More

    ಚುನಾವಣೆಗೆ ಮೊದಲೇ ಮಮತಾ ಬ್ಯಾನರ್ಜಿಗೆ ಬಿಗ್​ ಶಾಕ್​! ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಯಕ! ಶೀಘ್ರವೇ ಬಿಜೆಪಿ ಸೇರ್ಪಡೆ?

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಇರುವಾಗಲೇ ಆಡಳಿತ ಪಕ್ಷ ಟಿಎಂಸಿಗೆ ಬಿಗ್​ ಶಾಕ್​ ಎದುರಾಗಿದೆ. ಪಕ್ಷದ ಶಾಸಕ, ಸುವೆಂದು ಅಧಿಕಾರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡಲಾರಂಭಿಸಿವೆ.

    ಇದನ್ನೂ ಓದಿ: 2020ರಲ್ಲಿ ವರ್ಷ ಅತಿ ಹೆಚ್ಚು ಗಳಿಸಿದ್ದು ಈ 23 ವರ್ಷದ ಯುವತಿಯೇ! ಅಷ್ಟಕ್ಕೂ ಈಕೆ ಮಾಡುವುದೇನು ಗೊತ್ತಾ?

    ಸಾರಿಗೆ, ನೀರಾವರಿ ಮತ್ತು ಜಲಮಾರ್ಗಗಳ ಸಚಿವರಾಗಿದ್ದ ಸುವೆಂದು ಅವರು ನವೆಂಬರ್​ 27ಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ಸೇರುವ ಯೋಚನೆಯಿಂದಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿಗಳು ಎಲ್ಲೆಡೆ ಹರಿದಾಡಿದ್ದವು. ಬಂಡಾಯವೆದ್ದ ನಾಯಕನಿಗೆ ಸಮಾಧಾನ ಮಾಡಲು ಮಮತಾ ಬ್ಯಾನರ್ಜಿ ಅವರು ಟಿಎಂಸಿ ಪಕ್ಷ ಸಕಲ ಪ್ರಯತ್ನಗಳನ್ನೂ ಮಾಡಿತ್ತು. ಆದರೆ ಎಲ್ಲಾ ಪ್ರಯತ್ನಗಳೂ ವಿಫಲವಾಗಿದ್ದು, ಬುಧವಾರದಂದು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

    ಡಿಸೆಂಬರ್​ 19ರಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ರಾಜ್ಯಕ್ಕೆ ಬರುವ ಸಾಧ್ಯತೆಯಿದ್ದು, ಅದೇ ದಿನ ಸಚಿವರ ಸಮ್ಮುಖದಲ್ಲಿ ಸುವೆಂದು ಬಿಜೆಪಿ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.

    ಇದನ್ನೂ ಓದಿ: ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

    ಈ ಬಗ್ಗೆ ರಾಜ್ಯ ಸಚಿವ ಫಿರ್ಹಾದ್​ ಹಕೀಮ್​ ಮಾತನಾಡಿದ್ದು, “ಸುವೆಂದು ಏನು ಮಾಡುತ್ತಾರೆ ಎಂದು ನನಗೆ ತಿಳಿದಿಲ್ಲ. ಆದರೆ ನಾವು ಗಾಂಧೀಜಿ ತತ್ವಗಳೊಂದಿಗೆ ಬೆಳೆದಿದ್ದೇವೆ ಹಾಗೂ ಅದೇ ರೀತಿ ಮುಂದುವರಿಯಲು ಬಯಸುತ್ತೇವೆ. ಹೀಗಿರುವಾಗ ನಮ್ಮವರು ಗಾಂಧೀಜಿ ಕೊಂದವರ ಬಳಿ ಹೋಗಲು ಹೇಗೆ ಸಾಧ್ಯ?” ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

    ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts