟರ್​ ಸಂಸ್ಥೆಯ ನಿಯೋಗ ಭೇಟಿಯಾದಾಗ ನಿಯೋಗದಲ್ಲಿ ವಿಜಯಾ ಕೂಡ ಇದ್ದರು. ಅವರ ಕಾರ್ಯಕ್ಷಮತೆಯ ಬಗ್ಗೆ ಅನೇಕ ಮ್ಯಾಗ್​ಜಿನ್​ಗಳು ಹಾಡಿ ಹೊಗಳಿ ಬರೆದಿವೆ. (ಏಜೆನ್ಸೀಸ್​)

    ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts