More

    ಕೋವಿಡ್​ನಿಂದ ಅನಾಥರಾದ ಮಕ್ಕಳಿಗೆ ಸಿಗಲಿದೆ 10 ಲಕ್ಷ ರೂಪಾಯಿ!; ಅಪ್ಪ-ಅಮ್ಮನಿಲ್ಲದ ಮಕ್ಕಳಿಗಾಗಿ ಪಿಎಂ ಕೇರ್ಸ್​

    ನವದೆಹಲಿ: ಕೋವಿಡ್​-19 ಸೋಂಕು ಎಷ್ಟೋ ಕಡೆ ಒಂದೇ ಮನೆಯಲ್ಲಿ ಹಲವರನ್ನು ಬಲಿಪಡೆದಿದ್ದಲ್ಲದೆ, ಅದೆಷ್ಟೋ ತಂದೆ-ತಾಯಂದಿರು ಮಕ್ಕಳನ್ನು ಕಳೆದುಕೊಂಡು ದುಃಖತಪ್ತರಾಗಿದ್ದಾರೆ. ಮತ್ತೊಂದೆಡೆ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಮಕ್ಕಳು ಅಕ್ಷರಶಃ ಅನಾಥರಾಗಿದ್ದೂ ಇದೆ. ಅಂಥ ಮಕ್ಕಳಿಗೆ ಮುಂದೆ ದಿಕ್ಕುದೆಸೆ ಯಾರು, ಅವರ ಕೇರ್​ ಟೇಕರ್​ ಯಾರು ಎಂಬ ಪ್ರಶ್ನೆಗಳು ದೊಡ್ಡದಾಗಿ ಎದುರಾಗಿವೆ. ಅಂಥ ಮಕ್ಕಳ ಇದೀಗ ಪ್ರಧಾನಿ ಮೋದಿ ಆಶಾಕಿರಣವಾಗಿದ್ದಾರೆ. ಅರ್ಥಾತ್ ಪಿಎಂ-ಕೇರ್ಸ್​ ಈ ಮಕ್ಕಳ ಕಾಳಜಿ ವಹಿಸಲಿದೆ.

    ಕೋವಿಡ್​-19 ಸೋಂಕಿನಿಂದ ಅಪ್ಪ-ಅಮ್ಮ ಇಬ್ಬರನ್ನೂ ಅಥವಾ ಪಾಲಕರನ್ನು ಕಳೆದುಕೊಂಡು ಅನಾಥರಂತಾಗಿರುವ ಮಕ್ಕಳು ಚಿಂತಿತರಾಗಬೇಕಿಲ್ಲ ಎಂಬುದಾಗಿ ಪ್ರಧಾನಮಂತ್ರಿ ಮೋದಿ ಅಭಯ ನೀಡಿದ್ದಾರೆ. ಅಂಥ ಮಕ್ಕಳಿಗೆಂದೇ ‘ಪಿಎಂ ಕೇರ್ಸ್​ ಫಾರ್ ಚಿಲ್ಡ್ರೆನ್​’ ಯೋಜನೆ ರೂಪಿಸಲಾಗಿದೆ. ಇದರ ಮೂಲಕ ಅಂಥ ಮಕ್ಕಳಿಗೆ ಮಾಸಿಕ ಶಿಷ್ಯವೇತನ ಸಿಗಲಿದೆ ಹಾಗೂ ದೊಡ್ಡಮೊತ್ತದ ಧನಸಹಾಯವೂ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಹಾಗಂತ ಈ ಶಿಷ್ಯವೇತನ ಮತ್ತು ಆರ್ಥಿಕ ಸಹಾಯ ತಕ್ಷಣವೇ ಸಿಗುವುದಿಲ್ಲ. ಕೋವಿಡ್​​ನಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳ ವಯಸ್ಸು 18 ವರ್ಷ ಆಗುತ್ತಿದ್ದಂತೆ ಅವರಿಗೆ ಮಾಸಿಕ ವೇತನ ಸಿಗಲಾರಂಭಿಸುತ್ತದೆ. ಅಲ್ಲದೆ ಆ ಮಕ್ಕಳಿಗೆ 23 ವರ್ಷವಾಗುತ್ತಿದ್ದಂತೆ 10 ಲಕ್ಷ ರೂಪಾಯಿ ಪಿಎಂ ಕೇರ್ಸ್​ ಕಡೆಯಿಂದ ಸಿಗಲಿದೆ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯ ತಿಳಿಸಿದೆ. (ಏಜೆನ್ಸೀಸ್)

    ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

    ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

    ಕರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮಗನಿಗೂ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts