More

    ಸಮಸ್ಯೆ ಆಲಿಸಿ ಅಭಿವೃದ್ಧಿ ಕೈಗೊಳ್ಳುವೆ: ಮಧು ಬಂಗಾರಪ್ಪ

    ಸೊರಬ: ಜನರ ಮನೆ ಬಾಗಿಲಿಗೆ ಮುಖಂಡರು ತೆರಳಿ ಸಮಸ್ಯೆಗಳನ್ನು ಆಲಿಸಿ ನನ್ನ ಗಮನಕ್ಕೆ ತಂದಾಗ ಆ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
    ಭಾನುವಾರ ತಾಲೂಕಿನ ನೆಗವಾಡಿ ಗ್ರಾಮದಲ್ಲಿ ಅಂಗನವಾಡಿ ಹಾಗೂ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸವಿಟ್ಟು ಶಿಕ್ಷಣ ಇಲಾಖೆ ಖಾತೆ ನೀಡಿದ್ದು ಇದನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವ ಬಗ್ಗೆ ಆತ್ಮತೃಪ್ತಿ ಇದೆ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ನೀಡಿ ಕಾಂಗ್ರೆಸ್ ಜನಮನ ಗೆದ್ದಿದೆ ಎಂದರು.
    ಸೊರಬ, ಆನವಟ್ಟಿ, ಶಿರಾಳಕೊಪ್ಪ ಪಟ್ಟಣ ಸೇರಿ ಸೊರಬ ತಾಲೂಕಿನ ೩೫೧ ಗ್ರಾಮಗಳಿಗೆ 630 ಕೋಟಿ ರೂ. ಅನುದಾನದಲ್ಲಿ ಕುಡಿಯುವ ನೀರು ಒದಗಿಸಲಾಗುವುದು. ಹಿಂದೆ ಶಾಸಕನಾಗಿದ್ದಾಗಲೇ ಈ ಬಗ್ಗೆ ಚಿಂತಿಸಿದ್ದೆ. ಆದರೆ ಅಽಕಾರ ಕೈತಪ್ಪಿದ್ದರಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ 3 ವರ್ಷದೊಳಗೆ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಜತೆಗೆ 700 ಕೋಟಿ ರೂ. ಅನುದಾನದಲ್ಲಿ ೨೨ ಬ್ಯಾರೇಜ್‌ಗಳನ್ನು ನಿರ್ಮಿಸಿ ರೈತರಿಗೆ ನೀರಾವರಿ ಕಲ್ಪಿಸಲಾಗುವುದು. ಶಿವಮೊಗ್ಗ ಜಿಲ್ಲೆಗೆ ಹೆಚ್ಚುವರಿಯಾಗಿ 100 ಕೆಎಸ್‌ಆರ್‌ಟಿಸಿ ಬಸ್‌ಗಳ ಬೇಡಿಕೆ ಇಟ್ಟಿದ್ದು ಫೆಬ್ರವರಿಯಲ್ಲಿ 60ಕ್ಕೂ ಹೆಚ್ಚು ಬಸ್‌ಗಳು ಲಭ್ಯವಾಗಲಿವೆ. ಅದರಲ್ಲಿ ತಾಲೂಕಿಗೆ ಎಂಟ್ಹತ್ತು ಬಸ್‌ಗಳನ್ನು ಒದಗಿಸಲಾಗುವುದು ಎಂದರು.
    ತಾಪA ಮಾಜಿ ಅಧ್ಯಕ್ಷ ಜೈಶೀಲಪ್ಪ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಮಹಿಳಾ ಅಧ್ಯಕ್ಷೆ ವಿಶಾಲಾಕ್ಷಿ, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಕೆ.ಪಿ.ರುದ್ರೇಗೌಡ, ಜಿಪಂ ಮಾಜಿ ಸದಸ್ಯ ಸತೀಶ್ ಎಂ.ಅರ್ಜುನಪ್ಪ, ಪರಮೇಶ್, ಜಗದೇವಪ್ಪ, ರಂಗಪ್ಪ, ಶಿವಾನಂದ ಗೌಡ, ಆರ್.ಸಿ.ಪಾಟೀಲ್, ರುದ್ರಪ್ಪ ಕಡ್ಳೇರ್, ಶಿವಕುಮಾರ್, ಮೂಖಪ್ಪ, ಪುಟ್ಟಪ್ಪ ಗೌಡ, ದಯಾನಂದ ಗೌಡ, ವೆಂಕಟೇಶ್, ಟೀಕಪ್ಪ, ವಿಜೇಂದ್ರಸ್ವಾಮಿ, ಪ್ರವೀಣ್ ಹಿರೇಇಡಗೋಡು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts