More

    ಸರ್ಕಾರಿ ಉದ್ಯೋಗಕ್ಕಾಗಿ ಕಾಯುವ ಬದಲು ಸ್ವ ಉದ್ಯೋಗವನ್ನು ಆರಂಭಿಸಿ:ಡಾ.ಎಚ್.ಎನ್. ಹರೀಶ್ ಕರೆ

    ಹಾಸನ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ನಂತರ ಸರ್ಕಾರಿ ಉದ್ಯೋಗಕ್ಕಾಗಿ ಕಾಯುವ ಬದಲು ಸ್ವ ಉದ್ಯೋಗವನ್ನು ಆರಂಭಿಸಿ ತಮ್ಮ ಬದುಕು ಕಟ್ಟಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಎನ್. ಹರೀಶ್ ಅಭಿಪ್ರಾಯಪಟ್ಟರು.
    ನಗರದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ ಘಟಕದ ವತಿಯಿಂದ ಗುರುವಾರ ನಡೆದ ನಿರ್ವಹಣಾಶಾಸ್ತ್ರ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರಿಗೂ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಸ್ವ ಉದ್ಯೋಗ ಪಡೆದುಕೊಳ್ಳಲು ಹಲವು ಮಾರ್ಗಗಳು ಇವೆ. ಸರ್ಕಾರ ಯುವ ಜನಾಂಗಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಕಡಿಮೆ ಬಡ್ಡಿ ದರದಲ್ಲಿ ಸಾಲ ಯೋಜನೆಗಳು ಹೀಗೆ ಹಲವು ಯೋಜನೆಗಳು ಇದ್ದು, ಅವುಗಳ ಬಗ್ಗೆ ಮಾಹಿತಿ ಪಡೆದು ಅನುಕೂಲ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
    ನಿರ್ವಹಣಾಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ನಿಂತನೀರಾಗಬಾರದು, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಹೆಚ್ಚಿನ ಜ್ಞಾನ ಪಡೆದರೆ ಜೀವನದಲ್ಲಿ ಹಲವು ಸಾಧನೆಗಳನ್ನು ಮಾಡಬಹುದು. ಯುವಕರು ಸಾಧನೆಯ ಹಾದಿಯಲ್ಲಿ ಸಾಗಬೇಕಾದರೆ ಗುರುಗಳೊಂದಿಗೆ ಉತ್ತಮ ಬಾಂಧ್ಯವ ಇಟ್ಟುಕೊಳ್ಳಬೇಕು. ಗುರುಗಳು ನೀಡುವ ಮಾರ್ಗದರ್ಶನಗಳನ್ನು ಪಾಲನೆ ಮಾಡುವ ಮೂಲಕ ತಮ್ಮ ಪಠ್ಯದ ಶಿಕ್ಷಣದೊಂದಿಗೆ ಜೀವನಕ್ಕೆ ಬೇಕಾಗುವ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಅಧ್ಯಯನ, ಕಠಿಣ ಪರಿಶ್ರಮ ಮತ್ತು ನಿರ್ದಿಷ್ಟ ಗುರಿ ಇದ್ದಾಗ ಸರ್ಕಾರಿ ಕೆಲಸಗಳನ್ನು ಗಿಟ್ಟಿಸಿಕೊಳ್ಳಬಹುದು ಎಂದರು.
    ಇಂದಿನ ಯುವ ಜನತೆ ವಿದ್ಯಾಭ್ಯಾಸದಲ್ಲಿ ಹಿಂದುಳಿಯಲು ಸಾಮಾಜಿಕ ಮಾಧ್ಯಮಗಳು ಮುಖ್ಯ ಕಾರಣವಾಗಿವೆ. ಮೊಬೈಲ್‌ನಲ್ಲಿ ಕಳೆಯುವ ಸಮಯವನ್ನು ತಮ್ಮ ಓದಿಗೆ ಮೀಸಲಿಟ್ಟಾಗ ಮಾತ್ರ ಸಾಧನೆಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ. ಯುವಕರು ವಿದ್ಯಾಭ್ಯಾಸದಲ್ಲಿ ಇಂದು ಕುಂಠಿತರಾಗಲು ಸಾಮಾಜಿಕ ಮಾಧ್ಯಮಗಳು ಕಾರಣವಾಗಿದೆ. ಅಧ್ಯಯನ ಮಾಡಬೇಕಾದರೆ ಯುವಕರು ಒಂದು ನೀಲ ನಕ್ಷೆಯನ್ನು ಸಿದ್ದ ಪಡಿಸಿಕೊಂಡು ಶಿಕ್ಷಣ ಮಾಡಬೇಕು. ಯುವತಿಯರು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ, ಆದರೇ ತಮ್ಮ ಸಮಸ್ಯೆಗಳನ್ನು ಎದುರಿಸುವ ಮೂಲಕ ಸಾಧನೆ ಮಾಡಬೇಕು ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ತಮ್ಮ ವಿದ್ಯಾಬ್ಯಾಸದ ಕಷ್ಟಗಳ ಜೊತೆಗೆ ಸಂತೋಷದ ವಿಷಯಗಳನ್ನು ಹಂಚಿಕೊಳ್ಳುತ್ತ ಜ್ಞಾನದ ಫಿಟ್ನೆಸ್ ಇದ್ದರೆ ಎಲ್ಲಾ ತರಹದ ಅವಕಾಶಗಳು ತೆರೆದಿರುತ್ತವೆ. ಆನ್ಯರ ಮೆಚ್ಚಿಗೆಗೆ ಯಾವ ಒಳ್ಳೆ ಕೆಲಸ ಮಾಡುವುದು ಬೇಕಾಗಿಲ್ಲ ನಿಮಗಿಷ್ಟವಾದ ಕೆಲಸ ಮಾಡಿದರೆ ಸಾಕು. ನಾವು ಸುಖವಾಗಿ ಊಟ ಮಾಡಿದರೆ ಸಾಕಾಗುವುದಿಲ್ಲ ನಾವು ಸುಖವಾಗಿರುವುದರ ಜೊತೆ ನಮ್ಮ ಸಂಬಂಧಗಳನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಯುವತಿಯರು ವಿದ್ಯಾಭ್ಯಾಸದ ಅವಧಿಯಲ್ಲಿ ಯಾವುದೇ ಅಡ್ಡದಾರಿಯನ್ನು ಹಿಡಿಯದರೆ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಪಿ. ನಂದನ್, ಐ.ಕ್ಯೂ.ಎ.ಸಿ. ಸಂಚಾಲಕ ಜಿ.ಆರ್. ಮೋಹನ್, ಉಪನ್ಯಾಸಕರಾದ ನವೀನ್ ಕೆ.ಸಿ., ಬಿಂದು, ಅತೀತ್, ಸ್ವಪ್ನ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts