More

    ಧನ್ವಂತರಿ|ಕೈಗಳು ಶುದ್ಧವಾಗಿರಲಿ

    ಧನ್ವಂತರಿ|ಕೈಗಳು ಶುದ್ಧವಾಗಿರಲಿಸ್ವಚ್ಛತೆಯ ಮಹತ್ವ ಯಾರಿಗೆ ತಿಳಿದಿಲ್ಲ ಹೇಳಿ? ಹಾಗೆ ನೋಡಿದರೆ ನೈರ್ಮಲ್ಯ ಎಂಬುದು ಪ್ರಕೃತಿದತ್ತವಾದದ್ದು. ಕೊಳೆ ಎಂಬುದು ಮಾನವನಿರ್ವಿುತ ವಿಕೃತಿ! ನಿಸರ್ಗದಲ್ಲಿ ಎಲ್ಲವೂ ಆದಿಯಿಂದಲೂ ರಮಣೀಯವಾಗಿಯೇ ಇರುತ್ತವೆ. ಕೋಟ್ಯಂತರ ಜೀವಿಗಳ ವಾಸಸ್ಥಾನ ಆಗಿರುವುದರಿಂದ ಈ ಸಹಜ ಸುಂದರ ಭೂಮಿ ನಿತ್ಯನಿರಂತರ ಮಲಿನವಾಗುತ್ತ ಕಾಲವು ಸಾಗುತ್ತದೆ. ಕಲುಷಿತಗೊಂಡ ತನ್ನನ್ನು ಮತ್ತೆ ಶುಭ್ರಗೊಳಿಸುವ ಕಲೆಯೂ ಜಗತ್ತಿಗಿದೆ. ಅದಕ್ಕಾಗಿಯೇ ಕಾಲಕಾಲಕ್ಕೆ ಮಳೆ ಬಂದು ಇಳೆಯನ್ನು ತೊಳೆಯುತ್ತದೆ! ಮಿತಿಮೀರಿ ವಿಪರೀತ ದುರ್ಬಳಕೆ ಆದಾಗ ಭೂಕಂಪದಿಂದಲೋ ಅಥವಾ ಜಲಪ್ರವಾಹದಿಂದಲೋ ಒಮ್ಮೊಮ್ಮೆ ಮೈಕೊಡವಿಕೊಳ್ಳುತ್ತದೆ! ಕೋವಿಡ್-19 ಸೋಂಕು ಬಂದ ಈ ಸಂದರ್ಭವೂ ಜಗದ ಜನತೆಗೆ ಅದು ನೈರ್ಮಲ್ಯದ ಮಹತ್ವಪೂರ್ಣ, ಅತಿ ದೊಡ್ಡ ಪಾಠವನ್ನು ಕಲಿಸುತ್ತಿರುವುದೂ ನಿಜವೆಂದು ಒಪ್ಪಲೇಬೇಕಾಗಿದೆ.

    ಧನ್ವಂತರಿ|ಕೈಗಳು ಶುದ್ಧವಾಗಿರಲಿಮನೆಯಿಂದ ಹೊರಗೆ ನಡೆಯುವಾಗ ಮಾಸ್ಕ್ ಧರಿಸಲೇಬೇಕೆಂದು ಸರ್ಕಾರಗಳು ಹೇಳುತ್ತಿವೆ. ತನಗೆ ಕೋವಿಡ್-19 ಇದೆಯೆಂದು ಗೊತ್ತಿದ್ದೋ ಗೊತ್ತಿಲ್ಲದೆಯೋ ಇರುವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಕಸ್ಮಾತ್ತಾಗಿ ನಮಗೆ ಅತಿ ಸಮೀಪ ಬಂದು ಪಕ್ಕದಲ್ಲೇ ನಿಂತು ಕೆಮ್ಮಿದರೆ ಅಥವಾ ಸೀನಿದರೆ, ನಾವು ಆ ದೂಷಿತ ಹನಿಗಳನ್ನು ಶ್ವಾಸದ ಮೂಲಕ ದೇಹದೊಳಗೆ ಸೆಳೆದುಕೊಂಡರೆ ರೋಗ ಉದ್ಭವವಾಗುವ ಸಾಧ್ಯತೆ ಬಹುಪಾಲು ಇರುವುದರಿಂದ ಮುಖಕವಚ ರಕ್ಷಿಸುತ್ತದೆ ಎಂಬುದು ಸರಿಯಾದ ತರ್ಕ.

    ಇದನ್ನೂ ಓದಿ: ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!

    ಸಾಮಾನ್ಯವಾಗಿ ಮುಖವನ್ನು, ಕಣ್ಣು, ಮೂಗು, ಬಾಯಿಗಳನ್ನು ಕೈಗಳಿಂದ ಆಗಾಗ ಮುಟ್ಟುತ್ತಿರುವುದು ಮನುಷ್ಯರ ಸಹಜ ಸ್ವಭಾವ. ಕೋವಿಡ್-19 ನಮ್ಮ ದೇಹಕ್ಕೆ ಹರಡಲು ಇರುವ ಅತಿ ದೊಡ್ಡ ಮಾರ್ಗ ಇದುವೇ. ನಮ್ಮ ಕೈಗಳು ಸುಮ್ಮನಿರುವುದಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಒಳಗೆ ಸುಮ್ಮನೆ ಕುಳಿತುಕೊಳ್ಳಿ. ಪಕ್ಕದಲ್ಲಿ ನಡೆದುಹೋಗುತ್ತಿರುವ ಕೆಲವು ಜನರು ನಿಮ್ಮ ವಾಹನವನ್ನು ಅಲ್ಲಲ್ಲಿ ಮುಟ್ಟುತ್ತ ಮುನ್ನಡೆಯುತ್ತಾರೆ! ಇದು ಕೈಗಳ ಅಭ್ಯಾಸಬಲ! ಹೀಗೆ ಸುಮ್ಮನಿರದ ಈ ಕೈಗಳು ವೈರಾಣುವಿನ ಸಂಪರ್ಕ ಹೊಂದಿದ್ದಾಗ ಮುಖ ಮುಟ್ಟಿದರೆ ಏನು ಗತಿ? ಇದನ್ನು ತಡೆಯಲೂ ಮುಖಕವಚ ಅನುಕೂಲ ಮಾಡುತ್ತದೆ ಎಂಬುದನ್ನು ನಾವರಿಯಬೇಕು.

    ಯಾವುದೇ ಕಾರಣಕ್ಕಾಗಿ ಮನೆಯಿಂದ ಹೊರಗೆ ಹೋಗಿ ಕೆಲಸಗಳನ್ನು ಪೂರೈಸಿ ಹಿಂತಿರುಗಿದಾಗ ಮನೆಯಲ್ಲಿರುವ ಯಾವುದೇ ವಸ್ತುಗಳನ್ನು ಮುಟ್ಟದೆ ನೇರವಾಗಿ ಸ್ನಾನದ ಕೋಣೆಗೆ ತೆರಳಬೇಕು. ಮಾರ್ಜಕ ಹಾಕಿಟ್ಟ ಬಿಸಿಯಾದ ನೀರಿನಲ್ಲಿ ಬಟ್ಟೆಗಳನ್ನೆಲ್ಲ ಅರ್ಧಗಂಟೆ ತಾವೇ ಮುಳುಗಿಸಿಟ್ಟರೆ ವೈರಾಣು ಅದರಲ್ಲಿ ಉಳಿಯದು. ಕೂಡಲೇ ಸರ್ವಾಂಗ ಸ್ನಾನ ಮಾಡಬೇಕು. ಆಮೇಲೆ ಮನೆಯಲ್ಲಿ ಸುತ್ತಾಡಿದರೆ ಅಭ್ಯಂತರವಿಲ್ಲ. ತರಕಾರಿಗಳನ್ನು, ಹಾಲಿನ ಪ್ಯಾಕೆಟ್​ಗಳನ್ನು ತಂದೊಡನೆ ತೊಳೆದು ಕೈತೊಳೆದುಕೊಳ್ಳಬೇಕು. ದಿನಸಿ, ಆಹಾರವಸ್ತುಗಳು ಸೇರಿ ಯಾವುದನ್ನೇ ಮನೆಗೆ ತಂದರೂ ಬಾಗಿಲ ಬುಡದಲ್ಲಿ ಎರಡು ದಿನ ಹಾಗೆಯೇ ಬಿಡಿ. ಮತ್ತೆ ಬಳಸಿ. ಅಷ್ಟಕ್ಕೂ ಈ ವೈರಾಣು ಮನೆಯಲ್ಲೇ ಉದ್ಭವವಾಗುವುದಿಲ್ಲ ತಾನೇ? ಕೈ ಶುದ್ಧವಾಗಿದ್ದರೆ ಭ್ರಷ್ಟಾಚಾರವೂ ಇರುವುದಿಲ್ಲ, ಭ್ರಷ್ಟ ರೋಗವೂ ಹರಡುವುದಿಲ್ಲ!

    ಧನ್ವಂತರಿ|ಕೈಗಳು ಶುದ್ಧವಾಗಿರಲಿ

    ಚೀನಾದ ಟಿಕ್​ಟಾಕ್ ಜಾಗವನ್ನು ನಮ್ಮ ಬೆಂಗಳೂರಿನ ಚಿಂಗಾರಿ ತುಂಬಿತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts