More

    ಜಗದ್ಗುರು ಫಕ್ಕೀರೇಶ್ವರ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೂ, ಧಾರವಾಡದ ಮುರಘಾಮಠಕ್ಕೂ ಯಾವುದೇ ಸಂಬಂಧವಿಲ್ಲಾ- ಮಲ್ಲಿಕಾರ್ಜುನ ಸ್ವಾಮೀಜಿ ಸ್ಪಷ್ಟನೆ

    ಧಾರವಾಡ: ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರಲ್ಲಾದ ಜೋಶಿಯವರ ಕುರಿತು ಶ್ರೀ.ಶ ದಿಂಗಾಲೇಶ್ವರ ಸ್ವಾಮಿಗಳ ವಿವಾದಾಸ್ಪದ ವೈಯಕ್ತಿಕ ಹೇಳಿಕೆಗೂ ಧಾರವಾಡ ಪ್ರತಿಷ್ಠಿತ ಶ್ರೀ ಕ್ಷೇತ್ರ ಮುರುಘಾಮಠಕ್ಕೆ ಯಾವುದೇ ಸಂಬಂಧವಿಲ್ಲ ಹಾಗೂ ನಮಗೂ ಒಮ್ಮತವಿಲ್ಲವೆಂದು ಧಾರವಾಡ ಶ್ರೀ ಕ್ಷೇತ್ರ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಅಧೀಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕಾಗಿ ಕಾಯುವ ಬದಲು ಸ್ವ ಉದ್ಯೋಗವನ್ನು ಆರಂಭಿಸಿ:ಡಾ.ಎಚ್.ಎನ್. ಹರೀಶ್ ಕರೆ

    ಪ್ರತಿಷ್ಠಿತ ಶ್ರೀ ಕ್ಷೇತ್ರ ಮುರುಘಾಮಠ ಲೋಕಕಲ್ಯಾಣಾರ್ಥ ಸ್ಥಾಪನೆಯಾಗಿದ್ದು, ಮಠದ ಹಿರಿಯ ಶ್ರೀಗಳು ಮದಥಣಿ ಶ್ರೀಗಳು ಮುರುಘಾರಾಜೇಂದ್ರ ಶ್ರೀಗಳ ಮೃತ್ಯುಂಜಯ ಅಪ್ಪಗೊಳ, ಮಹಾಂತ ಅಪ್ಪಗೊಳ ಹಾಗೂ ಹಲವಾರು ಧೀಮಂತರ ಹಾಗೂ ಭಕ್ತಾಧಿಗಳ ಪರಿಶ್ರಮದ ಫಲದಿಂದ ಸ್ಥಾಪಿತ ಹಾಗೂ ಸರ್ವಸಮಾಜದ ಭಕ್ತರು ನಡೆದುಕೊಳ್ಳುವ ಪವಿತ್ರ ಕ್ಷೇತ್ರವಿದು.

    ಶ್ರೀ ಕ್ಷೇತ್ರ ವಿದ್ಯಾದಾನ ದಾಸೋಹಕ್ಕೆ ಹಾಗೂ ಸರ್ವಸಮಾಜದ ಏಳಿಗೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ವೀರಶೈವ ಲಿಂಗಾಯತ ಮಠವಾಗಿದ್ದರು ಸಹ ಸರ್ವಸಮಾಜದ ಭಕ್ತರು ಗದ್ದುಗೆಯ ಆರಾಧಕರಿದ್ದು ಶ್ರೀ ಕ್ಷೇತ್ರ ಮುರುಘಾಮಠ ಯಾವದೇ ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ ಹಾಗೂ ಎಂದು ರಾಜಕೀಯ ವಿಷಯಗಳಲ್ಲಿ ಭಾಗವಹಿಸುವದಿಲ್ಲ ಹಾಗೂ ಯಾವುದೇ ಅಭ್ಯರ್ಥಿ ಆಯ್ಕೆ ಆಯಾ ಪಕ್ಷದ ವರಿಷ್ಠರು ಹಾಗೂ ಅವರ ಪಕ್ಷದ ತೀರ್ಮಾನ ಇದಕ್ಕೆ ಮಠಮಾನ್ಯಗಳಿಗೂ ಯಾವದೇ ಸಂಬಂಧವಿರುವದಿಲ್ಲ.

    ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿ ಸ್ಪರ್ಧೆ

    ಇಂತರ ಸಂದರ್ಭದಲ್ಲಿ ನಿನ್ನೆ ದಿನಾಂಕ: 27/03/2024 ರಂದು ದಿಂಗಾಲೇಶ್ವರ ಸ್ವಾಮಿಗಳು ಮೂರುಸಾವಿರ ಮಠದಲ್ಲಿ ಸ್ವಾಮಿಗಳ ಸಭೆ ಅಂತ ಮಠಕ್ಕೆ ಕರೆದು ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಹ್ಲಾದ ಜೋಶಿಯವರ ಬದಲಾವಣೆ ಕುರಿತು ನೀಡಿದ ಹೇಳಿಕೆ ಶ್ರೀ ದಿಂಗಾಲೇಶ್ವರ ಸ್ವಾಮಿಗಳ ವೈಯಕ್ತಿಕ ಹೇಳಿಕೆ ಆಗಿದ್ದು, ಹಾಗೂ ಹೇಳಿಕೆಯ ವಿವಾದಾಸ್ಪದವಾಗಿದ್ದು ಸದರಿ ಹೇಳಿಕೆಗೂ ನಮಗೂ ಹಾಗೂ ಶ್ರೀ ಕ್ಷೇತ್ರ ಮುರುಘಾಮಠಕ್ಕೆ ಯಾವುದೇ ಸಂಬಂಧವಿರುವದಿಲ್ಲ. ಇಂತಹ ಹೇಳಿಕೆಗಳು ಅವರವರ ವೈಯಕ್ತಿಕ ಹೇಳಿಕೆ ಎಂದು ಮುರುಘಾಮಠದ ಶ್ರೀಗಳು ಮಲ್ಲಿಕಾರ್ಜುನ ಸ್ವಾಮಿಗಳಾದ ನಾನು ಪತ್ರಿಕಾ ಪ್ರಕಟಣೆ ನೀಡಿ ಸ್ಪಷ್ಟಿಕರಣ ನೀಡುತ್ತಿದ್ದೇನೆ ಎಂದು ವಿವಾದಕ್ಕೂ ತಮಗೂ ಸಂಬಂಧವಿಲ್ಲಾ ಎಂದಿದ್ದಾರೆ.

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts