More

    ಕರೊನಾ ನಿಯಂತ್ರಣದಲ್ಲಿ ಯಾವುದೇ ರಾಜಿಯಿಲ್ಲ : ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಖಡಕ್ ಎಚ್ಚರಿಕೆ

    ಬೆಂಗಳೂರು : ರಾಜಧಾನಿಯಲ್ಲಿ ಕರೊನಾ ಕಟ್ಟಿಹಾಕುವುದಕ್ಕೆ ಎಲ್ಲ ಸವಲತ್ತುಗಳು ಒದಗಿಸಿದ್ದರೂ ಕ್ರಮಗಳಿಗಿಂತ ದೂರುಗಳೇ ಹೆಚ್ಚು ಕೇಳಿಬರುತ್ತಿವೆ. ಮಾರಕ ಪಿಡುಗು ನಿಯಂತ್ರಣ ವಿಷಯದಲ್ಲಿ ಯಾವುದೇ ರಾಜಿಯಿಲ್ಲವೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬೆಂಗಳೂರು ಮಹಾನಗರದಲ್ಲಿ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಲಯವಾರು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜತೆಗೆ ವಿಡಿಯೋ ಸಂವಾದವನ್ನು ಉದ್ದೇಶಿಸಿ ಬುಧವಾರ ಅವರು ಮಾತನಾಡಿದರು.

    ಸಿಎಂ ಸೂಚನೆಗಳು

    – ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್​ಒಪಿ) ಪರಿಣಾಮಕಾರಿ ಜಾರಿ

    – ಮಾಹಿತಿ, ಶಿಕ್ಷಣ ಮತ್ತು ಸಂವಹನದ ಮೂಲಕ ಜನರಲ್ಲಿ ಜಾಗೃತಿ

    – ಹೋಮ್ ಐಸೋಲೇಷನ್ ಇರುವವರ ಬಗ್ಗೆ ಟೆಲಿಮಾನಿಟರಿಂಗ್ ಮೂಲಕ ನಿಗಾ

    – ರ‍್ಯಾಪಿಡ್ ಆಂಟಿಜನ್ ಪರೀಕ್ಷೆ ತಗ್ಗಿಸಿ, ಆರ್​ಟಿಪಿಸಿಆರ್ ಟೆಸ್ಟ್ ಗೆ ಒತ್ತು

    – ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಕಟ್ಟುನಿಟ್ಟಾಗಿ ಪಾಲನೆ

    – ಪೊಲೀಸರೊಂದಿಗೆ ವಲಯ ಉಸ್ತುವಾರಿ ಅಧಿಕಾರಿಗಳು ಸಮನ್ವಯ ಸಾಧಿಸುವುದು

    – ಮುನ್ನೆಚ್ಚರಿಕೆ ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ನಿಗಾ

    – ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂರ್ಪತರ ಪತ್ತೆ ಮತ್ತಷ್ಟು ಚುರುಕು

    – ಆರ್​ಟಿಪಿಸಿಆರ್ ಪರೀಕ್ಷೆ ಹಾಗೂ ಮಾಸ್ಕ್ ಧರಿಸುವಿಕೆ ವರದಿ ಪರಿಶೀಲಿಸಿ ಕ್ರಮ

    ಕರೊನಾ ಪರೀಕ್ಷಾ ವರದಿಯಲ್ಲಿ ಲೋಪ-ದೋಷಗಳು, ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸಲು ಮಧ್ಯವರ್ತಿಗಳ ಹಾವಳಿ, ಮನೆ ಆರೈಕೆಯಲ್ಲಿದ್ದರೂ ಆಸ್ಪತ್ರೆಯಲ್ಲಿರುವುದಾಗಿ ಸುಳ್ಳು ಬಿಲ್ಲು ಸೃಜನೆ ಹೀಗೆ ಸರಣಿ ರೂಪದಲ್ಲಿ ಅವ್ಯವಹಾರ ಹಾಗೂ ಅದಕ್ಷತೆ ಕುರಿತು ಮಾಧ್ಯಮಗಳಲ್ಲಿ ವರದಿ ಬರುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಇದನ್ನೂ ಓದಿ: ‘ನಿಮ್ಮ ತಂದೆ- ತಾಯಿಗೆ ವಯಸ್ಸಾಗಿದ್ದು, 2.5 ಲಕ್ಷ ಪಾವತಿಸಿದ್ರೆ ಖಾಸಗಿ ಆಸ್ಪತ್ರೇಲಿ ಚೆನ್ನಾಗಿ ಚಿಕಿತ್ಸೆ ಕೊಡ್ತಾರೆ’!

    ಸಾಂಕ್ರಾಮಿಕ ರೋಗ ಹದ್ದುಬಸ್ತು, ನಿಖರ ದತ್ತಾಂಶ ಸಂಗ್ರಹ, ಉಪಕ್ರಮಗಳ ವಿಷಯದಲ್ಲಿ ನವೀನ ತಂತ್ರಜ್ಞಾನ ಬಳಕೆಯಿಂದ ದೇಶಕ್ಕೆ ಬೆಂಗಳೂರು ಮಾದರಿಯಾಗಿತ್ತು. ಆದರೆ, ಕರ್ತವ್ಯದಲ್ಲಿ ನಿರ್ಲಕ್ಷ್ಯ, ಉದಾಸೀನತೆ, ಸಮನ್ವಯ, ಸಂವಹನ ಕೊರತೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣವೆಂಬ ದೂರುಗಳಿವೆ ಎಂದು ಬಿಎಸ್​ವೈ ಸಿಡಿಮಿಡಿಗೊಂಡರು.

    ಇದನ್ನೂ ಓದಿ: ಜನರ ದೀಪಾವಳಿ ಸರ್ಕಾರದ ಕೈಲಿದೆ; ಚಕ್ರಬಡ್ಡಿ ಮನ್ನಾ ತ್ವರಿತ ಜಾರಿಗೆ ಸುಪ್ರೀಂ ತಾಕೀತು

    ಸಹಿಸುವುದಿಲ್ಲ:  ದಕ್ಷತೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯವಹಿಸಬೇಕು. ಅವ್ಯವಹಾರ ಮತ್ತು ನಿರ್ಲಕ್ಷ್ಯ ಆರೋಪಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಕಟ್ಟೆಚ್ಚರ ನೀಡಿದ್ದಾರೆ.

    ಇದನ್ನೂ ಓದಿ: ದಸರಾ,ದೀಪಾವಳಿಗೆ ವಿಶೇಷ ಸೂಚಿ: ಸರಳ, ಷರತ್ತುಬದ್ಧ ಆಚರಣೆಗೆ ಸಮ್ಮತಿ

    ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ನಿಯಮಗಳು ಉಲ್ಲಂಘನೆಯಾಗಿರುವುದು ಗಮನಕ್ಕೆ ಬಂದಿದೆ. ಜನರ ಜೀವ-ಜೀವನ ರಕ್ಷಣೆ ವಿಷಯದಲ್ಲಿ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮವಹಿಸಬೇಕು ಎಂದು ಬಿಎಸ್​ವೈ ತಿಳಿ ಹೇಳಿದರು.

    ಇದನ್ನೂ ಓದಿ: ಕರೊನಾ ಮಧ್ಯೆ ಅಮೆರಿಕದ ಶಾಲೆಗಳು ಹೇಗೆ ನಡೆಯುತ್ತಿವೆ?

    ಕಷ್ಟ ನಿವೇದಿಸಿಕೊಂಡರು: ಸೋಂಕಿತರು ವಿಳಾಸಗಳು ತಪ್ಪಾಗಿರುವುದು, ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿರುವ ಕಾರಣ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ನಿವೇದಿಸಿಕೊಂಡರು.

    ಇದನ್ನೂ ಓದಿ: ಶ್ರೀಮಹದೇವ ತಾತಾ ಐಕ್ಯ ಸನ್ನಿಧಾನಕ್ಕೆ ಕಪಿಲೆ ಭೀತಿ!

    ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ಪ್ರತಿದಿನ 47,000 ತಪಾಸಣೆಗಳಾಗುತ್ತಿದ್ದು, ಈವರೆಗೆ 20 ಲಕ್ಷಕ್ಕೂ ಹೆಚ್ಚು ತಪಾಸಣೆಗಳಾಗಿವೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು.

    ರಾಜ್ಯದ ಒಟ್ಟು ಕರೊನಾ ಪ್ರಕರಣಗಳ ಪೈಕಿ ಅತಿ ಹೆಚ್ಚು ಬೆಂಗಳೂರಿನಲ್ಲಿವೆ. ನಿರಂತರವಾಗಿ ಗಮನಹರಿಸುತ್ತಿರುವ ಕಾರಣ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಇಲಾಖೆ ಅಪರ ಮುಖ್ಯ ಜಾವೇದ್ ಅಖ್ತರ್ ಅವರು ಲಭ್ಯ ಹಾಸಿಗೆಗಳ ಪೈಕಿ ರೋಗಿಗಳಿಗೆ ಬಳಕೆ ವಿವರಗಳನ್ನು ನೀಡಿ, ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕಗಳ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದರು.

    ಇದನ್ನೂ ಓದಿ: ಕೆರೆ ನೀರು ಬಳಕೆಗೆ ಕಾಯುತ್ತಿರುವ ಮೊಳಕಾಲ್ಮೂರು ರೈತರು

    ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ವಿ.ಸೋಮಣ್ಣ, ಬೈರತಿ ಬಸವರಾಜ, ಎಸ್.ಟಿ.ಸೋಮಶೇಖರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್, ಸಿಎಂ ಅಪರ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತಾ, ಹಿರಿಯ ಅಧಿಕಾರಿಗಳು ಇದ್ದರು.

    ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕೋಟಿ ಜನರಿಂದ ಈಗಾಗಲೇ ಮತದಾನ

    ಹೆಚ್ಚಿನ ನಿಗಾಕ್ಕೆ ಸಲಹೆ : ಆಸ್ಪತ್ರೆಯಿಂದ ಮನೆಗೆ ಮರಳುವವರಲ್ಲಿ ಪುನಃ ಸೋಂಕು ಕಾಣಿಸಿಕೊಂಡ ಪ್ರಕರಣಗಳೂ ಇರುವುದರಿಂದ ಅವರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಆರ್​ಆರ್ ನಗರದಲ್ಲಿ ಪ್ರತಿ ಸೋಂಕಿತ ವ್ಯಕ್ತಿಗೆ ಕನಿಷ್ಟ 10 ಜನರ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. ಉಪ ಚುನಾವಣೆಯಿರುವ ಕಾರಣ ಸಾಮಾಜಿಕ ಅಂತರ ಕಾಪಾಡಲು ಪ್ರತ್ಯೇಕ ಎಸ್​ಒಪಿ ರೂಪಿಸುವ ಅಗತ್ಯವಿದೆ. ನಗರದ ಆಸ್ಪತ್ರೆಗಳಲ್ಲಿ 525 ಐಸಿಯು ಬೆಡ್​ಗಳು ಲಭ್ಯವಿದ್ದು, ವೆಂಟಿಲೇಟರ್​ಗಳು ಹಾಗೂ ಐಸಿಯು ಬೆಡ್​ಗಳ ಸಂಖ್ಯೆ ಹೆಚ್ಚಿಸಬೇಕಿದೆ ಎಂದು ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ‘ಸಾರ್ವಜನಿಕರ ಆರೋಪಗಳಿಗೆ ಯಾವುದೇ ಆಧಾರಗಳಿರುವುದಿಲ್ಲ, ತನಿಖೆ ಮಾಡಿದರೆ ಸಮಯ ವ್ಯರ್ಥ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts