More

  ಗಂಡ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಲವರ್​ನ ಕರೆಸಿ ಹೊಡೆಸಿದ ಹೆಂಡತಿ!

  ಜಬಲ್ಪುರ: ಪತಿ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಪತ್ನಿಯೊಬ್ಬಳು ಲವರ್​ನ ಕರೆಸಿ ಗಂಡನಿಗೇ ಹೊಡೆಸಿದ ಪ್ರಕರಣವೊಂದು ನಡೆದಿದೆ. ಗಾಯಗೊಂಡಿರುವ ಪತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

  ಶುಭಂ ಗಿರನಿಯನ್ ಗಾಯಗೊಂಡಿರುವ ಪತಿ. ಈತನ ಪತ್ನಿ ಕಾಜಲ್ ಹಾಗೂ ಈಕೆಯ ಪ್ರಿಯಕರ ರಿಂಕು ಝರಿಯಾ ಆರೋಪಿಗಳು. ಜಬಲ್ಪುರದ ವಿಜಯನಗರ ಪ್ರದೇಶದಲ್ಲಿ ಇಂದು ಈ ಪ್ರಕರಣ ನಡೆದಿದೆ. ಘಟನೆ ಬಳಿಕ ಗಾಯಾಳು ಪೊಲೀಸರಿಗೆ ದೂರು ನೀಡಿದ್ದು, ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

  ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

  ರಿಂಕು ಎಂಬಾತನ ಜತೆ ನನ್ನ ಪತ್ನಿ ಅಕ್ರಮವಾಗಿ ವಾಸಿಸುತ್ತಿದ್ದಾಳೆ. ನಾನು ಇಂದು ಕೆಲಸದಿಂದ ಮನೆಗೆ ಬರುವಾಗ ನನ್ನನ್ನು ಅಡ್ಡಗಟ್ಟಿದ್ದ ಪತ್ನಿ, ಶಾಪಿಂಗ್​ಗಾಗಿ 5 ಸಾವಿರ ರೂ. ಕೇಳಿದಳು. ಹಣ ಕೊಡಲು ನಾನು ನಿರಾಕರಿಸಿದಾಗ ಆಕೆ ರಿಂಕುವನ್ನು ಕರೆಸಿಕೊಂಡು ನನಗೆ ಹೊಡೆಸಿದ್ದಾಳೆ. ಆತ ತನ್ನ ಗೆಳೆಯರೊಂದಿಗೆ ಬಂದಿದ್ದು, ಬೇಸ್​ಬಾಲ್ ಬ್ಯಾಟ್​ ಮತ್ತು ಸ್ಟಿಕ್​ಗಳಿಂದ ಹಲ್ಲೆ ನಡೆಸಿದ್ದಾನೆ. ಪತ್ನಿಯೂ ನನಗೆ ಹೊಡೆದಿದ್ದಾಳೆ ಎಂದು ಗಾಯಾಳು ಪತಿ ದೂರು ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

  ಇದನ್ನೂ ಓದಿ: ಮಹಿಳೆಗೆ ಹೃದಯಾಘಾತ: ಶವದ ಮೇಲಿದ್ದ 2 ಚಿನ್ನದ ಬಳೆ ನಾಪತ್ತೆ; ಆಗಿದ್ದೇನು?

  ಎರಡು ವರ್ಷಗಳ ಹಿಂದೆ ಕಾಜಲ್ ಮತ್ತು ಶುಭಂ ವಿವಾಹವಾಗಿತ್ತು. ಆದರೆ ಆಕೆ ಮದುವೆ ಬಳಿಕವೂ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳು. ಇದಕ್ಕೆ ಪತಿ ವಿರೋಧಿಸಿದಾಗ ಇಬ್ಬರ ಮಧ್ಯೆ ಜಗಳಗಳಾಗುತ್ತಿದ್ದವು. ಕೊನೆಗೆ ಆಕೆಯ ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೇ ವಾಸಿಸಲಾರಂಭಿಸಿದಳು ಎಂದು ಶುಭಂ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  ಕಲ್ಯಾಣ ಮಂಟಪದಲ್ಲೇ ಕುಸಿದು ಬಿದ್ದ ವರ; ಆಸ್ಪತ್ರೆಯ ಮಾರ್ಗಮಧ್ಯೆ ಸಾವು

  ಟ್ರಾಫಿಕ್ ಫೈನ್, ಮತ್ತೆ 50% ಆಫರ್​​: ಎಷ್ಟು ದಿನಗಳವರೆಗೆ ಅವಕಾಶ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts