More

    ಕಾಂಗ್ರೆಸ್​ಗೆ ಚುನಾವಣಾ ಆಯೋಗ ನೋಟಿಸ್​: ಬಿಜೆಪಿಗೆ ತಿರುಗೇಟು ಕೊಟ್ಟ ಡಿ.ಕೆ. ಶಿವಕುಮಾರ್​

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ದರ ಕಾರ್ಡ್ ನಿಗದಿಪಡಿಸಿದೆ ಎಂಬರ್ಥದಲ್ಲಿ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿರುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

    ಎಲ್ಲ ಅವರ ಪಾರ್ಟಿಯವರೇ ಕೊಟ್ಟಿದ್ದಾರೆ

    ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ದರ ಕಾರ್ಡ್ ಕೊಟ್ಟಿದ್ದು ನಾನಲ್ಲ. ಬಿಜೆಪಿಯವರ ದರ ಕಾರ್ಡ್ ಕೊಟ್ಟಿದ್ದು ಯತ್ನಾಳ್, ಗೂಳಿಹಟ್ಟಿ ಶೇಖರ್ ಹಾಗೂ ವಿಶ್ವನಾಥ್. ಎಲ್ಲ ಅವರ ಪಾರ್ಟಿಯವರೇ ಕೊಟ್ಟಿದ್ದಾರೆ. ಮಾಧ್ಯಮದವರು ನೀವು ಕೂಡ ದರ ಕಾರ್ಡ್​ ಕೊಟ್ಟಿದ್ದೀರಿ ಎನ್ನುತ್ತಾ ಬಿಜೆಪಿಗೆ ತಿರುಗೇಟು ನೀಡಿದರು.

    ಇದನ್ನೂ ಓದಿ: ವಯಸ್ಸಾಯ್ತು ಮದುವೆ ಆಗಿಲ್ಲ ಅಂತ ಮನನೊಂದು ಪ್ರಾಣಬಿಟ್ಟ ಲೇಡಿ ಕಾನ್ಸ್​ಟೆಬಲ್​

    ನಾವು ಜಾಹಿರಾತು ಕೊಟ್ಟಿದ್ದೇವೆ ಅಷ್ಟೇ

    ಮುಖ್ಯಮಂತ್ರಿ ಸ್ಥಾನಕ್ಕೆ ಎಷ್ಟು ರೇಟ್? ಮಂತ್ರಿ ಸ್ಥಾನಕ್ಕೆ ಎಷ್ಟು? ಮಠಗಳ ಸ್ವಾಮೀಜಿಗಳಿಂದ ಎಷ್ಟು ಕಮಿಷನ್​? ಎಂಬುದನ್ನು ಅವರ ಪಾರ್ಟಿಯವರೇ ಹೇಳಿದ್ದಾರೆ. ಆದರೆ, ಅದನ್ನು ನಾವು ಜಾಹಿರಾತು ಕೊಟ್ಟಿದ್ದೇವೆ ಅಷ್ಟೇ ಎಂದು ಡಿಕೆಶಿ ಹೇಳಿದರು.

    ಚುನಾವಣಾ ಆಯೋಗ ಹೇಳಿದ್ದೇನು?

    ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ದರ ಕಾರ್ಡ್ ನಿಗದಿಪಡಿಸಿದೆ ಎಂಬರ್ಥದಲ್ಲಿ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಭ್ರಷ್ಟಾಚಾರ ಬಗ್ಗೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲು ಪಕ್ಷದಿಂದ ಸೂಕ್ತ ಸಾಕ್ಷ್ಯಗಳನ್ನು ಆಯೋಗ ಕೇಳಿದೆ. ಮೇ 7ರ ಸಂಜೆ 7 ಗಂಟೆಯ ಒಳಗಾಗಿ ಸಾಕ್ಷ್ಯಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

    ಬಿಜೆಪಿ ಪಕ್ಷ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ ನೋಟಿಸ್ ನೀಡಲಾಗಿದೆ. ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಈ ದರ ಕಾರ್ಡ್​ಗಳ ಬಗ್ಗೆ ಕಾಂಗ್ರೆಸ್ ಬಳಿ ಸೂಕ್ತ ಪುರಾವೆಗಳಿವೆ ಎಂದು ನಾವು ಊಹಿಸುತ್ತೇವೆ ಎಂದಿರುವ ಆಯೋಗ ಜಾಹೀರಾತಿನಲ್ಲಿ ಉಲ್ಲೇಖಿಸಿರುವ ನೇಮಕಾತಿಗಳು ಮತ್ತು ವರ್ಗಾವಣೆ, ಉದ್ಯೋಗಗಳಿಗೆ ನಿಗದಿಪಡಿಸಿರುವ ದರ ಹಾಗೂ ಕಮಿಷನ್ ಆರೋಪಗಳಿಗೆ ಪುರಾವೆ ಒದಗಿಸಬೇಕು. ಯಾವುದೇ ಹೆಚ್ಚುವರಿ ವಿವರಣೆ ಇದ್ದರೆ ಅದನ್ನು ಸಾರ್ವಜನಿಕ ವೇದಿಕೆಯಲ್ಲಿರಿಸಬೇಕು ಎಂದು ನಿರ್ದೇಶನ ನೀಡಿದೆ.

    ಇದನ್ನೂ ಓದಿ: ಪ್ರಧಾನಿ ಬೆಂಗಳೂರು ರೋಡ್ ಶೋ ಸಕ್ಸೆಸ್ | ಎರಡು ದಿನವೂ ಮೊಳಗಿದ ‘ಮೋದಿ’ ಘೋಷಣೆ; ಬಿಜೆಪಿಗೆ ಸಿಕ್ತು ಬಿಗ್ ಬೂಸ್ಟ್

    ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಕಡು ಭ್ರಷ್ಟ ಸರ್ಕಾರವಿದೆ ಎಂದು ಆರೋಪಿಸಿ, ಭ್ರಷ್ಟಾಚಾರದ ದರಗಳನ್ನು ನಿಗದಿ ಮಾಡಿದ ಪೋಸ್ಟರ್, ಜಾಹೀರಾತನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು.

    ‘ಚಾಂಪ್​​’ನನ್ನು ಕಳೆದುಕೊಂಡ ಬೇಸರದಲ್ಲಿ ರಮ್ಯಾ; ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಗೈರು

    ಮತ್ತೆ ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್​ ಬ್ಯೂಟಿ: ಫೋಟೋ, ವಿಡಿಯೋ ವೈರಲ್​

    ‘ಮದುವೆ ಆದ ಮೇಲೆ ಹಿಂದೂ ಧರ್ಮಕ್ಕೆ ಮತಾಂತರ ಆದ್ರಾ?’ ಪ್ರಶ್ನೆಗೆ ಬಿಜೆಪಿ ನಾಯಕಿಯ ಖಡಕ್ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts