More

    ಮತ್ತೆ ಏರಿದ ಸೋಂಕು! ರಾಜ್ಯದಲ್ಲಿ ಇಂದು 1,240 ಕರೊನಾ ಪ್ರಕರಣ ಪತ್ತೆ

    ಬೆಂಗಳೂರು: ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆಯಾಗಿದ್ದ ಏಕದಿನ ಕರೊನಾ ಪ್ರಕರಣಗಳ ಸಂಖ್ಯೆ ಮಂಗಳವಾರದಿಂದ ಮತ್ತೆ ಏರಿಕೆ ಕಾಣಲಾರಂಭಿಸಿದೆ. ಬುಧವಾರ ರಾಜ್ಯದಲ್ಲಿ 1,240 ಪ್ರಕರಣಗಳು ದೃಢವಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 9,04,665ಕ್ಕೆ ಏರಿದೆ. 24 ಗಂಟೆಗಳಲ್ಲಿ 1,403 ಮಂದಿ ಗುಣಮುಖರಾಗಿದ್ದು, ಒಟ್ಟಾರೆಯಾಗಿ ಚೇತರಿಸಿಕೊಂಡವರ ಸಂಖ್ಯೆ 8,77,199ಕ್ಕೆ ಹೆಚ್ಚಳವಾಗಿದೆ. ಕೇವಲ 15,476 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ.

    ಇದನ್ನೂ ಓದಿ: ಮದುವೆಯಾದ ಸ್ನೇಹಿತ ಪಾರ್ಟಿಗೆ ಕಡಿಮೆ ಹೆಂಡ ತಂದ! ನೀ ಬದುಕಲು ಯೋಗ್ಯನಲ್ಲ ಎಂದು ಕೊಂದೇ ಬಿಟ್ಟರು ಸ್ನೇಹಿತರು

    ಬುಧವಾರ ಆರು ಜನರು ಕರೊನಾ ಸೋಂಕಿನಿಂದಾಗಿ ಮೃತರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಸೋಂಕಿನಿಂದಾಗಿ ಮೃತರಾದವರ ಸಂಖ್ಯೆ 11,971ಕ್ಕೆ ಏರಿಕೆಯಾಗಿದೆ. ಸದ್ಯ 248 ಜನರು ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಚುನಾವಣೆಗೆ ಮೊದಲೇ ಮಮತಾ ಬ್ಯಾನರ್ಜಿಗೆ ಬಿಗ್​ ಶಾಕ್​! ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಯಕ! ಶೀಘ್ರವೇ ಬಿಜೆಪಿ ಸೇರ್ಪಡೆ?

    ಬೆಂಗಳೂರಿನಲ್ಲಿ ಇಂದು 676 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ನಗರದಲ್ಲಿನ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 3,80,247ಕ್ಕೆ ಏರಿದೆ. ಅದರಲ್ಲಿ 3,65,579 ಮಂದಿ ಗುಣಮುಖರಾಗಿದ್ದು, 4,245 ಮಂದಿ ಮೃತರಾಗಿದ್ದಾರೆ. 10,422 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಿದೆ.

    ಕತ್ತೆ ಸಗಣಿಯಿಂದ ತಯಾರಾಗುತ್ತೆ ಕಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ! ಸಿಎಂ ಯೋಗಿ ಸಂಘಟನೆಯ ನಾಯಕ ಅರೆಸ್ಟ್​!

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts