More

    ಯಾರೂ ಇಂಥ ತಪ್ಪು ಮಾಡದಿರಿ: ಎನ್​ಸಿಪಿ ಮುಖಂಡ ಕಾರಿನಲ್ಲೇ ಸುಟ್ಟುಕರಕಲಾಗೋದಕ್ಕೆ ಇದುವೇ ಕಾರಣ!

    ಮುಂಬೈ: ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಎನ್​ಸಿಪಿಯ ತಾಲೂಕು ಘಟಕದ ಉಪಾಧ್ಯಕ್ಷ ಸಂಜಯ್ ಶಿಂಧೆ ಮಂಗಳವಾರ ಅಪರಾಹ್ನ ಕೀಟನಾಶಕ ಖರೀದಿಸಿ ಮುಂಬೈ-ಆಗ್ರಾ ರಸ್ತೆಯಲ್ಲಿನ ಪಿಂಪಲ್​ಗಾಂವ್​ಗೆ ತೆರಳುತ್ತಿದ್ದಾಗ ಕಾರಿನೊಳಗೆ ಸುಟ್ಟುಕರಕಲಾಗಿದ್ದ ಘಟನೆ ನಡೆದಿತ್ತು. ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದಾಗ್ಯೂ, ಅವರು ಮಾಡಿದ ದೊಡ್ಡ ತಪ್ಪೊಂದು ಅವರ ಪ್ರಾಣಕ್ಕೇ ಎರವಾಗಿದೆ ಎಂಬ ಅಂಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಇಂತಹ ತಪ್ಪು ಯಾರೂ ಮಾಡಬಾರದು ಎಂಬ ಸಲಹೆಯನ್ನೂ ನೀಡಿದ್ದಾರೆ.

    ಕೋವಿಡ್ 19 ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕಾದಷ್ಟು ಎಷ್ಟು ನಿಜವೋ, ಸ್ಯಾನಿಟೈಸರ್ ಬಳಕೆಯಲ್ಲೂ ಅಷ್ಟೇ ಎಚ್ಚರಿಕೆ ಇರಬೇಕು. ಕಾರಿನೊಳಗೆ ಸುಲಭವಾಗಿ ಹೊತ್ತಿಕೊಳ್ಳಬಲ್ಲ ಸ್ಯಾನಿಟೈಸರ್ ಇಟ್ಟು ಕಾರು ಸುಟ್ಟು ಹೋದ ಘಟನೆಗಳು ಆಗ್ಗಾಗ್ಗೆ ವರದಿಯಾಗುತ್ತಿವೆ. ಅಂತಹ ಪ್ರಕರಣದ ಸಾಲಿಗೆ ಮತ್ತೊಂದು ಸೇರ್ಪಡೆ.

    ಇದನ್ನೂ ಓದಿ: ಜನರ ದೀಪಾವಳಿ ಸರ್ಕಾರದ ಕೈಲಿದೆ; ಚಕ್ರಬಡ್ಡಿ ಮನ್ನಾ ತ್ವರಿತ ಜಾರಿಗೆ ಸುಪ್ರೀಂ ತಾಕೀತು

    ಸಕೋರೆ ಗ್ರಾಮದ ಸಂಜಯ್ ಶಿಂಧೆ ಕೂಡ ಇದೇ ತಪ್ಪೆಸಗಿದ್ದರು. ಸುಲಭವಾಗಿ ಹೊತ್ತಿಕೊಳ್ಳಬಲ್ಲ ಸ್ಯಾನಿಟೈಸರ್ ಬಾಟಲನ್ನು ಕಾರಿನೊಳಗೆ ಇಟ್ಟುಕೊಂಡಿದ್ದರು. ಎ.ಸಿ.ಹಾಕಿಕೊಂಡು ಪ್ರಯಾಣಿಸುತ್ತಿದ್ದ ಕಾರಣ ಕಿಟಕಿ ಕೂಡ ಬಂದ್ ಮಾಡಿದ್ದರು. ಪಿಂಪಲ್​ಗಾಂವ್​ ಬಸ್ವಂತ್ ಟೋಲ್​ ಪ್ಲಾಜಾ ಬಳಿ ಶಾರ್ಟ್​-ಸರ್ಕ್ಯೂಟ್ ಆಗಿ ಒಳಗಿದ್ದ ಸ್ಯಾನಿಟೈಸರ್​ ಬಾಟಲಿ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಅವರು ವಿಂಡೋ ತೆರೆಯಲು ಪ್ರಯತ್ನಿಸಿದ್ದರಾದರೂ ಅದಕ್ಕೆ ಅವಕಾಶ ಸಿಗಲಿಲ್ಲ. ಅಷ್ಟು ಹೊತ್ತಿಗೆ ಬೆಂಕಿ ಅವರಿಗೂ ತಗುಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
    ಶಿಂಧೆ ಅವರು ನಾಶಿಕ್​ನಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದು, ಪ್ರಸಿದ್ಧ ದ್ರಾಕ್ಷಿ ರಫ್ತುದಾರರಾಗಿದ್ದರು.

    ದ್ರಾಕ್ಷಿ ತೋಟಕ್ಕಾಗಿ ಕೀಟನಾಶಕ ತರಲೆಂದು ಹೋದ ಎನ್​ಸಿಪಿ ಮುಖಂಡ ಕಾರಿನಲ್ಲೇ ಸಜೀವ ದಹನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts