More

    ಶಾಲೆಯಿಲ್ಲ, ಭೇಟಿ ಮಾಡಲಾಗುತ್ತಿಲ್ಲ ಎಂದು ಮನೆ ಬಿಟ್ಟು ಓಡಿ ಹೋಗಿ ಒಟ್ಟಿಗೆ ಬದುಕಿದ ಅಪ್ರಾಪ್ತ ವಯಸ್ಕರು

    ವಡೋದರಾ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಶಾಲೆಗಳೆಲ್ಲವೂ ಮುಚ್ಚಿದ್ದರಿಂದಾಗಿ ಅನೇಕ ವಿದ್ಯಾರ್ಥಿಗಳು ಬಾಲ ಕಾರ್ಮಿಕರಾಗಿರುವುದನ್ನು ನೋಡಿದ್ದೇವೆ. ಆದರೆ ಇಲ್ಲಿಬ್ಬರು ವಿದ್ಯಾರ್ಥಿಗಳು ಶಾಲೆಯಲ್ಲಿ ಭೇಟಿ ಮಾಡಲಾಗುತ್ತಿಲ್ಲ ಎನ್ನುವ ಕಾರಣಕ್ಕೆ ಮನೆ ಬಿಟ್ಟು ಓಡಿಹೋಗಿ ದಂಪತಿಗಳಂತೆ ಬದುಕಿರುವ ಘಟನೆ ನಡೆದಿದೆ.

    ಇದನ್ನೂ ಓದಿ: ಬಸ್ಸು ಲೇಟಾಗಿದ್ದರಿಂದ ಶಾಲೆಗೆ ತಡವಾಗುತ್ತಿದೆ ಎಂದು ದೂರಿತ್ತ ವಿದ್ಯಾರ್ಥಿ; ಆಮೇಲೆ ಆಗಿದ್ದಕ್ಕೆ ಪ್ರಶಂಸೆಯ ಸುರಿಮಳೆ

    ಗುಜರಾತ್​ನ ಛಾನಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಅವರಿಬ್ಬರು ಒಂದೇ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು. ಈಗ 9ನೇ ತರಗತಿಯಲ್ಲಿದ್ದಾರೆ. ಲಾಕ್​ಡೌನ್​ ಕಾರಣ ಶಾಲೆ ಮುಚ್ಚಿದ್ದರಿಂದ ಕಳೆದ ಸುಮಾರಷ್ಟು ತಿಂಗಳುಗಳಿಂದ ಭೇಟಿ ಮಾಡಲು ಆಗಿರಲಿಲ್ಲವಂತೆ. ಅದೇ ನೋವಿನಲ್ಲಿದ್ದ ಅವರಿಬ್ಬರು ಡಿಸೆಂಬರ್​ 29ರಂದು ಮನೆಯಿಂದ ಓಡಿ ಹೋಗಿದ್ದಾರೆ. ಬಾಲಕನ ಮನೆಯಲ್ಲಿ ದೇವಸ್ಥಾನವೊಂದಿದ್ದು, ಆ ದೇವಸ್ಥಾನದ ಕಾಣಿಕೆ ಡಬ್ಬದಲ್ಲಿದ್ದ 25 ಸಾವಿರ ರೂಪಾಯಿಯನ್ನೂ ತೆಗೆದುಕೊಂಡು ಹೋಗಿದ್ದಾನೆ. ಹುಡುಗಿ ತನ್ನ ಮನೆಯಲ್ಲಿದ್ದ 5 ಸಾವಿರ ರೂಪಾಯಿಯನ್ನು ತೆಗೆದುಕೊಂಡು ಮನೆ ಬಿಟ್ಟು ಹೊರಟಿದ್ದಾಳೆ.

    ಮನೆಯಿಂದ ಹೊರಟವರೆ ರನೋಲಿ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾಳೆ. ಅಲ್ಲಿಂದ ಸಯಾಜಿಗುಂಜ್​ಗೆ ಹೋಗಿದ್ದರು. ಸಯಾಜಿಗುಂಜ್​ಗೆ ಈ ಮೊದಲೇ ಹಲವು ಬಾರಿ ಹೋಗಿದ್ದರಿಂದಾಗಿ ಬಾಲಕನಿಗೆ ನಗರದ ಬಗ್ಗೆ ಮಾಹಿತಿ ಇತ್ತು. ಅಲ್ಲೇ ಒಂದು ರೂಂ ಬಾಡಿಗೆ ಪಡೆದು ಜೀವನ ಆರಂಭಿಸಿದ್ದಾರೆ. ತಿಂಗಳಿಗೆ 500 ರೂಪಾಯಿ ಬಾಡಿಗೆ ಕಟ್ಟುವುದಾಗಿ ತಿಳಿಸಿದ್ದಾರೆ. ನಗರದಲ್ಲೇ ಒಂದು ಗಾರ್ಮೆಂಟ್ಸ್​ನಲ್ಲಿ ಬಾಲಕ ಕೆಲಸಕ್ಕೂ ಸೇರಿದ್ದಾನೆ. ಪ್ರತಿದಿನಕ್ಕೆ 366 ರೂಪಾಯಿಯಂತೆ ಕೆಲಸ ಆರಂಭಿಸಿದ್ದಾನೆ. ಇಬ್ಬರು ದಂಪತಿಗಳಂತೆ ಜೀವನ ನಡೆಸಿದ್ದಾರೆ.

    ಇದನ್ನೂ ಓದಿ: ಕೆಲಸದಾಳಿನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಕಸದ ರಾಶಿಯಲ್ಲೇ ಶವವನ್ನು ಹೂತಿಟ್ಟ ಜೋಡಿ

    ಈ ಮಧ್ಯೆ ಮಕ್ಕಳು ಕಾಣದಿದ್ದರಿಂದ ಗಾಬರಿಗೊಂಡ ಎರಡೂ ವಿದ್ಯಾರ್ಥಿಗಳ ಕುಟುಂಬದವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಮಕ್ಕಳಿಗಾಗಿ ಕುಡುಕಾಟ ಆರಂಭಿಸಲಾಗಿದೆ. ಸಯಾಜಿಗುಂಜ್​ನಲ್ಲಿದ್ದ ಬಾಲಕ ಸ್ನೇಹಿತನೊಬ್ಬನನ್ನು ಭೇಟಿ ಮಾಡಿ ವಿಚಾರ ತಿಳಿಸಿದ್ದು, ಆತನಿಂದಲೇ ಪೊಲೀಸರಿಗೆ ಬಾಲಕನ ಮಾಹಿತಿ ಸಿಕ್ಕಿದೆ. ಇದೀಗ ಇಬ್ಬರನ್ನು ಛಾನಿಗೆ ಕರೆತಂದು ಅವರವರ ಮನೆಗೆ ಕಳುಹಿಸಿಕೊಡಲಾಗಿದೆ. (ಏಜೆನ್ಸೀಸ್​)

    ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts