More

    ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಮುಂದುವರಿದಿದ್ದು, ಪೊಲೀಸರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿದೆ. ಅಮೃತಹಳ್ಳಿ ಸಮೀಪದ ಕೆಂಪಾಪುರದಲ್ಲಿ ಇರುವ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು.

    ಸೋಮವಾರ ತಡರಾತ್ರಿ 12.20ರಲ್ಲಿ ಕೆಂಪಾಪುರದ ಜೈನ್ ಹೆರಿಟೈಸ್ ಸ್ಕೂಲ್ ಮುಖ್ಯಸ್ಥೆ ಅರ್ಚನಾ ವಿಶ್ವನಾಥ್‌ಎ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮಂಗಳವಾರ ಬೆಳಗ್ಗೆ 7:30ಕ್ಕೆ ಎಂದಿನಂತೆ ಶಾಲೆ ತೆರೆದು ಇಮೇಲ್ ಪರಿಶೀಲನೆ ನಡೆಸಿದಾಗ ಬಾಂಬ್ ಬೆದರಿಕೆ ಸಂದೇಶ ಕಾಣಿಸಿದೆ.

    ತಕ್ಷಣ ಅಧಿಕಾರಿ,ಸಿಬ್ಬಂದಿ ಹೊರಗೆ ಬಂದು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದರು. ವಿಷಯ ತಿಳಿದ ಅಮೃತಹಳ್ಳಿ ಪೊಲೀಸರು ಮತ್ತು ಶ್ವಾನ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಎಲ್ಲೆಡೆ ಪರಿಶೀಲನೆ ನಡೆಸಿದರು. ಯಾವುದೇ ಸ್ಫೋಟಕ ವಸ್ತು ಮತ್ತು ಅನುಮಾನಸ್ಪದ ವಸ್ತುಗಳು ಕಾಣದೆ ಇದ್ದ ಕಾರಣಕ್ಕೆ ಪೊಲೀಸರು ಮತ್ತು ಶಾಲಾ ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟರು.

    ಎರಡು ದಿನಗಳ ಹಿಂದೆ 6 ಖಾಸಗಿ ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಈ ಪ್ರಕರಣ ಮಾಸುವ ಮೊದಲೇ ಶಾಲೆಗೆ ಬಂದಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts