More

    ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭ: ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವ ಆಪ್ ಆಸೆ ಜೀವಂತ

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8ಗಂಟೆಗೆ ಆರಂಭವಾಗಿದ್ದು, ಮೊದಲ ಹಂತದ ಟ್ರೆಂಡ್​ನಲ್ಲಿ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವ ಆಮ್ ಆದ್ಮಿ ಪಾರ್ಟಿ(ಆಪ್​)ಯ ಆಸೆ ಜೀವಂತವಾಗಿದೆ. ಚುನಾವಣೋತ್ತರ ಸಮೀಕ್ಷೆಗಳೂ ಇದನ್ನೇ ಹೇಳಿದ್ದವಾದರೂ, ಬಿಜೆಪಿ ಪಾಳಯ ಸಮೀಕ್ಷೆಗಳು ಬುಡಮೇಲಾಗುವ ನಿರೀಕ್ಷೆಯಲ್ಲಿವೆ.

    ವಿಧಾನಸಭೆಯ 70 ಕ್ಷೇತ್ರಗಳ ಮತ ಎಣಕೆ 11 ಜಿಲ್ಲೆಗಳ ಒಟ್ಟು 21 ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ನಡುವೆ ನಡೆಯುತ್ತಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆದು, ಬಳಿಕ ಇವಿಎಂ ಮತ ಎಣಿಕೆ ಶುರುವಾಗಿದೆ. ಚುನಾವಣೆ ನೇರವಾಗಿ ಆಮ್​ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಡುವಿನ ಹಣಾಹಣಿಯಾಗಿ ಬಿಂಬಿಸಲ್ಪಟ್ಟಿದೆ. ಕಣದಲ್ಲಿ 672 ಅಭ್ಯರ್ಥಿಗಳಿದ್ದು, ಈ ಪೈಕಿ 593 ಪುರುಷರು, 79 ಮಹಿಳೆಯರಿದ್ದಾರೆ.

    ಶನಿವಾರ 13,780 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಶೇಕಡ 62.59 ಮತದಾನವಾಗಿತ್ತು. 2015ರಲ್ಲಿ ಶೇಕಡ 67.47 ಮತದಾನ ಪ್ರಮಾಣವಿತ್ತು. ಈ ಸಲ ಮತದಾರರ ಸಂಖ್ಯೆ 1.47ಕ್ಕೂ ಹೆಚ್ಚಿತ್ತು. ಈ ಪೈಕಿ 2.33 ಲಕ್ಷ ಮತದಾರರು 18-19ರ ವಯೋಮಾನದವರಾಗಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts