More

    ಕಾಂಗ್ರೆಸ್ ಮನೆ ಹೊಸ್ತಿಲಿಗೆ ಬಂದ ಮಧುಬಂಗಾರಪ್ಪ! ಶಿವರಾತ್ರಿ ದಿನವೇ ಮಹತ್ವದ ಚರ್ಚೆ

    ಬೆಂಗಳೂರು: ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡ ಮಧುಬಂಗಾರಪ್ಪ ಅವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಹೊಸ್ತಿಲಿಗೆ ಬಂದು ನಿಂತಿದ್ದಾರೆ.

    ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ನಿವಾಸಕ್ಕೆ ಆಗಮಿಸಿದ ಮಧುಬಂಗಾರಪ್ಪ, ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಕಳೆದ ಒಂದು ವರ್ಷದಿಂದಲೂ ಮಧುಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಈ ವಿಚಾರದಲ್ಲಿ ಅವರು ಕೂಡ ಯಾವುದೇ ಸ್ಪಷ್ಟ ನೀಡಿರಲಿಲ್ಲ. ಇದನ್ನೂ ಓದಿರಿ ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

    ಇತ್ತೀಚೆಗೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯರಾಗಿ ಸೇರ್ಪಡೆಗೊಂಡ ಸಂದರ್ಭದಲ್ಲಿಯೇ ಮಧು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿತ್ತು.

    ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಮಧುಬಂಗಾರಪ್ಪ ತಮ್ಮ ಸಹೋದರ ಕುಮಾರ್ ಬಂಗಾರಪ್ಪ ಎದುರು ಸೋಲುಂಡಿದ್ದರು. ಮುಂದೆಯೂ ಜೆಡಿಎಸ್​ನಿಂದ ಕಣಕ್ಕಿಳಿದರೆ ಗೆಲುವು ಸಲೀಸಲ್ಲ ಎಂದು ಭಾವಿಸಿರುವ ಅವರು ಕಾಂಗ್ರೆಸ್ ಸೇರಿ ತಮ್ಮ ರಾಜಕೀಯ ಮರುಹುಟ್ಟು ಪಡೆಯಲು ಬಯಸಿದ್ದಾರೆ. ಇದನ್ನೂ ಓದಿರಿತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

    ಇದೇ ಕಾರಣಕ್ಕೆ ರಂಗ ಸಜ್ಜುಗೊಳಿಸುವ ಉದ್ದೇಶದಿಂದ ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಧಬಂಗಾರಪ್ಪ ಭೇಟಿ ಮಾಡಿ ಚರ್ಚಿಸಿದ್ದಾರೆ. ಮಧುಬಂಗಾರಪ್ಪ ಜತೆ ಒಂದು ಗಂಟೆ ಕಾಲ ಚರ್ಚೆ ಮಾಡಿದ ಸಿದ್ದರಾಮಯ್ಯ, ಭದ್ರಾವತಿ ಬಿಟ್ರೆ ಬೇರೆ ಎಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲ. ಸೊರಬದಲ್ಲಿ ಸಕ್ರಿಯವಾಗಿ ಕೆಲಸ ಮಾಡು. ಒಳ್ಳೆಯ ದಿನ ನೋಡಿ ಕಾಂಗ್ರೆಸ್ ಸೇರ್ಪಡೆ ಆಗು. ಇಂದಿನಿಂದಲೇ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಪಕ್ಷದ ಕೆಲಸ ಮಾಡು ಅಂತ ಸಲಹೆ ಕೊಟ್ಟಿದ್ದಾರೆ. ಶಿವರಾತ್ರಿ ದಿನ ನನ್ನನ್ನ ಕರೆದಿದ್ದು ಬಹಳ ಸಂತೋಷವಾಯಿತು ಎಂದ ಮಧುಬಂಗಾರಪ್ಪ ಹೇಳಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ.

    ಜೆಡಿಎಸ್ ಮಧುಬಂಗಾರಪ್ಪಗೆ ಜವಾಬ್ದಾರಿ‌ ನೀಡಿ ರಾಜ್ಯ ನಾಯಕನಾಗಿ ಬೆಳೆಸುವ ಅವಕಾಶ ನೀಡಿತ್ತು.

    Video| ಕಪಾಳಕ್ಕೆ ಹೊಡೆದ ಪಿಎಸ್​ಐಗೆ ​ಯುವತಿ ಅವಾಜ್​! ನನ್​ ಗಾಡಿ ಮುಟ್ಟೋಕೆ ನೀನ್ಯಾರೆ…

    ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

    ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts