More

    ಬಸ್​​ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?

    ನವದೆಹಲಿ: ಕೋವಿಡ್​19 ಕಾಯಿಲೆಗೆ ಕಾರಣವಾಗುವ ಕರೊನಾ ವೈರಸ್​ ಗಾಳಿಯಿಂದಲೇ ಹರಡುತ್ತದೆ ಎಂಬುದಕ್ಕೆ ಅಧ್ಯಯನವೊಂದು ಪುಷ್ಠಿ ನೀಡಿದೆ.

    ಸಮುದಾಯಕ್ಕೆ ಹರಡಿದ್ದ ಪ್ರಕರಣವೊಂದರ ಅಧ್ಯಯನ ನಡೆಸಿದ ತಜ್ಞರು ಈ ನಿರ್ಧಾರಕ್ಕೆ ಬಂದಿದ್ದಾರೆ. ಚೀನಾದ ಝೇಜಿಯಾಂಗ್​ ಪ್ರಾಂತ್ಯದಲ್ಲಿ ಸೋಂಕಿದ್ದ ವ್ಯಕ್ತಿಯೊಬ್ಬ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ತೆರಳಲು ಬಸ್​ನಲ್ಲಿ ಪ್ರಯಾಣಿಸಿದಾಗ ಅದೇ ಬಸ್​ನಲ್ಲಿದ್ದ ಕನಿಷ್ಠ 23 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜತೆಗೆ, ಕೇವಲ ಎರಡೇ ಗಂಟೆಯಲ್ಲಿ ಇಷ್ಟು ಜನರಿಗೆ ಸೋಂಕು ವ್ಯಾಪಿಸಿದೆ ಎಂಬುದು ಗೊತ್ತಾಗಿದೆ.

    ಕರೊನಾದಿಂದಾಗಿ ಮಾಸ್ಕ್​ ಧರಿಸುವುದು ಕಡ್ಡಾಯಗೊಳಿಸುವ ಮುಂಚಿನ ಅವಧಿಯಲ್ಲಿ ಈ ಘಟನೆ ನಡೆದಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.
    ಈ ಅಧ್ಯಯನ ವರದಿ ಜಾಮಾ ಇಂಟರ್ನಲ್ ಮೆಡಿಸಿನ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಇದರರ್ಥ ವ್ಯಕ್ತಿಯಿಂದ ಆರಡಿ ದೂರವಿರುವುದು ಕೂಡ ಕರೊನಾ ತಡೆಯುವಲ್ಲಿ ಸಾಕಾಗದು ಎಂಬುದನ್ನು ಇದು ತಿಳಿಸುತ್ತದೆ. ಅದರಲ್ಲೂ ಗಾಳಿ ಬೆಳಕು ಸಮರ್ಪಕವಾಗಿರದ ಸ್ಥಳದಲ್ಲಿ ಇದು ನಿಷ್ಪ್ರಯೋಜಕವೇ ಸರಿ ಎಂದು ಹೇಳುತ್ತಾರೆ ಅಧ್ಯಯನಕಾರರು.

    ಇದನ್ನೂ ಓದಿ; ಕರೊನಾ ಜನ್ಮಸ್ಥಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಶುರುವಾಗಿವೆ ಶಾಲೆ- ಕಾಲೇಜುಗಳು…! 

    ವುಹಾನ್​ ಜನರೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಇರಲಿಲ್ಲ. ಈತನೊಂದಿಗಿದ್ದ ಗುಂಪು ಬುದ್ಧನ ಮಂದಿರಕ್ಕೆ ಪ್ರಯಾಣ ಬೆಳೆಸಿತ್ತು. ಅಲ್ಲಿಂದ ಮನೆಗೆ ಮರಳಿದ ಕೆಲ ಹೊತ್ತಿನಲ್ಲಿ ಪ್ರಯಾಣಿಕರೊಬ್ಬರಿಗೆ ಕೆಮ್ಮು, ಚಳಿಜ್ವರ, ಮೈಕೈ ನೋವು ಕಾಣಿಸಿಕೊಂಡಿದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.

    ಈ ಸಂಶೋಧನೆಯ ಸಾರವೇನು?: ಕರೊನಾ ಸೋಂಕು ವ್ಯಾಪಿಸುವುದರ ಮೂಲ ಕಂಡುಕೊಳ್ಳಲು ಅಧ್ಯಯನಕಾರರು ಎರಡು ಬಸ್​ಗಳಲ್ಲಿ ತೆರಳಿದ್ದ 128 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಒಂದರಲ್ಲಿ 60 ಜನ ಇನ್ನೊಂದರಲ್ಲಿ 68 ಜನ ಬುದ್ಧನ ಮಂದಿರಕ್ಕೆ ತೆರಳಿದ್ದರು. ಇವರು ಒಟ್ಟು 100 ನಿಮಿಷಗಳ ಪ್ರಯಾಣ ಹಾಗೂ 150 ನಿಮಿಷಗಳ ಪೂಜೆಯಲ್ಲಿ ಭಾಗಿಯಾಗಿದ್ದರು. ಸೋಂಕಿದ್ದ ವ್ಯಕ್ತಿ ಎರಡನೇ ಬಸ್​ನಲ್ಲಿದ್ದ. ಆತನಿಂದ ಪ್ರಯಾಣಿಕರು ಕುಳಿತಿದ್ದ ದೂರವನ್ನು ಆಧರಿಸಿ ಹೈರಿಸ್ಕ್​ ಹಾಗೂ ಲೋ ರಿಸ್ಕ್​ ವಲಯಗಳೆಂದು ಅಧ್ಯಯನಕಾರರು ವಿಂಗಡಿಸಿ ಅಧ್ಯಯನ ಮಾಡಿದ್ದಾರೆ.

    ಇದನ್ನೂ ಓದಿ; ಸೆಲ್​ಗಳಲ್ಲಿ ಸೆರೆವಾಸ, ನಗ್ನರಾಗಿಸಿ ಸೋಂಕು ನಿವಾರಕ ಸಿಂಪಡಣೆ; ಚೀನಾ ಉಯ್ಘರ್​ ಮುಸ್ಲಿಮರ ಸ್ಥಿತಿಯಿದು….! 

    ​ಅಂತಿಮವಾಗಿ ಕಾರ್ಯಕ್ರಮ ಮುಗಿದ ಬಳಿಕ ಎರಡನೇ ಬಸ್​ನಲ್ಲಿದ್ದ 68 ಜನರಲ್ಲಿ 24 ಜನರು ಕೋವಿಡ್​ ಸೋಂಕಿಗೆ ಒಳಗಾಗಿದ್ದರು. ಆದರೆ ಮೊದಲನೇ ಬಸ್​ನಲ್ಲಿದ್ದ ಯಾರಿಗೂ ಸೋಂಕು ಇರಲಿಲ್ಲ. ಜತೆಗೆ, ಎರಡೂ ಬಸ್​ಗಳಲ್ಲಿ ಸೆಂಟ್ರಲೈಸ್ಡ್​ ಎಸಿ ಅಳವಡಿಸಿತ್ತು ಎಂಬುದು ಗಮನಾರ್ಹ ಅಂಶ. ಈ ಎಲ್ಲ ಕಾರಣಗಳಿಂದಾಗಿ ಕರೊನಾ ಗಾಳಿಯಿಂದಲೂ ಹರಡುತ್ತಿದೆ ಎನ್ನಲು ಹಲವು ನಿದರ್ಶನಗಳಿವೆ ಎನ್ನುತ್ತಾರೆ ಅಧ್ಯಯನಕಾರರು. ಜತೆಗೆ, ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಅಂಥ ಸಾಧ್ಯತೆಗಳನ್ನು ಒಪ್ಪಿಕೊಳ್ಳುವುದಾಗಿಯೂ ಹೇಳಿತ್ತು.

    ವಾಯುಸೇನೆಯ ಬಲಾಢ್ಯ ರಫೇಲ್​ ಯುದ್ಧ ವಿಮಾನಗಳಿಗೆ ಎದುರಾಗಿದೆ ಆಪತ್ತು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts