More

    ಧನುಷ್-ರಶ್ಮಿಕಾ ನಟನೆಯ D51 ಫಸ್ಟ್​ ಲುಕ್​ ರಿಲೀಸ್​

    ಚೆನ್ನೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ಧಾರೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲಿ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ ಸದ್ಯ ಧನುಷ್​ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.

    ಕೆಲ ದಿನಗಳ ಹಿಂದೆ ಸಿನಿಮಾ ಶೂಟಿಂಗ್​ನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಆದರೆ, ಚಿತ್ರದ ಹೆಸರು ಮಾತ್ರ ಈವರೆಗೆ ರಿವೀಲ್​ ಆಗಿರಲಿಲ್ಲ. ಇದೀಗ ಮಹಾಶಿವರಾತ್ರಿ ಪ್ರಯುಕ್ತ ಚಿತ್ರದ ಹೆಸರು ಹಾಗೂ ಫಸ್ಟ್​ ಲುಕ್​ ರಿವೀಲ್​ ಆಗಿದ್ದು ಅಭಿಮಾನಿಗಳ ನಿರೀಕ್ಷೆಯನ್ನು ದುಟಪಟಟ್ಟುಗೊಳಿಸಿದೆ.

    ಧನುಶ್-ರಶ್ಮಿಕಾ ಒಟ್ಟಿಗೆ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಕುಬೇರ ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ಧನುಶ್​ ಭಿಕ್ಷುಕನ ಪಾತ್ರದಲ್ಲಿ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣ ಈ ಸಿನಿಮಾದ ನಾಯಕಿ. ಇತ್ತೀಚೆಗಷ್ಟೆ ಈ ಸಿನಿಮಾದ ಚಿತ್ರೀಕರಣ ತಿರುಪತಿಯಲ್ಲಿ ನಡೆಯಿತು. ಸಿನಿಮಾದ ಟೈಟಲ್ ಟೀಸರ್ ಸಹ ಬಿಡುಗಡೆ ಆಗಿದ್ದು, ಶಿವ ಭಿಕ್ಷೆ ಬೇಡುತ್ತಿರುವ ಚಿತ್ರದ ಮುಂದೆ ಧನುಶ್ ನಿಂತಿರುವ ದೃಶ್ಯವನ್ನು ಫಸ್ಟ್​ ಲುಕ್​ನಲ್ಲಿ ತೋರಿಸಲಾಗಿದೆ.

    ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುವ ಡ್ರಗ್​ ಡೀಲರ್​ಗಳನ್ನು ಪೊಲೀಸರು ಏಕೆ ಬಂಧಿಸುತ್ತಿಲ್ಲ; ವಿದ್ಯಾರ್ಥಿಯ ಪ್ರಶ್ನೆ ವೈರಲ್

    ಸಿನಿಮಾದಲ್ಲಿ ಧನುಶ್ ಹಾಗೂ ರಶ್ಮಿಕಾ ಮಾತ್ರವೇ ಅಲ್ಲದೆ ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಸಹ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡುತ್ತಿದ್ದು, ಚಿತ್ರತಂಡಕ್ಕೆ ತುಸು ಪ್ರತಿಭಟನೆಯ ಬಿಸಿ ಸಹ ತಾಕಿತ್ತು.

    ತಿರುಪತಿಯಲ್ಲಿ ಚಿತ್ರೀಕರಣದಿಂದಾಗಿ ಭಕ್ತಾಧಿಗಳಿಗೆ ಸಮಸ್ಯೆ ಆದ ಕಾರಣ ಹಲವರು ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದಲ್ಲದೆ ರಶ್ಮಿಕಾ ಹಾಗೂ ಧನುಶ್ ನಟಿಸುತ್ತಿರುವ ದೃಶ್ಯದ ವಿಡಿಯೋ ಸಹ ಲೀಕ್ ಆಗಿತ್ತು. ಫಸ್ಟ್​ ಲುಕ್​ ಹಾಗೂ ಟೈಟಲ್​ನಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ಕುಬೇರ ಚಿತ್ರದ ರಿಲೀಸ್​ ಡೇಟ್​ ಇನ್ನಷ್ಟೇ ತಿಳಿಯಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts