More

    ಐತಿಹಾಸಿಕ ಸರಳ ದಸರಾ ಆರಂಭಕ್ಕೆ ಕ್ಷಣಗಣನೆ

    ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಮೈಸೂರು ಸಜ್ಜಾಗಿದ್ದು, 410ನೇ ದಸರಾಗೆ ಚಾಮುಂಡಿ ಬೆಟ್ಟದಲ್ಲಿಂದು ಚಾಲನೆ ಸಿಗುತ್ತಿದೆ. ಬೆಳಗ್ಗೆ 7.45ರಿಂದ 8.15ರೊಳಗೆ ಸಲ್ಲುವ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಉದ್ಘಾಟನೆ ನಡೆಯಲಿದೆ. ದಸರಾ ಉದ್ಘಾಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ‌ರೋಹಿಣಿ ಸಿಂಧೂರಿ ಕೊನೆ ಹಂತದ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.

    ಅಲಂಕೃತ ಬೆಳ್ಳಿ ರಥದಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನಡೆಸುವ ಮೂಲಕ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎನ್.ಮಂಜುನಾಥ್ ಉದ್ಘಾಟನೆ ನಡೆಸಲಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಗಣ್ಯರೆಲ್ಲರೂ ಮೈಸೂರಿನಲ್ಲಿದ್ದು, ಕೆಲವೇ ನಿಮಿಷಗಳಲ್ಲಿ ಉದ್ಘಾಟನಾ ಸ್ಥಳಕ್ಕೆ ತಲುಪಲಿದ್ದಾರೆ.

    ಇದನ್ನೂ ಓದಿ: ದಸರಾ,ದೀಪಾವಳಿಗೆ ವಿಶೇಷ ಸೂಚಿ: ಸರಳ, ಷರತ್ತುಬದ್ಧ ಆಚರಣೆಗೆ ಸಮ್ಮತಿ

    ದಸರಾ ಉದ್ಘಾಟನಾ ವೇದಿಕೆಯಲ್ಲಿ ಆರು ಕರೋನಾ ವಾರಿಯರ್ಸ್‌ಗೆ ಸನ್ಮಾನ ನಡೆಯಲಿದೆ.
    ಸನ್ಮಾನಿತರು
    1. ಡಾ.ನವೀನ್ ಟಿ.ಆರ್.- ವೈದ್ಯಾಧಿಕಾರಿ.
    2. ರುಕ್ಮಿಣಿ – ಹಿರಿಯ ಶುಶ್ರುಷಾಧಿಕಾರಿ.
    3. ಕುಮಾರ್ ಪಿ. ಪೊಲೀಸ್ ಕಾನ್ ಸ್ಟೇಬಲ್.
    4. ಮರಗಮ್ಮ- ಪೌರಕಾರ್ಮಿಕರು.
    5. ನೂರ್ ಜಾನ್ – ಆಶಾ ಕಾರ್ಯಕರ್ತೆ.
    6. ಆಯೂಬ್ ಅಹ್ಮದ್ – ಸಮಾಜ ಸೇವಕರು.

    ಇದನ್ನೂ ಓದಿ:  ಮೈಸೂರು ದಸರಾ: ಸರಳ ಸುಂದರ ಸಾಂಪ್ರದಾಯಿಕ ಸಡಗರ..

    ವರಾತ್ರಿ ಉತ್ಸವದ ನಿಮಿತ್ತ ರಾಜವಂಸ್ಥರ ಖಾಸಗಿ ದಸರಾ ಇಂದು ಆರಂಭವಾಗಲಿದ್ದು, ಬೆಳಗ್ಗೆ 6.15 ರಿಂದ 6.30ರ ಶುಭ ಮಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ನಡೆದಿದೆ. 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಕಂಕಣಧಾರಣೆ ಆಗಲಿದ್ದು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣ ಧಾರಣೆ ಮಾಡಲಿದ್ದಾರೆ.  ಬೆಳಗ್ಗೆ 10 ಗಂಟೆಗೆ ಕಳಸ ಪೂಜೆ ಸೇರಿ ಇತರೆ ಧಾರ್ಮಿಕ ಆಚರಣೆ, ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಕರೊನಾ ಕಾರಣಕ್ಕೆ ಖಾಸಗಿ ದರ್ಬಾರ್ ಗೆ ಮಾಧ್ಯಮಗಳಿಗೂ ನಿರ್ಭಂದ ಹೇರಲಾಗಿದೆ.

    ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂಪನ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts