More

    ಸೆಲ್​ಗಳಲ್ಲಿ ಸೆರೆವಾಸ, ನಗ್ನರಾಗಿಸಿ ಸೋಂಕು ನಿವಾರಕ ಸಿಂಪಡಣೆ; ಚೀನಾ ಉಯ್ಘರ್​ ಮುಸ್ಲಿಮರ ಸ್ಥಿತಿಯಿದು….!

    ನವದೆಹಲಿ: ಚೀನಾದಲ್ಲಿ ಉಯ್ಘರ್ ಮುಸ್ಲಿಮರ ಸ್ಥಿತಿ ಹೇಗಿದೆ ಎಂಬುದು ಸ್ವತಃ ಪಾಕಿಸ್ತಾನಕ್ಕೂ ಅರಿವಿದೆ. ಅವರಿಗೆ ಬಲವಂತವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಲಾಗುತ್ತಿದೆ. ಇದಕ್ಕಾಗಿ ದೊಡ್ಡ ದೊಡ್ಡ ಯಾತನಾ ಶಿಬಿರಗಳನ್ನೇ ವ್ಯವಸ್ಥೆ ಮಾಡಲಾಗಿದೆ. ಇದಷ್ಟೇ ಅಲ್ಲ, ಉಯ್ಘರ್​ ಮುಸ್ಲಿಮರು ಹೆಚ್ಚಾಗಿರುವ ಕ್ಸಿನ್​ಜಿಯಾಂಗ್​ ಪ್ರದೇಶದಲ್ಲಿ ಮಸೀದಿಗಳನ್ನು ಒಡೆದು ಅದೇ ಜಾಗದಲ್ಲಿ ಶೌಚಗೃಹ ಹಾಗೂ ಮದ್ಯದ ಮಳಿಗೆಗಳನ್ನು ನಿರ್ಮಿಸಲಾಗಿದೆ.

    ಕರೊನಾ ಕಾಲದಲ್ಲಿ ಇವರಿಗೂ ಇನ್ನೂ ಹೆಚ್ಚಿನ ದೌರ್ಜನ್ಯ, ಕಿರುಕಳ ನೀಡಲಾಗಿದೆ ಎಂಬುದು ಇದೀಗ ಬೆಳಕಿಗೆ ಬಂದಿದೆ. ಕ್ಸಿನ್​ಜಿಯಾಂಗ್​ ಪ್ರದೇಶದಲ್ಲಿ ಕರೊನಾ ಹತ್ತಿಕ್ಕಲು ಅತ್ಯಂತ ಅಮಾನವೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರನ್ನು ಮನೆಯಲ್ಲಿ ಕೂಡಿ ಹಾಕಲಾಗಿತ್ತು. 40 ದಿನಗಳವರೆಗೆ ಕ್ವಾರಂಟೈನ್​ ವಿಧಿಸಲಾಗಿತ್ತು. ಇದನ್ನು ಪಾಲಿಸದವರನ್ನು ಬಂಧಿಸಲಾಗುತ್ತಿತ್ತು.

    ಇದನ್ನೂ ಓದಿ; 20 ಲಕ್ಷ ಕರೊನಾ ಕೇಸ್​ಗಳು ಒಂದೇ ತಿಂಗಳಲ್ಲಿ…! 28 ಸಾವಿರ ಸಾವು; ಭಾರತದ್ದು ಜಗತ್ತಿನಲ್ಲೇ ದಾಖಲೆ….! 

    ಇನ್ನೊಂದೆಡೆ, ಉಯ್ಘರ್​ ಮಹಿಳೆಯರನ್ನು ಪೊಲೀಸರು ಮಧ್ಯರಾತ್ರಿಯಲ್ಲಿ ಬಂಧಿಸಿ ಸೆಲ್​ಗಳಲ್ಲಿ ಕೂಡಿ ಹಾಕಲಾಗುತ್ತಿತ್ತು. ಹತ್ತಾರು ಮಹಿಳೆಯರನ್ನು ಒಂದೇ ಸೆಲ್​ನಲ್ಲಿ ಹಾಕಲಾಗಿತ್ತು. ಇವರಿಗೆ ಯಾವುದೋ ಔಷಧ ನೀಡಿ ಬಲವಂತವಾಗಿ ಕುಡಿಯುವಂತೆ ಮಾಡಲಾಗುತ್ತಿತ್ತು. ಇದಕ್ಕಿಂತ ಭೀಕರ ಎಂದರೆ, ವಾರಕ್ಕೊಮ್ಮೆ ಸೆಲ್​ನಲ್ಲಿದ್ದವರಿಗೆ ಮುಖ ಮಾತ್ರ ಮುಚ್ಚಿಕೊಳ್ಳುವಂತೆ ಹೇಳಿ ಸಂಪೂರ್ಣ ನಗ್ನರಾಗಿಸಿ ಅಗ್ನಿಶಾಮಕದವರು ನೀರೆರೆಚಿದಂತೆ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತಿತ್ತು ಎಂದು ಮಹಿಳೆಯರೊಬ್ಬರು ಹೇಳಿದ್ದಾರೆ.

    ಅದು ನಿರಾಶ್ರಿತರ ಬಂಧನ ಶಿಬಿರವಾಗಿತ್ತು. ಅಲ್ಲಿದ್ದ ಪರಿಸ್ಥಿತಿಗೆ ನನ್ನ ಕೈಗಳು ಗಾಯಗೊಂಡಿದ್ದವು. ಚರ್ಮವೆಲ್ಲ ಕಿತ್ತು ಬಂದಿತ್ತು. ಹಲವು ದೇಶಗಳಲ್ಲಿ ನಿಷೇಧಿಸಲಾಗಿರುವ ಔಷಧವನ್ನು ಸಾಂಪ್ರದಾಯಿಕ ಔಷಧದ ಹೆಸರಲ್ಲಿ ಅಲ್ಲಿರುವವರಿಗೆ ನೀಡಲಾಗುತ್ತಿತ್ತು ಎಂದು ಮಹಿಳೆಯೊಬ್ಬರು ಯಾತನಾಲೋಕವನ್ನು ತೆರೆದಿಟ್ಟಿದ್ದಾರೆ.

    ಇದನ್ನೂ ಓದಿ; ವಿಡಿಯೋ: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ….! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು…! 

    ಇಲ್ಲಿ ಒಂದು ತಿಂಗಳು ಕಳೆದ ಬಳಿಕ ಮನೆಯಲ್ಲಿ ಮತ್ತೆ ಕ್ವಾರಂಟೈನ್​ನಲ್ಲಿ ಇರಬೇಕಾಗಿತ್ತು. ಉಯ್ಘರ್​ ಮುಸ್ಲಿಮರು ಮಾತ್ರವಲ್ಲದೇ, ಕಝಕ್ ಹಾಗೂ ಇತರ ಅಲ್ಪಸಂಖ್ಯಾತರನ್ನು ಅಕ್ಷರಶಃ ಇಲ್ಲಿ ಬಂಧನದಲ್ಲಿಯೇ ಇಡಲಾಗಿದೆ. ಜನರ ಒಳಿತಿಗಾಗಿಯೇ ಇದನ್ನು ಮಾಡಲಾಗುತ್ತಿದೆ ಎಂಬುದು ಅಧಿಕಾರಿಗಳ ಸಮರ್ಥನೆ. ಆದರೆ, ಇತರೆಡೆಗಳಿಗಿಂತ ಇಲ್ಲಿ ಏಕೆ ಅತ್ಯಂತ ಯಾತನಾದಾಯಕವಾಗಿವೆ ಎಂಬುದಕ್ಕೆ ಅವರು ಉತ್ತರಿಸುವುದಿಲ್ಲ.

    ಆಕಾಶದಿಂದ ‘ಹಣದ ಮಳೆ’ಯೇ ಸುರಿಯಿತು; ರಾತ್ರೋರಾತ್ರಿ ಲಕ್ಷಾಧೀಶರಾದ ಗ್ರಾಮಸ್ಥರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts