More

    ಕೊವ್ಯಾಕ್ಸಿನ್​ ಶೇ. 77.8ರಷ್ಟು ಪರಿಣಾಮಕಾರಿ; ಮೂರನೇ ಹಂತದ ಕ್ಲಿನಿಕಲ್ ಟ್ರಯಲ್​ನ ವರದಿ ಸಲ್ಲಿಕೆ

    ನವದೆಹಲಿ: ಭಾರತದಲ್ಲಿ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್​ ಹೆಸರಿನ ಎರಡು ರೀತಿಯ ಕರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಕೊವ್ಯಾಕ್ಸಿನ್ ಲಸಿಕೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಲಸಿಕೆಗಳ ಪಟ್ಟಿಯಲ್ಲಿ ಇಲ್ಲ ಎನ್ನುವ ಆರೋಪವೂ ಇದೆ. ಇದೀಗ ಅದೇ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್​ನ ವರದಿ ಸಲ್ಲಿಕೆಯಾಗಿದೆ.

    ಭಾರತ್​ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತ ಕ್ಲಿನಿಕಲ್ ಟ್ರಯಲ್​ನ ವರದಿಯನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(ಡಿಜಿಸಿಐ)ಕ್ಕೆ ಕಳೆದ ವಾರಾಂತ್ಯದಲ್ಲಿ ಸಲ್ಲಿಸಿರುವುದಾಗಿ ಹೇಳಲಾಗಿದೆ. ಲಸಿಕೆಯು ಮೂರನೇ ಹಂತದ ಪ್ರಯೋಗದಲ್ಲಿ ಶೇ.77.8ರಷ್ಟು ಪರಿಣಾಮಕಾರಿಯಾಗಿ ಕಂಡುಬಂದಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ. ವರದಿಯನ್ನು ಅಂತಾರಾಷ್ಟ್ರೀಯವಾಗಿ ಬಿಡುಗಡೆ ಮಾಡಿಲ್ಲ. ಡಿಜಿಸಿಐಗೆ ವರದಿ ಸಲ್ಲಿಕೆ ಆದ ನಂತರವೇ ಬಿಡುಗಡೆ ಮಾಡುವುದಾಗಿ ಸಂಸ್ಥೆ ತಿಳಿಸಿತ್ತು.

    ಮಾರ್ಚ್ ತಿಂಗಳಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯು ಮಾರ್ಚ್ ಕೊವ್ಯಾಕ್ಸಿನ್​ನ ಮೂರನೇ ಹಂತದ ಪ್ರಯೋಗದ ಮೊದಲ ಮಧ್ಯಂತರ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಲಸಿಕೆಯು ಶೇ. 81ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಲಾಗಿತ್ತು.

    ಡಿಜಿಸಿಐ ತಲುಪಿರುವ ವರದಿಯನ್ನು ಮಂಗಳವಾರದಂದು ವಿಶೇಷ ತಜ್ಞರ ಸಮಿತಿ ಪರಿಶೀಲನೆ ನಡೆಸಲಿದೆ ಎನ್ನಲಾಗಿದೆ. ಲಸಿಕೆಗೆ ಅನುಮೋದನೆ ಸಿಕ್ಕರೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಲಸಿಕೆಯ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಸೇರಿಕೊಳ್ಳುವ ಸಾಧ್ಯತೆ ಇದೆ. (ಏಜೆನ್ಸೀಸ್)

    ಮೊಮ್ಮಕ್ಕಳ ಎದುರೇ ಅಜ್ಜ-ಅಜ್ಜಿಯ ಮದುವೆ! 60 ದಾಟಿದವರ ವಿಶೇಷ ಮದುವೆಗೆ ಮಕ್ಕಳ ಕುಟುಂಬವೇ ಅತಿಥಿಗಳು!

    ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

    ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts