More

    ಐಪಿಎಲ್​​ ಆರಂಭಕ್ಕೂ ಮುನ್ನ ಗುಜರಾತ್​ ಟೈಟಾನ್ಸ್​ಗೆ ಮತ್ತೊಂದು ಶಾಕ್; ಟೂರ್ನಿಗೆ ಪ್ರಮುಖ ಆಟಗಾರ ಅಲಭ್ಯ

    ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭವಾಗುವುದಕ್ಕೆ ದಿನಗಣನೆ ಶುರುವಾಗಿದ್ದು, ಯಾಕೋ ಗುಜರಾತ್​ ಟೈಟಾನ್ಸ್​ ಪಾಲಿಗೆ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ. ನಾಯಕನಾಗಿದ್ದ ಹಾರ್ದಿಕ್​ ಫಾಂಡ್ಯ ಫ್ರಾಂಚೈಸಿ ತೊರೆದಿದ್ದು, ಸಾಲು ಸಾಲು ಆಟಗಾರರು ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

    ಇದೀಗ ಕೇಳಿ ಬಂದಿರುವ ಹೊಸ ಅಪ್ಡೇಟ್​ ಪ್ರಕಾರ ತಂಡದ ಪ್ರಮುಖ ಆಟಗಾರನೋರ್ವ ಕೆಲವು ಪಂದ್ಯಗಳನ್ನು ಆಡುವುದಿಲ್ಲ ಎಂದು ತಿಳಿದು ಬಂದಿದೆ. ಈ ಮೂಲಕ ಟೂರ್ನಿ ಆರಂಭಕ್ಕೂ ಮುನ್ನ ಗುಜರಾತ್​ ಟೈಟಾನ್ಸ್​ಗೆ ಮತ್ತೊಂದು ಹಿನ್ನಡೆಯಾಗಿದೆ.

    ಗಾಯದ ಸಮಸ್ಯೆಯಿಂದಾಗಿ ಅನುಭವಿ ಬೌಲರ್​ ಮೊಹಮ್ಮದ್​ ಶಮಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಸ್ಪಿನ್ನರ್​ ರಶೀದ್​ ಖಾನ್​ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಕೂಡ ಟೂರ್ನಿಯಲ್ಲಿ ಭಾಗಿಯಾಗುವುದು ಅನುಮಾನ ಎಂದು ಹೇಳಲಾಗಿದೆ. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗುಜರಾತ್​ ತಂಡದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಮ್ಯಾಥ್ಯೂ ವೇಡ್​ ಮೊದಲ ಕೆಲ ಪಂದ್ಯಗಳನ್ನು ಆಡುತ್ತಿಲ್ಲ ಎಂಬ ವಿಚಾರ ಕೇಳಿ ಬಂದಿದೆ.

    ಇದನ್ನೂ ಓದಿ: ರಸ್ತೆಯಲ್ಲಿ ನಮಾಜ್​ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿದ ಪೊಲೀಸ್​ ಅಧಿಕಾರಿ; ವಿಡಿಯೋ ವೈರಲ್

    ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ದೇಶೀಯ ಕ್ರಿಕೆಟ್​ ಟೂರ್ನಿ ಮೇಲೆ ಹೆಚ್ಚು ಗಮನ ಹರಿಸಿರುವ ವೇಡ್​ ಮಾರ್ಚ್​ 25ರಂದು ನಡೆಯುವ ಮುಂಬೈ ಹಾಗೂ ಗುಜರಾತ್​ ನಡುವಿನ ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ತಿಳಿದು ಬಂದಿದೆ. ಮಾರ್ಚ್ 21 ರಿಂದ ಮಾರ್ಚ್ 25ರ ನಡುವೆ ಆಸ್ಟ್ರೇಲಿಯಾ ದೇಶೀಯ ಕ್ರಿಕೆಟ್​ ಟೂರ್ನಿಯ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಆಡುವ ಸಲುವಾಗಿ ಮ್ಯಾಥ್ಯೂ ವೇಡ್​ ಗುಜರಾತ್​ ಟೈಟಾನ್ಸ್​ನ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.

    17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಲೀಗ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ಹಾಗೂ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳು ಈ ಪಂದ್ಯ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts