More

    1,200 ಕೋಟಿ ರೂ. ಸೋರಿಕೆ ತಡೆ: ನರೇಗಾ ಕಾರ್ವಿುಕರಿಗೆ ಡಿಜಿಟಲ್ ಹಾಜರಾತಿ, ಅಕ್ರಮಕ್ಕೆ ಕಡಿವಾಣ

    | ಶಿವಾನಂದ ಹಿರೇಮಠ ಗದಗ

    ನರೇಗಾ ಯೋಜನೆಯಲ್ಲಿನ ಅಕ್ರಮ ತಡೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಡಿಜಿಟಲ್ ಹಾಜರಾತಿಯಿಂದ 2022-23ನೇ ಸಾಲಿನಲ್ಲಿ ಅಂದಾಜು 1,200 ಕೋಟಿ ರೂ. ಸೋರಿಕೆ ತಡೆಯಲಾಗಿದೆ. ಅನಗತ್ಯ ಮಾನವ ದಿನಗಳನ್ನು ಸೃಷ್ಟಿಸಿ ಹಣ ಲಪಟಾಯಿಸಿ, ಕಾರ್ವಿುಕರಿಗೆ ಮೋಸ ಮಾಡುತ್ತಿದ್ದ ಖದೀಮರಿಗೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿದೆ. ಈಗ ಅರ್ಹರಿಗೆ ಮಾತ್ರ ಕೂಲಿ ದೊರೆಯುತ್ತಿದೆ. ನರೇಗಾ ಯೋಜನೆಯ ಅನುಷ್ಠಾನದಲ್ಲಿ ಪರಿಣಾಮಕಾರಿ ಬೆಳವಣಿಗೆ ಕಂಡುಬಂದಿದೆ.

    ಗ್ರಾಮೀಣ ಭಾಗಗಳ ಅಭಿವೃದ್ಧಿ ಮತ್ತು ಗ್ರಾಮೀಣರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಜಾರಿಯಾದ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ನೆಪಕ್ಕೆ ಜಾಬ್ ಕಾರ್ಡ್ ವಿತರಣೆ ಮಾಡಿ, ಹಾಜರಾತಿಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಮಾನವ ದಿನ ಸೃಷ್ಟಿಸಿ ಕಾರ್ವಿುಕರ ಬ್ಯಾಂಕ್ ಪಾಸ್​ಬುಕ್​ಗಳನ್ನು ಒಂದೆಡೆ ಸಂಗ್ರಹಿಸಿಟ್ಟುಕೊಂಡು ಕೂಲಿ ಹಣ ಲಪಟಾಯಿಸುವ ಬಗ್ಗೆ ಗ್ರಾಪಂಗಳ ಪಿಡಿಒ ಮತ್ತು ಅಧ್ಯಕ್ಷರ ವಿರುದ್ಧ ಗಂಭೀರ ಆರೋಪಗಳಿದ್ದವು. ಯೋಜನೆ ದುರ್ಬಳಕೆಯ ಪ್ರಕರಣಗಳೂ ದಾಖಲಾಗಿವೆ. ಇದನ್ನು ತಡೆಗಟ್ಟಲು ಕಾರ್ವಿುಕರ ಡಿಜಿಟಲ್ ಹಾಜರಾತಿಯನ್ನು ಕೇಂದ್ರ ಸರ್ಕಾರ 2022ರ ಏ. 1ರಂದು ಜಾರಿಗೆ ತಂದಿದೆ.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಮಕ್ಕಳ ಶೋಷಣೆ: ಮಧ್ಯಪ್ರದೇಶದಲ್ಲಿ 4000 ಆರೋಪಿಗಳ ಬಂಧನಕ್ಕೆ ತಯಾರಿ

    ಯೋಜನೆ ಪರಿಣಾಮಕಾರಿ ಅನುಷ್ಠಾನ: ರಾಜ್ಯದಲ್ಲಿ ಒಟ್ಟು 5,991 ಗ್ರಾಪಂಗಳಲ್ಲಿ 71 ಲಕ್ಷ ಜಾಬ್ ಕಾರ್ಡ್ ಸೃಷ್ಟಿಯಾಗಿದ್ದು, 1.81 ಕೋಟಿ ನರೇಗಾ ಕಾರ್ವಿುಕರಿದ್ದಾರೆ. 2021- 22ನೇ ಸಾಲಿನಲ್ಲಿ 13 ಕೋಟಿ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿತ್ತು. ಆದರೆ, 14 ಕೋಟಿಗೂ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸಲಾಗಿತ್ತು. ಕೇಂದ್ರ ಸರ್ಕಾರ ಎನ್​ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟ್ಂ)

    ತಂತ್ರಾಂಶ ಜಾರಿಗೆ ತಂದು ಪ್ರಸಕ್ತ ಸಾಲಿನಲ್ಲಿ ಕಾರ್ವಿುಕರ ಹಾಜರಾತಿಯನ್ನು ಡಿಜಿಟಲೀಕರಣಗೊಳಿಸಿತ್ತು. ಸ್ಥಳದಲ್ಲೇ ಜಿಪಿಎಸ್ ಮೂಲಕ ದಿನದಲ್ಲಿ ಎರಡು ಬಾರಿ ಕಾಮಗಾರಿಯ ಫೋಟೋ ಅಪ್​ಲೋಡ್ ಮಾಡಬೇಕಿದೆ. ಕಾರ್ವಿುಕರ ಗುಂಪು ಫೋಟೋಗಳನ್ನು ತಂತ್ರಾಂಶಕ್ಕೆ ಅವರೇ ಅಪ್​ಲೋಡ್ ಮಾಡಬೇಕು. ಈ ಪಾರದರ್ಶಕ ವ್ಯವಸ್ಥೆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 15 ಕೋಟಿ ಮಾನವ ದಿನಗಳ ಗುರಿಯ ಪೈಕಿ 11.5 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲು ಮಾತ್ರ ಸಾಧ್ಯವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಕಾರ 1 ಕೋಟಿ ಮಾನವ ದಿನಗಳಿಗೆ ವೆಚ್ಚವಾಗುತ್ತಿದ್ದ 400 ಕೋಟಿ ರೂ. ಉಳಿತಾಯವಾಗುತ್ತದೆ. 3.5 ಕೋಟಿ ಮಾನವ ದಿನಗಳಿಗೆ ಅಂದಾಜು 1,200 ಕೋಟಿ ರೂ.ಗಿಂತ ಹೆಚ್ಚು ಉಳಿತಾಯ ಆಗಿದೆ ಎನ್ನುತ್ತವೆ ಮೂಲಗಳು.

    ಸೋಷಿಯಲ್ ಆಡಿಟ್ ಮತ್ತು ಗುಂಪು ಕಾಮಗಾರಿಗಳನ್ನು ಡಿಜಿಟಲ್ ಹಾಜರಾತಿ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತಿದೆ. ನರೇಗಾ ಅನುಷ್ಠಾನದಲ್ಲಿ ಪರಿಣಾಮಕಾರಿ ಬದಲಾವಣೆ ಆಗಿದೆ. ಮಾರ್ಚ್ ಅಂತ್ಯದೊಳಗೆ ಕೇಂದ್ರ ನೀಡಿರುವ ಗುರಿ ಸಾಧಿಸಲಾಗುವುದು.

    | ಶಿಲ್ಪಾ ನಾಗ್ ನರೇಗಾ ಆಯುಕ್ತೆ

    ಇದನ್ನೂ ಓದಿ: ರಾಜ್ಯದ ಜನತೆಗೆ ರೈಲ್ವೇಯಿಂದ ಸಿಹಿಸುದ್ದಿ: ಇಲ್ಲೆಲ್ಲ ನಿಲ್ಲಲಿವೆ ಈ ರೈಲುಗಳು!

    ನೆಟ್​ವರ್ಕ್ ಸಮಸ್ಯೆ
    ಮೊಬೈಲ್ ಹಾಜರಾತಿಗೆ ಸ್ಥಳೀಯ ಮಟ್ಟದಲ್ಲಿ ವಿರೋಧವೂ ವ್ಯಕ್ತವಾಗಿದೆ. ಗುಡ್ಡುಗಾಡು ಪ್ರದೇಶದಲ್ಲಿ ನೆಟ್​ವರ್ಕ್ ಇಲ್ಲದ ಕಡೆ ಫೋಟೊ ಅಪ್​ಲೋಡ್​ಗೆ ಸಮಸ್ಯೆ ಆಗುತ್ತಿದೆ ಎಂಬುದು ಹಲವರ ಆರೋಪ. ಕೂಲಿ ಕಾರ್ವಿುಕರಲ್ಲಿ ಒಂದಿಬ್ಬರಿಗೆ ಲಾಗಿನ್ ಐಡಿ, ಪಾಸ್​ವರ್ಡ್ ನೀಡಿದ್ದರಿಂದ ನಿತ್ಯವೂ 2 ಸಲ ಫೋಟೋ ಅಪ್​ಲೋಡ್​ಗೆ ಸಮಸ್ಯೆ ಆಗುತ್ತಿದೆ ಎಂದ ದೂರುಗಳು ಕೇಳಿಬಂದಿದೆ.

    ಮುಕೇಶ್​ ಅಂಬಾನಿ ಕುಟುಂಬಕ್ಕೆ Z+ ಭದ್ರತೆ ಒದಗಿಸಲು ಸುಪ್ರೀಂಕೋರ್ಟ್​ ಆದೇಶ

    ಬಲವಂತದ ವಿವಾಹ ತಡೆಯಲು ಇಂಗ್ಲೆಂಡ್​ನಲ್ಲಿ 18 ವರ್ಷಕ್ಕೆ ಮದುವೆ

    ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts