More

    ಜನರು ಸಹಕರಿಸದಿದ್ದರೆ ಮತ್ತೆ ಲಾಕ್​ಡೌನ್ ವಿಸ್ತರಣೆ​?; ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಎಂ…

    ಬೆಂಗಳೂರು: ಈಗಾಗಲೇ ಒಮ್ಮೆ ಮುಂದುವರಿಸಲಾಗಿರುವ ಲಾಕ್​ಡೌನ್​ ಮತ್ತೆ ಮುಂದುವರಿಯಲಿದೆಯೇ ಎಂಬ ಕುರಿತ ಕುತೂಹಲ ರಾಜ್ಯದ ಜನತೆಯಲ್ಲಿದ್ದು, ಆ ಸಂಬಂಧ ಸರ್ಕಾರ ಇದೀಗ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಮಾತ್ರವಲ್ಲ ಲಾಕ್​ಡೌನ್​ ಮುಂದುವರಿಕೆ ಜನರ ಸಹಕಾರವನ್ನು ಅವಲಂಬಿಸಿಯೇ ನಿರ್ಧಾರವಾಗಲಿದೆ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಿದೆ.

    ರಾಜ್ಯದ ಕರೊನಾ ಪರಿಸ್ಥಿತಿ ನಿರ್ವಹಣೆ ಕುರಿತು ನಡೆಸಿದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಆ ಬಗ್ಗೆ ತಮ್ಮ ನಿಲುವನ್ನ ತಿಳಿಸಿದ್ದಾರೆ. ಈಗಾಗಲೇ ವಿಸ್ತರಿಸಲಾಗಿರುವ ಲಾಕ್​ಡೌನ್​ ಜೂ. 7ರ ವರೆಗೂ ಇರಲಿದೆ. ಆ ಬಳಿಕ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಧರಿಸಲು ಸಾಕಷ್ಟು ಸಮಯಾವಕಾಶವಿದೆ. ಹೀಗಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎರಡನೇ ಸಲ ಲಾಕ್​ಡೌನ್​ ವಿಸ್ತರಿಸಲಾಗಿದ್ದು, ಜನರು ಉತ್ತಮ ಸಹಕಾರ ಕೊಡುತ್ತಿದ್ದಾರೆ. ಅವರ ಸಹಕಾರ ಉತ್ತಮವಾಗಿದ್ದರೆ ಲಾಕ್​ಡೌನ್​ ಮತ್ತೆ ಮುಂದುವರಿಸುವ ಅಗತ್ಯ ಬೀಳುವುದಿಲ್ಲ ಎನ್ನುವ ಮೂಲಕ ಸಿಎಂ ಜನರ ಜವಾಬ್ದಾರಿ ಕುರಿತು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.

    ಗೃಹಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ಥನಾರಾಯಣ ಅವರು ಕೂಡ ಈ ಬಗ್ಗೆ ಮಾತನಾಡಿದ್ದು, ಈಗಲೇ ಏನನ್ನೂ ಹೇಳುವುದು ಸಾಧ್ಯವಿಲ್ಲ. ಲಾಕ್​ಡೌನ್​ ಬಳಿಕ ಪ್ರಕರಣಗಳು ತಗ್ಗಿವೆ. ಆದರೆ ಈಗಾಗಲೇ ವಿಧಿಸಲಾಗಿರುವ ಲಾಕ್​ಡೌನ್​ ಮುಗಿಯಲು ಎರಡು ಮೂರು ದಿನಗಳಿರುವಾಗ ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಹೇಳಿದ್ದಾರೆ.

    ಕರೊನಾ ಸೋಂಕನ್ನು ಗೆದ್ದ ಶತಾಯುಷಿ ದಂಪತಿ; ಹೂವಿನ ಹಾರ ಹಾಕಿ ಸ್ವಾಗತಿಸಿದ ಗ್ರಾಮಸ್ಥರು

    ಕೋವಿಡ್​ನಿಂದ ಅನಾಥರಾದ ಮಕ್ಕಳಿಗೆ ಸಿಗಲಿದೆ 10 ಲಕ್ಷ ರೂಪಾಯಿ!; ಅಪ್ಪ-ಅಮ್ಮನಿಲ್ಲದ ಮಕ್ಕಳಿಗಾಗಿ ಪಿಎಂ ಕೇರ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts