More

    ಪ್ರೇಮ ವಿವಾಹವಾಗಿ ಪತಿಯನ್ನು ಬಿಟ್ಟು ತವರಿಗೆ ಬಂದಿದ್ದವಳ ಪ್ರಾಣವೇ ಹೋಯ್ತು; ತಂದೆಯೇ ಕೊಂದಿದ್ದೇಕೆ?

    ಬೆಂಗಳೂರು: ಕುಟುಂಬದ ವಿರೋಧದ ನಡುವೆಯೇ ಪ್ರೇಮ ವಿವಾಹವಾಗಿ ಒಂದೇ ವರ್ಷಕ್ಕೆ ತವರು ಮನೆಗೆ ಬಂದಿದ್ದ ಪುತ್ರಿಯನ್ನು ಮಲಗಿದ್ದಾಗ ದೊಣ್ಣೆಯಿಂದ ಹಲ್ಲೆ ನಡೆಸಿ ತಂದೆಯೇ ಹತ್ಯೆ ಮಾಡಿದ್ದಾನೆ. ಕೊಡಿಗೇಹಳ್ಳಿಯ ಧನಲಕ್ಷ್ಮಿ ಲೇಔಟ್ ನಿವಾಸಿ ಆಶಾ (32) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಈಕೆಯ ತಂದೆ ರಮೇಶ್ (60) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಬಿಇಎಲ್ ನೌಕರನಾಗಿದ್ದ ರಮೇಶ್, 1 ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲ ಪುತ್ರಿ ಆಶಾ, ಬಿಎಸ್‌ಸಿ ಫ್ಯಾಷನ್ ಡಿಸೈನಿಂಗ್ ಮುಗಿಸಿದ್ದಳು. ಎರಡನೇ ಮಗಳು ವೈದ್ಯಕೀಯ ಪದವಿ ಮಾಡಿ ಗೌರಿಬಿದನೂರಿನಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದಾರೆ.

    ರಮೇಶ್, ತನ್ನ ಪತ್ನಿ ಜತೆಗೆ ನೆಲೆಸಿದ್ದರು. ಫ್ಯಾಷನ್ ಡಿಸೈನಿಂಗ್ ಮುಗಿಸಿದ್ದ ಆಶಾ, ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದಳು. 2020ರಲ್ಲಿ ನಾಗರಾಜು ಎಂಬಾತನನ್ನು ಪ್ರೀತಿಸಿ ಕುಟುಂಬದ ವಿರೋಧದ ನಡುವೆಯೇ ಪ್ರಿಯಕರನ ಜತೆಗೆ ವಿವಾಹವಾಗಿ ಪತಿ ಜತೆ ನೆಲೆಸಿದ್ದಳು.

    ಇದನ್ನೂ ಓದಿ: ತಾಯಿ ಮೇಲಿನ ಕೋಪಕ್ಕೆ ಮಗನನ್ನು ಕೆರೆಗೆ ತಳ್ಳಿ ಸಾಯಿಸಿದ ಪಾಪಿ!; ಇದು 2 ಸಂಸಾರದ ದುರಂತ ಕಥೆ

    ಕೌಟುಂಬಿಕ ಕಲಹದಿಂದ 2021ರಲ್ಲಿ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಆರೋಪದ ಮೇಲೆ ಪೊಲೀಸರಿಗೆ ದೂರು ಸಲ್ಲಿಸಿದ್ದಳು. ಈ ಕೇಸಿನಲ್ಲಿ ನಾಗರಾಜು ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಪುಡಿರೌಡಿಯ ಪುಂಡಾಟ; ಕಾಂಡಿಮೆಂಟ್ಸ್ ಸ್ಟೋರ್​ ನಡೆಸುತ್ತಿದ್ದಾತನ ಮೇಲೆ ಹಲ್ಲೆ

    ಮತ್ತೊಂದೆಡೆ ಪತಿಯನ್ನು ಬಿಟ್ಟು ತವರು ಮನೆ ಸೇರಿಕೊಂಡಿದ್ದ ಆಶಾ, ತಂದೆ-ತಾಯಿಗೆ ಕಿರುಕುಳ ನೀಡುತ್ತಿದ್ದಳು. ಜಗಳ ತೆಗೆದು ನೆಮ್ಮದಿ ಹಾಳು ಮಾಡುತ್ತಿದ್ದಳು. ಕೆಲವೊಂದು ಸಮಯದಲ್ಲಿ ಚಾಕುವಿನಿಂದ ಪಾಲಕರ ಮೇಲೆ ಹಲ್ಲೆ ಸಹ ನಡೆಸಿದ್ದಳು. ಮಾನಸಿಕವಾಗಿ ಕುಗ್ಗಿದ್ದಳು. ಇದರಿಂದ ಪಾಲಕರು ಸಾಕಷ್ಟು ರೋಸಿ ಹೋಗಿದ್ದರು.
    ಬುಧವಾರ ರಾತ್ರಿ 9.30ರಲ್ಲಿ ತಂದೆ-ತಾಯಿ ಮತ್ತು ಮಗಳು ಒಟ್ಟಿಗೆ ಊಟ ಮಾಡಿ ಮಲಗಿದ್ದರು. ರಾತ್ರಿ 11.30ಕ್ಕೆ ಆಶಾ ತನಗೆ ಮತ್ತೆ ಊಟ ಬೇಕೆಂದು ಕೇಳಿದ್ದಾಳೆ. ಅದಕ್ಕೆ ತಾಯಿ ಇಷ್ಟೊತ್ತಿನಲ್ಲಿ ಮಾಡಿಕೊಡಲು ಸಾಧ್ಯವಿಲ್ಲ ಎಂದು ಹೇಳಿ ಮಲಗಿದ್ದಾರೆ. ತಂದೆ ಅಡುಗೆ ಸಿದ್ಧಪಡಿಸಿ ಕೊಟ್ಟಿದ್ದಾರೆ. ಇದಾದ ಮೇಲೆ ಎಲ್ಲರೂ ಮಲಗಿದ್ದರು. ಈ ಸಮಯದಲ್ಲಿ ರಮೇಶ್, ದೊಣ್ಣೆಯಿಂದ ಬಲವಾಗಿ ಮಗಳ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

    ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲೂ ‘ಕಾಂತಾರ’ ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ

    ಮೃತ ಮಗಳ ಅಂತ್ಯಸಂಸ್ಕಾರ ಮಾಡಲು ಕಷ್ಟವಾಗುತ್ತೆ. ರಕ್ತ ಬಂದಿರಲಿಲ್ಲ ಎಂಬ ಕಾರಣಕ್ಕೆ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿ ರಮೇಶ್, ತಾನೇ ವಿಷಯ ತಿಳಿಸಿದ್ದ. ಮಗಳು ಮನೆಯಲ್ಲಿ ಬಿದ್ದು, ಸಾವಿಗೀಡಾಗಿದ್ದಾಳೆ. ಇದೊಂದು ಅಸಹಜ ಸಾವು ಎಂದು ಮಾಹಿತಿ ನೀಡಿದ್ದರು.

    ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಮಹಜರ್ ಸಮಯದಲ್ಲಿ ಅನುಮಾನಗಳು ಹುಟ್ಟಿಕೊಂಡಿವೆ. ಆಗ ರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts