More

    ನಿಕಿತಾ ತೋಮರ್ ಹತ್ಯೆ : ಇಬ್ಬರು ಯುವಕರನ್ನು ಅಪರಾಧಿಗಳೆಂದು ಘೋಷಿಸಿದ ಕೋರ್ಟ್

    ಫರೀದಾಬಾದ್ : ಹಾಡುಹಗಲೇ ನಿಕಿತಾ ತೋಮರ್ ಎಂಬ ಯುವತಿಯನ್ನು ಗುಂಡಿಕ್ಕಿ ಕೊಂದಿದ್ದ ಪ್ರಕರಣದಲ್ಲಿ ಆರೋಪಿಗಳಾದ ತೌಸೀಫ್ ಮತ್ತು ರೆಹಾನ್​ ಎಂಬುವರನ್ನು ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿದೆ. ಹರಿಯಾಣದ ಫರಿದಾಬಾದ್​ ಜಿಲ್ಲೆಯ ಬಲ್ಲಬ್​ಗಡದಲ್ಲಿ ನಡೆದಿದ್ದ ಹತ್ಯೆಯು ಲವ್​ ಜಿಹಾದ್ ಪ್ರಸಂಗವಾಗಿತ್ತೆಂದು ಆರೋಪಿಸಲಾಗಿತ್ತು.

    ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಬರ್ಬರ ಹತ್ಯೆಯು ನಡೆದಿದ್ದು ಕಳೆದ ವರ್ಷ ಅಕ್ಟೋಬರ್​ 26 ರಂದು. ಇಪ್ಪತ್ತೊಂದು ವರ್ಷ ವಯಸ್ಸಿನ ನಿಕಿತಾಳನ್ನು ಅಪಹರಿಸಲು ಆರೋಪಿಗಳಾದ ತೌಸೀಫ್ ಮತ್ತು ರೆಹಾನ್ ಪ್ರಯತ್ನಿಸಿದ್ದರು. ಅದು ಸಾಧ್ಯವಾಗದೆ, ತೌಸೀಫ್ ಗನ್ ತೆಗೆದು ಹತ್ತಿರದಿಂದ ಆಕೆಯ ಮೇಲೆ ಗುಂಡು ಹಾರಿಸಿ ಸಾಯಿಸಿದ್ದ. ವೈರಲ್ ಆಗಿದ್ದ ಈ ವಿಡಿಯೋ ತುಣುಕಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

    ಇದನ್ನೂ ಓದಿ: ಹದಿನೇಳರ ಹುಡುಗಿಯ ಮೇಲೆ ಗ್ಯಾಂಗ್ ರೇಪ್… ಸ್ನೇಹಿತೆ ಮನೆಗೆ ಹೋಗಿದ್ದೇ ತಪ್ಪಾಯಿತು!

    ಬಂಧನದ ನಂತರ ತೌಸೀಫ್, ನಿಕಿತಾ ಬೇರೆ ಯಾರನ್ನೋ ಮದುವೆಯಾಗುತ್ತಿದ್ದುದರಿಂದ ಗುಂಡಿಟ್ಟು ಕೊಂದಿದ್ದಾಗಿ ಹೇಳಿದ್ದ. 2018 ರಲ್ಲಿ ನಿಕಿತಾಳ ಕುಟುಂಬ ತನ್ನ ಮೇಲೆ ದೂರು ನೀಡಿದ್ದರ ಪರಿಣಾಮ ತಾನು ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಸೇಡು ತೀರಿಸಿಕೊಂಡೆ ಎಂದೂ ಸಹ ಹೇಳಿದ್ದ ಎನ್ನಲಾಗಿದೆ.

    ನಿಕಿತಾಳ ಕುಟುಂಬ ತೌಸೀಫ್ ಆಕೆಯನ್ನು ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಬಲವಂತಪಡಿಸುತ್ತಿದ್ದ ಎಂದು ಆರೋಪಿಸಿತ್ತು. ಲವ್ ಜಿಹಾದ್​ ಆ್ಯಂಗಲ್​ಅನ್ನೂ ಪರಿಶೀಲಿಸಿದ ವಿಶೇಷ ತನಿಖಾ ತಂಡ (ಎಸ್​ಐಟಿ) ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಫರೀದಾಬಾದ್​ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಂದು ತೌಸೀಫ್ ಮತ್ತು ರೆಹಾನ್​ರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದೆ. (ಏಜೆನ್ಸೀಸ್)

    ‘ಎಲೆಕ್ಷನ್ ಡ್ಯೂಟಿಗೆ ಯುಪಿ ಪೊಲೀಸ್ ಬೇಡ’ : ಟಿಎಂಸಿ ತಕರಾರು

    ಬಾಲಿವುಡ್ ನಟ ಆಮೀರ್ ಖಾನ್​ಗೆ ಕರೊನಾ ಸೋಂಕು

    ಈಗ ಮದ್ಯ ಖರೀದಿಸಲು 21 ವರ್ಷ ತುಂಬಿದ್ದರೆ ಸಾಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts