More

    ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಮಾಪನ

    ಸುಬ್ರಹ್ಮಣ್ಯ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಸುಳ್ಯ ತಾಲೂಕು ಪಂಚಾಯಿತಿ, ಗುತ್ತಿಗಾರು ಗ್ರಾಮ ಪಂಚಾಯಿತಿ, ಅರಿವು ಕೇಂದ್ರ, ಗ್ರಾಪಂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ನಡೆದ 15 ದಿನಗಳ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಮಾಪನಗೊಂಡಿತು.

    ನಿವೃತ್ತ ಶಿಕ್ಷಕಿ ಹಿಂದಿ ಪಂಡಿತ್ ರಾಜೇಶ್ವರೀ ಸಿ.ವಿ., ಕ.ಸಾ.ಪ. ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ನಿವೃತ್ತ ಪಿಡಿಒ ಮಣಿಯಾನ ಪುರುಷೋತ್ತಮ, ಕ.ಸಾ.ಪ. ನಿರ್ದೇಶಕ ಯೋಗೀಶ್ ಹೋಸೋಳಿಕೆ, ಗ್ರಂಥಾಲಯ ಮೇಲ್ವಿಚಾರಕಿ ಅಭಿಲಾಷಾ ಪ್ರಕಾಶ್ ಮೋಟ್ನೂರು ಉಪಸ್ಥಿತರಿದ್ದರು. ಉಚಿತ ಬೇಸಿಗೆ ಶಿಬಿರದಲ್ಲಿ 40 ಶಿಬಿರಾರ್ಥಿಗಳು ಭಾಗವಹಿಸಿದ್ದರು.

    ವೈವಿಧ್ಯಮಯ ಜ್ಞಾನ : ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ, ಅಭಿನಯ ಗೀತೆ, ನೃತ್ಯ, ನಿಧಿ ಶೋಧ, ಚಿತ್ರ ಕಲೆ, ವಿನೋದ ವಿಜ್ಞಾನ, ಮಕ್ಕಳು ಮತ್ತು ಪ್ರಕೃತಿ ಬಾಂಧವ್ಯ, ಯೋಗ ಧ್ಯಾನ, ಮೋಜಿನ ಗಣಿತ, ಪರಿಸರ ಗೀತೆ, ಚದುರಂಗ ಆಟ, ಸ್ವರಚಿತ ಕವನ ಕಥೆ, ಕಸದಿಂದ ರಸ ಮುಂತಾದ ವಿಚಾರಗಳ ಅರಿವು ಮೂಡಿಸಲಾಯಿತು. ಅಧ್ಯಯನ ಪ್ರವಾಸದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ, ಸುಬ್ರಹ್ಮಣ್ಯ ವಲಯ ಅರಣ್ಯ ಕಚೇರಿ, ಸಾಲು ಮರದ ತಿಮ್ಮಕ್ಕ ಪಾರ್ಕ್, ಕಲ್ಲಾಜೆ ನರ್ಸರಿ ವೀಕ್ಷಣೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿಗಳು, ಪಾಲಕರು, ಸಂಜೀವಿನಿ ಸಂಘದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts