More

    VIDEO| ಡ್ಯಾನ್ಸಿಂಗ್​ ಕಾರು ಸೀಜ್​: ಸ್ಕಾರ್ಪಿಯೋ ನೃತ್ಯ ನೋಡಿದ್ರೆ ಹುಬ್ಬೇರಿಸೋದು ಗ್ಯಾರೆಂಟಿ..!

    ಗಾಜಿಯಾಬಾದ್​: ಉತ್ತರ ಪ್ರದೇಶದ ಗಾಜಿಯಾಬಾದ್​ ಪೊಲೀಸರು ಮಂಗಳವಾರ ಡ್ಯಾನ್ಸಿಂಗ್​ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಕಾರಿನ ಮಾಲಿಕನಿಗೆ 41,500 ರೂಪಾಯಿ ದಂಡವನ್ನು ವಿಧಿಸಿದ್ದಾರೆ.

    ಕೆಲವು ಮಂದಿ ಜೋರಾಗಿ ಮ್ಯೂಸಿಕ್​ ಹಾಕಿಕೊಂಡು ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆಂದು ಸ್ಥಳೀಯರು ನೀಡಿದ ದೂರು ಸ್ವೀಕರಿಸಿದ ಬಳಿಕ ಪೊಲೀಸರು ತಕ್ಷಣ ಕಾರನ್ನು ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿ: ಒಬ್ಬಳನ್ನೇ ಪ್ರೀತಿಸಿದ ಬೆಸ್ಟ್​ ಫ್ರೆಂಡ್ಸ್​: ಲವ್​ ಸಕ್ಸಸ್​ ಆಗಿದ್ಹೇಗೆ? ಮೂವರ ಇಂಟೆಸ್ಟಿಂಗ್​ ಕಹಾನಿ ಇದು!

    ಕಾರಿನ ಮಾಲಿಕನನ್ನು ನಸುಮ್​ ಅಹ್ಮದ್​ ಎಂದು ಗುರುತಿಸಲಾಗಿದೆ. ರಸ್ತೆಯಲ್ಲೇ ತನ್ನ ಕಾರಿನಲ್ಲಿ ಜೋರಾಗಿ ಮ್ಯೂಸಿಕ್​ ಹಾಕಿಕೊಂಡು ಸಾಗುತ್ತಿದ್ದ. ವಿಶೇಷವಾಗಿ ತನ್ನ ಕಾರನ್ನು ಡ್ಯಾನ್ಸಿಂಗ್​ ಕಾರಿನ ರೀತಿ ಮಾರ್ಪಾಡು ಮಾಡಿಕೊಂಡು ಜೋರಾದ ಮ್ಯೂಸಿಕ್​ ಹಾಕಿಕೊಂಡು ಅಕ್ಕಪಕ್ಕದವರಿಗೆ ತೊಂದರೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಂದಹಾಗೆ ಎಸ್​ಯುವಿ ಕಾರಿನ ಮಾಲಿಕ ದೆಹಲಿಯ ನಿವಾಸಿ.

    ಈ ಬಗ್ಗೆ ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು ವಾಹನವನ್ನು ಸೀಜ್​ ಮಾಡಲಾಗಿದ್ದು, ದಂಡವನ್ನು ವಿಧಿಸಲಾಗಿದೆ. ಯಾರಾದರೂ ವಾಹನವನ್ನು ಸ್ಟಿಕರ್​ಗಳ ಮೂಲಕ ಮಾರ್ಪಾಡು ಮಾಡಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

    ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

    ಪತ್ನಿ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಾಲ್​ಗರ್ಲ್​ ಎಂದು ಪ್ರಚಾರ ಮಾಡಿದ ಪತಿ..!

    ಕಣ್ಣು ಬಿಟ್ಟುಕೊಂಡು ಸೀನಿದ್ರೆ ಏನಾಗಲಿದೆ ಎಂದು ನೋಡುವ ಕುತೂಹಲ: ಸೀನಿದವನಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts