More

    ಬಾಣಾವರದ ಆಂಜನೇಯ ಸ್ವಾಮಿ ರಥೋತ್ಸವ

    ಅರಸೀಕೆರೆ ಗ್ರಾಮಾಂತರ: ಬಾಣಾವರದ ಕೋಟೆ ಬಡಾವಣೆಯಲ್ಲಿರುವ ಐತಿಹಾಸಿಕ ಶ್ರೀ ಆಂಜನೇಯ ಸ್ವಾಮಿ ದಿವ್ಯ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಜಯ ಘೋಷದೊಂದಿಗೆ ನೆರವೇರಿತು.
    ಪೂರ್ವ ವಿಧಿಗಳು: ರಥೋತ್ಸವದ ಪೂರ್ವ ವಿಧಿಯಾಗಿ ಗಣಪತಿ ಹೋಮ, ಆಂಜನೇಯ ಹೋಮ, ರಾಮ ತಾರಕ ಹೋಮ, ಬ್ರಹ್ಮ- ರುದ್ರ, ರಥಾಂಗ ಹೋಮ, ರಥದ ಪ್ರತಿಷ್ಠಾಪನೆ ಮತ್ತು ಕಳಸ ಅಭಿಷೇಕಗಳನ್ನು ನೆರವೇರಿಸಲಾಗಿತ್ತು. ಆಂಜನೇಯ ಸ್ವಾಮಿಯನ್ನು ಕಲತೆಗಿರಿ ಪುಣ್ಯಕ್ಷೇತ್ರದಲ್ಲಿ ಗಂಗಾ ಸ್ನಾನ ಅಭಿಷೇಕ ಮಾಡಿಸಿ ಕರೆತಂದು ಅಂಕುರಾರ್ಪಣೆ ನೆರವೇರಿಸಲಾಯಿತು. ನಂತರ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಮಾಡಲಾಯಿತು. ಧ್ವಜಾರೋಹಣದ ತರುವಾಯ ಹಂಸ, ಮಯೂರ ವಾಹನೋತ್ಸವ.ಶೇಷವಾಹನೋತ್ಸವ. ಗಜೇಂದ್ರ ಮೋಕ್ಷ ಗರುಡೋತ್ಸವ ಸೀತಾರಾಮ ಕಲ್ಯಾಣೋತ್ಸವ ನಡೆಸಿ ಸೋಮವಾರ ಬೆಳಗ್ಗೆ ರಥಕ್ಕೆ ಕಳಸು ಸ್ಥಾಪನೆಯನ್ನು ಎರವೇರಿಸಿ ಯಾತ್ರಾ ದಾನಪೂರ್ವಕ ಕೃಷ್ಣಗಂದೋತ್ಸವದೊಂದಿಗೆ ರಥೋತ್ಸವಕ್ಕೆ ವಿಧಿ ವಿಧಾನಗಳನ್ನು ಅರ್ಚಕರು ನಡೆಸಿದರು.
    ಗ್ರಾಮ ದೇವತೆಗಳಾದ ಕಾಳಿಕಮಟೇಶ್ವರಿ ಅಮ್ಮನವರು, ಬನಶಂಕರಿ ಅಮ್ಮನವರು, ಪ್ಲೇಗಿನಮ್ಮ, ಕಾರೆಹಳ್ಳಿ ಅಮ್ಮನವರ ಉತ್ಸವ ದೊಂದಿಗೆ ಆಂಜನೇಯ ಸ್ವಾಮಿಯ ರಥೋತ್ಸವ ಸಂಪನ್ನಗೊಂಡಿತು. ಸಾವಿರಾರು ಭಕ್ತರ ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಡೆಯನ್ನು ನೆರವೇರಿಸಲಾಯಿತು. ಬಾಣಾವರದ ಗ್ರಾಮಸ್ಥರು ಹಾಗೂ ಸುತ್ತಮುತ್ತಲ 12 ಹಳ್ಳಿಗಳ ಭಕ್ತರು ರಥ ಎಳೆದು ಸ್ವಾಮಿ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts