More

    ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುವ ಡ್ರಗ್​ ಡೀಲರ್​ಗಳನ್ನು ಪೊಲೀಸರು ಏಕೆ ಬಂಧಿಸುತ್ತಿಲ್ಲ; ವಿದ್ಯಾರ್ಥಿಯ ಪ್ರಶ್ನೆ ವೈರಲ್

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವ ಸಮೂಹವು ಮೊಬೈಲ್​ ಗೀಳಿನ ಜೊತೆಗೆ ಮಾದಕವ್ಯಸನಕ್ಕೆ ಹೆಚ್ಚು ಬಲಿಯಾಗುತ್ತಿದ್ದು, ಇದಕ್ಕೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಅನೇಕ ರೀತಿಯ ಕ್ರಮ ಕೈಗೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹರಿಯಾಣ ಪೊಲೀಸರು ವಿಶೇಷ ಕಾರ್ಯಕ್ರಮ ಒಂದನ್ನು ಆಯೋಜಿಸಿದ್ದರು. ಈ ವೇಳೆ ವಿದ್ಯಾರ್ಥಿ ಒಬ್ಬ ಕೇಳಿದ ಪ್ರಶ್ನೆ ಅಧಿಕಾರಿಗಳ್ನು ನಿಬ್ಬೆರಗಾಗಿಸಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    ಕಳೆದ ಕೆಲ ದಿನಗಳ ಹಿಂದೆ ಹರಿಯಾಣದ ಸೋನಿಪತ್​ನಲ್ಲಿ ಪೊಲೀಸರು ಡ್ರಗ್ಸ್​ ವಿರೋಧಿ ಅಂದೋಲವನ್ನು ನಡೆಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಲೇಜು ವಿದ್ಯಾರ್ಥಿ ಒಬ್ಬ ಕೇಳಿರುವ ಪ್ರಶ್ನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಮಹಾಶಿವರಾತ್ರಿಯಂದೇ ಧರ್ಮಸ್ಥಳದ ಹಿರಿಯ ಆನೆ ಲತಾ ಸಾವು

    ವೈರಲ್​ ಆಗಿರುವ ವಿಡಿಯೋದಲ್ಲಿ ಇತ್ತೀಚಿನ ದಿನಗಳಲ್ಲಿ ಪೊಲೀಸರು ಮಾದಕದ್ರವ್ಯ ವಿರುದ್ಧದ ದೊಡ್ಡ ಕಾರ್ಯಕ್ರಮವನ್ನು ನೋಡಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇರಿದಂತೆ ಅನೇಕ ಮಾದಕ ವಸ್ತುಗಳು ಅಂಗಡಿಯಲ್ಲಿ ಮಿಠಾಯಿ ಅಥವಾ ಲಾಲಿಪಾಪ್​ನಷ್ಟು ಸುಲಭವಾಗಿ ದೊರೆಯುತ್ತಿದೆ. ಸಾಮಾನ್ಯ ಜನರಿಗೆ ಒಬ್ಬ ಡ್ರಗ್​ ಡೀಲರ್​ ಪತ್ತೆ ಹಚ್ಚುವುದು ಅಷ್ಟು ಸುಲಭದ ಕೆಲಸ ಆಗುತ್ತದೆ. ಆದರೆ, ಪೊಲೀಸರಿಗೆ ಮಾತ್ರ ಅವರನ್ನು ಯಾಕೆ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಪೊಲೀಸ್​ ಠಾಣೆಯ ಮುಂಭಾಗವೇ ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಆದರೆ, ಇದರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾನೆ.

    ವಿದ್ಯಾರ್ಥಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆತ ಪ್ರಶ್ನಿಸಿರುವ ರೀತಿಯನ್ನು ಹಲವರು ಪ್ರಶಂಶಿಸಿದ್ದಾರೆ. ಕೊನೆಗೂಇದರ ಬಗ್ಗೆ ಯಾರೋ ಧ್ವ ನಿ ಎತ್ತಿದ್ದರು ಎಂದು ಹೇಳಿದರೆ. ಇನ್ನೂ ಕೆಲವರು ಇಂತಹ ವಿದ್ಯಾರ್ಥಿಗಳಿಗೆ ಪೊಲೀಸರ ಬಳಿ ಹೇಗೆ ಮಾತನಾಡಬೇಕು ಎಂಬುದನ್ನು ಕಾಲೇಜುಗಳಲ್ಲಿ ಹೇಳಿಕೊಟ್ಟಿಲ್ಲ ಎಂದು ಕಾಣುತ್ತದೆ. ಒಂದು ವೇಳೆ ಆತ ಈ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ಕಂಡಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಅವರಿಗೆ ಸಹಾಯ ಮಾಡುತ್ತಿದ್ದ ಅದರ ಬದಲಾಗಿ ಬಹಿರಂಗ ವೇದಿಕೆಯಲ್ಲಿ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts