More

    ಐಪಿಎಲ್ ಭಾಗ-2ಕ್ಕೆ ಪ್ರೇಕ್ಷಕರಿಗೆ ಪ್ರವೇಶ, ಆದರೆ ಷರತ್ತುಗಳು ಅನ್ವಯ!

    ನವದೆಹಲಿ: ಯುಎಇಯಲ್ಲಿ ನಿಗದಿಯಾಗಿರುವ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದ ಪಂದ್ಯಗಳನ್ನು ವೀಕ್ಷಿಸಲು ಶೇ. 50 ಪ್ರೇಕ್ಷಕರಿಗೆ ಪ್ರವೇಶ ಲಭಿಸುವ ಸಾಧ್ಯತೆ ಇದೆ. ಆದರೆ ಪಂದ್ಯಕ್ಕೆ ಹಾಜರಾಗುವ ಪ್ರೇಕ್ಷಕರಿಗೆ ಕೆಲ ಷರತ್ತುಗಳೂ ಅನ್ವಯಿಸಲಿವೆ.

    ಯುಎಇ ಸರ್ಕಾರದ ನಿಯಮದನ್ವಯ ಕ್ರೀಡಾಕೂಟಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹಾಜರಾಗುವ ಪ್ರೇಕ್ಷಕರು ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ. ಯುಎಇಯಲ್ಲಿ ಬಹುತೇಕ ಜನರಿಗೆ ಈಗಾಗಲೆ ಲಸಿಕೆ ಹಾಕಲಾಗಿದೆ. ಹೀಗಾಗಿ ಉಳಿದ 31 ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಶೇ. 50 ಪ್ರೇಕ್ಷಕರು ಹಾಜರಾಗುವಂತೆ ಮಾಡುವುದು ಬಿಸಿಸಿಐ ಮತ್ತು ಆತಿಥೇಯ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಕಷ್ಟವಾಗದು ಎನ್ನಲಾಗಿದೆ. 2020ರಲ್ಲಿ ಐಪಿಎಲ್ 13ನೇ ಆವೃತ್ತಿ ಸಂಪೂರ್ಣವಾಗಿ ಯುಎಇಯಲ್ಲೇ ನಡೆದಿದ್ದರೂ, ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿರಲಿಲ್ಲ.

    ಇದನ್ನೂ ಓದಿ: ಮೊಟ್ಟೆ ತಿಂದರೂ ವಿರಾಟ್ ಕೊಹ್ಲಿ ಸಸ್ಯಾಹಾರಿ! ನೆಟ್ಟಿಗರ ಅಚ್ಚರಿ

    ಅರಬ್ ರಾಷ್ಟ್ರಕ್ಕೆ ಗಂಗೂಲಿ ಟೀಮ್
    ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ತೆರಳಿ ಐಸಿಸಿ ಸಭೆಯಲ್ಲಿ ಮಂಗಳವಾರ ಖುದ್ದಾಗಿ ಹಾಜರಾಗುವರು ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಗಂಗೂಲಿ ಭಾರತದಿಂದಲೇ ವರ್ಚುವಲ್ ಮೂಲಕವೇ ಪಾಲ್ಗೊಳ್ಳಲಿದ್ದಾರೆ. ಆದರೆ ಬುಧವಾರ ಯುಎಇಗೆ ಪ್ರಯಾಣಿಸಲಿದ್ದು, ಐಪಿಎಲ್ ಆಯೋಜನೆಯ ಬಗ್ಗೆ ಆತಿಥೇಯ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಜತೆಗೆ ಚರ್ಚಿಸಲಿದ್ದಾರೆ. ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಖಜಾಂಚಿ ಅರುಣ್ ಧುಮಾಲ್, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಕೂಡ ತೆರಳಲಿದ್ದಾರೆ ಎನ್ನಲಾಗಿದೆ.

    2015ರ ಏಕದಿನ ವಿಶ್ವಕಪ್ ವಿಜೇತ ಆಸೀಸ್ ಕ್ರಿಕೆಟಿಗ ಈಗ ಕಾರ್ಪೆಂಟರ್!

    ಸೋಷಿಯಲ್ ಮೀಡಿಯಾದಲ್ಲಿ ಪುತ್ರಿಯ ಮುಖ ತೋರಿಸದ ಬಗ್ಗೆ ವಿರುಷ್ಕಾ ಸ್ಪಷ್ಟನೆ

    ಹೊಸ ಬೈಕ್​ನಲ್ಲಿ ಪೋಸ್​ ನೀಡಲು ಹೋಗಿ ನೆಟ್ಟಿಗರಿಂದ ಕಾಲೆಳೆಸಿಕೊಂಡ ವೇಗದ ಬೌಲರ್ ನವದೀಪ್​ ಸೈನಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts