More

    ಸಿಎಎ ಜಾರಿ ಸ್ವೀಕಾರಾರ್ಹವಲ್ಲ: ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ನಟ ವಿಜಯ್​

    ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾದ ಬೆನ್ನಲ್ಲೇ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ದಳಪತಿ ವಿಜಯ್​, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    2019ರ ಡಿಸೆಂಬರ್​ 11ರಂದು ಸಂಸತ್ತಿನಲ್ಲಿ ಸಿಎಎ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿತ್ತು. ಈ ಸಂದರ್ಭದಲ್ಲಿ ಸಿಎಎ ಕುರಿತು ರಾಷ್ಟ್ರವ್ಯಾಪಿ ಸಾಕಷ್ಟು ಚರ್ಚೆಯಾಗಿತ್ತು ಮತ್ತು ಪ್ರತಿಭಟನೆಗಳು ಸಹ ನಡೆದಿದ್ದವು. ಸಿಎಎ ವಿಚಾರದಲ್ಲಿ ಅನೇಕರು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದರು. ಆದರೆ, ಕೇಂದ್ರ ಸರ್ಕಾರ ಗೊಂದಲ ಪರಿಹರಿಸುವ ಪ್ರಯತ್ನ ಮಾಡುತ್ತಲೇ ಬಂದಿತು. ಸುಮಾರು 4 ವರ್ಷಗಳ ಬಳಿಕ ಕೊನೆಗೂ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ. ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್​ 31ಕ್ಕೂ ಮುಂಚೆ ಭಾರತಕ್ಕೆ ಆಗಮಿಸಿರುವ ಸಿಖ್​, ಬೌದ್ಧರು, ಕ್ರಿಶ್ಚಿಯನ್​, ಜೈನರು ಮತ್ತು ಪಾರ್ಸಿಗಳಿಗೆ ಸಿಎಎ ಅಡಿಯಲ್ಲಿ ಭಾರತದ ಪೌರತ್ವವನ್ನು ನೀಡಲಾಗುತ್ತದೆ.

    ಸಿಎಎ ಜಾರಿ ಬೆನ್ನಲ್ಲೇ ಸಾಕಷ್ಟು ಪರ-ವಿರೋಧ ವ್ಯಕ್ತವಾಗುತ್ತಿದೆ. ಸಿಎಎ ಅನ್ನು ಜಾರಿ ಮಾಡಿರುವುದು ಸ್ವೀಕಾರವಲ್ಲ ಎಂದು ವಿಜಯ್​ ಹೇಳಿದ್ದಾರೆ.

    ದೇಶದ ಎಲ್ಲ ಜನರು ಸಾಮಾಜಿಕ ಸಾಮರಸ್ಯದಿಂದ ಬದುಕುವ ಪರಿಸರದಲ್ಲಿ ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆ 2019 ಅಂತಹ ಕಾನೂನು ಜಾರಿ ಮಾಡುವುದು ಸ್ವೀಕಾರ್ಹವಲ್ಲ ಎಂದು ತಮಿಳು ಭಾಷೆಯಲ್ಲಿ ವಿಜಯ್​ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇದಿಷ್ಟೇ ಅಲ್ಲದೆ, ತಮಿಳುನಾಡಿನಲ್ಲಿ ಈ ಕಾಯ್ದೆ ಜಾರಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದಿದ್ದಾರೆ.

    Vijay 11

    ನಟ ವಿಜಯ್ ಜೊತೆಗೆ ಇತರ ವಿಪಕ್ಷದ ನಾಯಕರು ಪೌರತ್ವ (ತಿದ್ದುಪಡಿ) ಕಾಯ್ದೆಯ ಅಧಿಸೂಚನೆಗಾಗಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಾಜವನ್ನು ವಿಭಜಿಸಲು ಮತ್ತು ಸಾರ್ವತ್ರಿಕ ಚುನಾವಣೆಗೂ ಮುಂಚಿತವಾಗಿ ವಾತಾವರಣವನ್ನು ಧ್ರುವೀಕರಣಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯು ಬಿಜೆಪಿಯ “ವಿಭಜಕ ಅಜೆಂಡಾ” ಎಂದು ಕರೆದರು. ದೇಶದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತದೆ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್​)

    ಅಯೋಧ್ಯೆ ರಾಮಾಸ್ತ್ರದ ಬಳಿಕ ನಮೋ ಪೌರಾಸ್ತ್ರ! 3 ದೇಶಗಳ ಅಲ್ಪಸಂಖ್ಯಾತ ಹಿಂದುಗಳಿಗೆ ಪೌರತ್ವ

    ನೆರೆರಾಷ್ಟ್ರಗಳ ಮುಸ್ಲಿಮೇತರರಿಗೆ ಪೌರತ್ವ ಗ್ಯಾರಂಟಿ: ಪರ-ವಿರೋಧ ಹೋರಾಟದ ನಂತರ ತಾರ್ಕಿಕ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts