More

    ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿಗೆ ಗ್ರಾಮದಿಂದಲೇ ಬಹಿಷ್ಕಾರ; ತರಕಾರಿ, ಹಾಲು, ನೀರೂ ತೆಗೆದುಕೊಳ್ಳುವಂತಿಲ್ಲ!

    ಚಾಮರಾಜನಗರ: ಗ್ರಾಮದಿಂದಲೇ ಬಹಿಷ್ಕಾರ. ಅಲ್ಲದೆ, ತರಕಾರಿ, ಹಾಲು, ನೀರು ತೆಗೆದುಕೊಳ್ಳುವಂತೆಯೂ ಇಲ್ಲ. ಇದು ಪ್ರೀತಿಸಿ ಮದುವೆಯಾದ ಜೋಡಿಯೊಂದರ ಕಥೆ. ಅಂತರ್ಜಾತಿ ಮದುವೆಯಾದ ಕಾರಣಕ್ಕೆ ಈ ದಂಪತಿಗೆ ದಂಡ ವಿಧಿಸಿದ್ದಲ್ಲದೆ, ಗ್ರಾಮದಿಂದ ಬಹಿಷ್ಕಾರವನ್ನೂ ಹಾಕಲಾಗಿದೆ.

    ಚಾಮರಾಜನಗರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಕೊಳ್ಳೆಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ದಂಪತಿಗೆ ಈ ಶಿಕ್ಷೆ ವಿಧಿಸಲಾಗಿದೆ. ಕುಣಗಳ್ಳಿ ಗ್ರಾಮದ ಉಪ್ಪಾರ ಶೆಟ್ಟಿ ಸಮುದಾಯದ ಗೋವಿಂದರಾಜು ಎಂಬಾತ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಶ್ವೇತಾಳನ್ನು ಪ್ರೀತಿಸಿದ್ದು, ಮನೆಯವರ ಒಪ್ಪಿಗೆ ಮೇರೆಗೆ 2018ರ ಸೆ. 19ರಂದು ರಿಜಿಸ್ಟರ್ಡ್​ ಮದುವೆಯಾಗಿದ್ದರು. ಆದರೆ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಜಾತಿಯ ಕಾರಣಕ್ಕೆ ದಂಪತಿಗೆ ಸಂಕಷ್ಟ ಎದುರಾಗಿದೆ.

    ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಮಳವಳ್ಳಿಯಲ್ಲಿ ಕೆಲಸ ಮಾಡಿಕೊಂಡಿರುವ ಗೋವಿಂದರಾಜು ಅಲ್ಲೇ ಮನೆ ಮಾಡಿಕೊಂಡು ಸಂಸಾರ ನಿಭಾಯಿಸುತ್ತಿದ್ದ. ತಿಂಗಳಿಗೆ ಎರಡು ಮೂರು ಸಲ ದಂಪತಿ ಕುಣಗಳ್ಳಿ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಆದರೆ ಹೀಗೆ ಕಳೆದ ತಿಂಗಳಲ್ಲಿ ಬಂದಿದ್ದಾಗ ಗೋವಿಂದರಾಜು ಮನೆ ಸಮೀಪದವರು ಶ್ವೇತಾಳ ಜಾತಿ ಕುರಿತು ಕೇಳಿದಾಗ ದಲಿತ ಸಮುದಾಯಕ್ಕೆ ಸೇರಿದವಳು ಎಂಬುದು ಗೊತ್ತಾಗಿದೆ. ಇದು ಇತರ ಮನೆಯವರಿಗೆ ಗೊತ್ತಾಗಿ ವಿವಾದವಾಗಿತ್ತು. ಬಳಿಕ ಫೆ. 23ರಂದು ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆದಿತ್ತು. ಮಾ.1ರ ಒಳಗೆ 3 ಲಕ್ಷ ರೂ. ದಂಡ ಕಟ್ಟಬೇಕು ಎಂದು ಈ ವೇಳೆ ತಾಕೀತು ಮಾಡಲಾಗಿತ್ತು.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಇದರಿಂದ ಕಂಗೆಟ್ಟ ದಂಪತಿ ಕೊಳ್ಳೆಗಾಲ ಡಿವೈಎಸ್​ಪಿ ಕಚೇರಿಯಲ್ಲಿ ದೂರು ನೀಡಿದ್ದರು. ಆ ಬಳಿಕ ಮತ್ತಷ್ಟು ಸಿಟ್ಟಾದ ಊರವರು ದಂಡದ ಮೊತ್ತ ಇಮ್ಮಡಿಗೊಳಿಸಿದ್ದರು. ಮಾತ್ರವಲ್ಲ, ಗ್ರಾಮದಿಂದ ಬಹಿಷ್ಕಾರ ವಿಧಿಸಿದ್ದು, ಪಡಿತರ ಸಾಮಗ್ರಿ, ಹಣ್ಣು-ತರಕಾರಿ, ಹಾಲು ಮತ್ತು ನೀರನ್ನು ಕೂಡ ತೆಗೆದುಕೊಳ್ಳುವಂತಿಲ್ಲ ಎಂದು ಷರತ್ತು ಹಾಕಿದ್ದರು. ದಂಪತಿ ಪೊಲೀಸರಿಗೆ ಈ ಎಲ್ಲ ವಿಚಾರ ತಿಳಿಸಿದ್ದಾರೆನ್ನಲಾಗಿದ್ದು, ತನಿಖೆ ನಡೆಯುತ್ತಿದೆ.

    ಮೇಕಪ್​ನಿಂದಾಗಿ ಬಣ್ಣಗೆಟ್ಟಿತು ವಧುವಿನ ಮುಖ; ಮದುವೆಯೇ ಬೇಡ ಎಂದ ವರ

    ಗಂಡ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಲವರ್​ನ ಕರೆಸಿ ಹೊಡೆಸಿದ ಹೆಂಡತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts