More

    ಪಿಯು ಪರೀಕ್ಷೆ ನಡೆಸಲು ಸಜ್ಜಾಗುತ್ತಿದ್ದ ಆಂಧ್ರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಚಾಟಿ; ತಕ್ಷಣವೇ ನಿರ್ಧಾರ ಬದಲು!

    ನವದೆಹಲಿ: ಆತಂಕ-ವಿರೋಧದ ನಡುವೆಯೇ ಪಿಯು ಪರೀಕ್ಷೆ ನಡೆಸಲು ತಯಾರಾಗುತ್ತಿದ್ದ ಆಂಧ್ರಪ್ರದೇಶ ಸರ್ಕಾರ, ಸುಪ್ರೀಂ ಕೋರ್ಟ್ ಬೀಸಿದ ಚಾಟಿಗೆ ಮಣಿದು ಪರೀಕ್ಷೆಯ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಮಾತ್ರವಲ್ಲ, ಪಿಯು ಪರೀಕ್ಷೆಯನ್ನು ರದ್ದು ಮಾಡುವುದಾಗಿ ಘೋಷಿಸಿದೆ.

    ರಾಜ್ಯದಲ್ಲಿ ಪಿಯು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಆದಿಮುಲಪು ಸುರೇಶ್ ಗುರುವಾರ ಸುದ್ದಿಗೋಷ್ಠಿ ಕರೆದು ಘೋಷಿಸಿದ್ದಾರೆ. ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದ ಕೆಲವೇ ಗಂಟೆಗಳಲ್ಲಿ ಅವರು ಈ ಸುದ್ದಿಗೋಷ್ಠಿ ಕರೆದು ನಿರ್ಧಾರ ಪ್ರಕಟಿಸಿದ್ದಾರೆ.

    ಇದನ್ನೂ ಓದಿ: ‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..

    ಸರ್ಕಾರ ಒಂದೂ ಸಾವಿಲ್ಲದೆ ಪರೀಕ್ಷೆ ನಡೆಸಲು ಸಮರ್ಥವಿದೆ ಎಂದು ನಮಗೆ ಸಮಾಧಾನ ಆಗುವವರೆಗೂ ನಾವು ಪರೀಕ್ಷೆ ನಡೆಸಲು ಅನುವು ಮಾಡಿಕೊಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಖಡಕ್​ ಆಗಿ ಹೇಳುತ್ತಿದ್ದಂತೆ ಆಂಧ್ರಪ್ರದೇಶ ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಮಾತ್ರವಲ್ಲ, ಎಲ್ಲರೂ ಪರೀಕ್ಷೆ ರದ್ದು ಮಾಡಿರುವಾಗ ನೀವು ಮಾತ್ರ ಪರೀಕ್ಷೆ ನಡೆಸಿ ವಿಭಿನ್ನ ಎಂದು ತೋರಿಸುವ ಅಗತ್ಯವಿಲ್ಲ, ನಿಮ್ಮ ಸೂತ್ರ ನಮಗೆ ಸಮಂಜಸವಾಗಿ ಕಂಡುಬಂದಿಲ್ಲ ಎಂದೂ ಆಂಧ್ರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಿಳಿಸಿದೆ. (ಏಜೆನ್ಸೀಸ್)

    ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಹಣ್ಣು ಕಿತ್ತು ತಿಂದ ಬಾಲಕರನ್ನು ಮರಕ್ಕೆ ಕಟ್ಟಿ ಹೊಡೆದ; ಮೂರ್ಛೆ ಹೋದವರ ಮುಂದೆ ಮದ್ಯ ಕುಡಿದ!

    ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts