More

    ‘ಸಾರ್ವಜನಿಕರ ಆರೋಪಗಳಿಗೆ ಯಾವುದೇ ಆಧಾರಗಳಿರುವುದಿಲ್ಲ, ತನಿಖೆ ಮಾಡಿದರೆ ಸಮಯ ವ್ಯರ್ಥ’!

    ಬೆಂಗಳೂರು: ಕರೊನಾ ಸೋಂಕು ನಿರ್ವಹಣೆ ವಿಚಾರದಲ್ಲಿ ಸಾರ್ವಜನಿಕರ ಆಕ್ರೋಶ ವ್ಯಾಪಕವಾಗುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯವಹಿಸುತ್ತಿರೋದಕ್ಕೆ ಅಧಿಕಾರಿಗಳ ಹೇಳಿಕೆ ನಡವಳಿಕೆಗಳೂ ಪುಷ್ಟಿ ನೀಡುತ್ತಿವೆ. ಕರೊನಾ ಸೋಂಕು ಪರೀಕ್ಷೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಸುಳ್ಳು ವರದಿಗಳನ್ನು ನೀಡುತ್ತಿದ್ದು, ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಡಿ ಎಂಬ ಆಡಿಯೋ ಹರಿದಾಡುತ್ತಿರುವಂತೆ ಬಿಬಿಎಂಪಿ ಮುಖ್ಯ ಆರೋಗ್ಯಅಧಿಕಾರಿ ನೀಡಿದ ಹೇಳಿಕೆ ಇದು.

    ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಆಧಾರಗಳಿರುವುದಿಲ್ಲ. ಹೀಗಾಗಿ, ಸುಮ್ಮನೆ ತನಿಖೆ ಮಾಡಿ ಸಮಯ ವ್ಯರ್ಥ ಮಾಡುವ ಬದಲು, ಸರ್ಕಾರದ ಸೂಚನೆಗಳನ್ನು ಪಾಲಿಸುತ್ತೇವೆ.
    | ಬಿ.ಕೆ. ವಿಜಯೇಂದ್ರ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ

    ಇದನ್ನೂ ಓದಿ: ಯಾರೂ ಇಂಥ ತಪ್ಪು ಮಾಡದಿರಿ: ಎನ್​ಸಿಪಿ ಮುಖಂಡ ಕಾರಿನಲ್ಲೇ ಸುಟ್ಟುಕರಕಲಾಗೋದಕ್ಕೆ ಇದುವೇ ಕಾರಣ!

    ನಗರದಲ್ಲಿ ಪ್ರತಿನಿತ್ಯ 4ರಿಂದ 5 ಸಾವಿರ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ, ಕೋವಿಡ್ ಪರೀಕ್ಷೆ ಹೆಚ್ಚಳ ಮಾಡಿ, ಸೋಂಕಿತರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವ ಮೂಲಕ ರೋಗ ಹರಡುವುದನ್ನು ತಡೆಗಟ್ಟುವಂತೆ ಬಿಬಿಎಂಪಿಗೆ ಸರ್ಕಾರ ತಾಕೀತು ಮಾಡಿದೆ. ಇದನ್ನು ದುರುಪಯೋಗ ಮಾಡಿಕೊಂಡ ಪಾಲಿಕೆ ಸಿಬ್ಬಂದಿ, ಎಲ್ಲೆಂದರಲ್ಲಿ ಸಂಚಾರಿ ಘಟಕಗಳನ್ನು ತೆರೆದು ಸಾರ್ವಜನಿಕರಿಗೆ ಕರೊನಾ ಪರೀಕ್ಷೆ ಮಾಡುವ ಮೂಲಕ ಸುಳ್ಳು ವರದಿಗಳನ್ನು ನೀಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.

    ‘ನಿಮ್ಮ ತಂದೆ- ತಾಯಿಗೆ ವಯಸ್ಸಾಗಿದ್ದು, 2.5 ಲಕ್ಷ ಪಾವತಿಸಿದ್ರೆ ಖಾಸಗಿ ಆಸ್ಪತ್ರೇಲಿ ಚೆನ್ನಾಗಿ ಚಿಕಿತ್ಸೆ ಕೊಡ್ತಾರೆ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts