More

    ಕುಂಬ್ರದಲ್ಲಿ ಚಿತ್ರ ಚಿತ್ತಾರ ಬೇಸಿಗೆ ಶಿಬಿರ

    ಪುತ್ತೂರು ಗ್ರಾಮಾಂತರ: ಕುಂಬ್ರದ ವರ್ಣಿಕಾ ಡ್ರಾಯಿಂಗ್ ಸ್ಕೂಲ್ ಮತ್ತು ಶ್ರೀ ಶಾರದಾ ಕಲಾ ಶಾಲೆಯ ಆಶ್ರಯದಲ್ಲಿ ‘ಚಿತ್ರ ಚಿತ್ತಾರ’ ಬೇಸಿಗೆ ಶಿಬಿರ ಆರು ದಿನ ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ನಡೆಯಿತು.

    ಮೇ 13ರಂದು ಆರಂಭಗೊಂಡ ಶಿಬಿರವನ್ನು ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಕೆ ಪಲ್ಲತ್ತಾರು ಉದ್ಘಾಟಿಸಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದೊಂದು ಉತ್ತಮ ಅವಕಾಶ ಎಂದರು.

    ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
    ‘ಅಭಿನಯ ಗೀತೆ ಮತ್ತು ಕೌಶಲಾಧಾರಿತ ಆಟಗಳು’ ಎಂಬ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಭವ್ಯ ವೇಣುಗೋಪಾಲ್ ತರಗತಿ ನಿರ್ವಹಿಸಿದರು. ಶಿಬಿರ ಸಂಯೋಜಕ ರಂಜಿತ್ ಹಾಗೂ ದೀಪ್ತಿ ಉಪಸ್ಥಿತರಿದ್ದರು. ಶಾಸ್ತ ರೈ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts