More

    ಕೋವಿಡ್ ಲಸಿಕೆ ದ.ಕ.ಮುಂದೆ

    ಮಂಗಳೂರು: ಕೋವಿಡ್ ಲಸಿಕೆ ಪಡೆದವರ ಸಂಖ್ಯೆಯಲ್ಲಿ ದ.ಕ.ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಮೂರನೇ ಹಂತದ ಲಸಿಕೆ ಅಭಿಯಾನ ದಲ್ಲಿ ಮಾ.11ರವರೆಗೆ 60 ವರ್ಷ ಮೇಲ್ಪಟ್ಟ 7,346 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.
    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಿಪಿ, ಶುಗರ್ ಹೊಂದಿರುವ 45 ವರ್ಷ ಮೇಲ್ಪಟ್ಟ 59 ವರ್ಷದೊಳಗಿನ 913 ಮಂದಿ ಲಸಿಕೆ ಪಡೆದಿದ್ದಾರೆ. ಎಲ್ಲರೂ ನಿರ್ಭೀತಿಯಿಂದ ಲಸಿಕೆ ಪಡೆಯಲು ಮುಂದೆ ಬರಬೇಕೆಂದು ಅವರು ವಿನಂತಿ ಮಾಡಿದರು.

    ಪ್ರಥಮ ಹಂತದಲ್ಲಿ, ಆರೋಗ್ಯ ಸೇವೆಯಲ್ಲಿರುವವರ ಪೈಕಿ 33,887 ಮಂದಿ ಪ್ರಥಮ, 20,374 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಮುಂಚೂಣಿ ಸೇವೆಯಲ್ಲಿರುವವರಲ್ಲಿ 5,454 ಮಂದಿ ಪ್ರಥಮ ಹಾಗೂ 727 ಮಂದಿ ದ್ವಿತೀಯ ಡೋಸ್ ಪಡೆದುಕೊಂಡಿದ್ದಾರೆ ಎಂದರು.
    ದೇವಸ್ಥಾನಗಳ ಪ್ರಧಾನ ಅರ್ಚಕರು, ಧರ್ಮದರ್ಶಿಗಳು, ಚರ್ಚ್ ಧರ್ಮಗುರು, ಬಿಷಪ್ ಹಾಗೂ ಮಸೀದಿಯ ಧರ್ಮಗುರುಗಳು ಕೂಡ ಲಸಿಕೆ ಹಾಕಿಸಿಕೊಂಡು ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳಲು ಸಂದೇಶ ನೀಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದರು.
    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಕ್ಕೆ 100, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 150, ತಾಲೂಕು ಆಸ್ಪತ್ರೆಗಳಲ್ಲಿ 200, ಜಿಲ್ಲಾಸ್ಪತ್ರೆಯಲ್ಲಿ 300 ಹಾಗೂ ಮೆಡಿಕಲ್ ಆಸ್ಪತ್ರೆಗಳಲ್ಲಿ ತಲಾ 500 ಮಂದಿಗೆ ಲಸಿಕೆ ನೀಡಲು ಅವಕಾಶವಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದರು.

    ಗಡಿ ಪ್ರವೇಶಕ್ಕೆ ಗ್ರಾಮೀಣ ಟಾಸ್ಕ್‌ಫೋರ್ಸ್
    ಮಹಾರಾಷ್ಟ್ರದಲ್ಲಿ ಕರೊನಾ 2ನೇ ಹಂತದ ಅಲೆ ಹಾಗೂ ಕೇರಳದಲ್ಲಿ ಕೋವಿಡ್ ಸಂಖ್ಯೆ ಏರಿದ ಹಿನ್ನೆಲೆ, ಗಡಿಯಲ್ಲಿ ಎಚ್ಚರ ವಹಿಸಲಾಗುತ್ತಿದೆ. ಗಡಿ ಹಾದುಹೋಗುವವರ ಮೇಲೆ ನಿಗಾ ಇರಿಸಲು ಮಾ.13ರಿಂದ ಗ್ರಾಮ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯೇ ಗಡಿ ಪ್ರದೇಶದ ಪ್ರಯಾಣಿಕರ ಮೇಲೆ ನಿಗಾ ಇರಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕರೊನಾ ತಪಾಸಣೆ ಹಾಗೂ ಗಸ್ತು ನಡೆಸುವಂತೆ ಈ ಸಮಿತಿಗೆ ಸೂಚನೆ ನೀಡಲಾಗಿದೆ. ಕೇರಳದಿಂದ ಇಲ್ಲಿಗೆ ಬರುವವರು ನೆಗೆಟಿವ್ ಸರ್ಟಿಫಿಕೆಟ್ ತರಬೇಕು. ಗಡಿಯೊಳಗೆ ಬಂದು ಇಲ್ಲಿನ ಕೇಂದ್ರಗಳಲ್ಲೂ ಟೆಸ್ಟ್ ಮಾಡಿಸಬಹುದು. ನಿತ್ಯ ಸಂಚಾರಿಗಳ ಹಿತದೃಷ್ಟಿಯಿಂದ ಇನ್ನೂ ನಾಲ್ಕು ಗಡಿಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ ಎಂದರು.

    ಜಿಲ್ಲೆಯ ಲಸಿಕಾ ಕೇಂದ್ರಗಳಲ್ಲಿ ವಾರದ ಏಳು ದಿನವೂ ನೀಡಲು ಸಾಧ್ಯವಾಗುವಷ್ಟು ಲಸಿಕೆಗಳಿವೆ. ನಿರಂತರ ಲಸಿಕೆ ಸರಬರಾಜು ಆಗುತ್ತಿದೆ. ಲಸಿಕೆ ಪಡೆದ ಬಳಿಕ ಕನಿಷ್ಠ 3ರಿಂದ 6 ತಿಂಗಳವರೆಗೆ ಕರೊನಾ ಭೀತಿಯಿಲ್ಲ.
    – ಡಾ.ರಾಜೇಂದ್ರ
    ಜಿಲ್ಲಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts