More

    ಲೋ ವೋಲ್ಟೇಜ್ ಸಮಸ್ಯೆ ಪರಿಹಾರ : ಬಂಗಾಡಿ, ಕೊಲ್ಲಿ ಗ್ರಾಹಕರಿಂದ ಮೆಸ್ಕಾಂಗೆ ಮನವಿ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ಅನಿಯಮಿತ ವಿದ್ಯುತ್ ಕಡಿತದಿಂದ ಬಂಗಾಡಿ ಹಾಗೂ ಕೊಲ್ಲಿ ಫೀಡರ್‌ಗೆ ಒಳಪಟ್ಟ ಕೃಷಿಕರು ನಷ್ಟ ಅನುಭವಿಸುತ್ತಿದ್ದು, ವ್ಯಾಪಾರ ವ್ಯವಹಾರಗಳಿಗೂ ಬಹಳಷ್ಟು ಸಮಸ್ಯೆಯಾಗಿದೆ. ತಕ್ಷಣ ಸೂಕ್ತ ಕ್ರಮ ವಹಿಸುವಂತೆ ಊರಿನ ಪ್ರಮುಖರು ಬೆಳ್ತಂಗಡಿ ಮೆಸ್ಕಾಂ ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಿದರು.

    ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಗ್ರಾಹಕರು ಸಾಕಷ್ಟು ತೊಂದರೆಗೀಡಾಗಿದ್ದಾರೆ. ವಿದ್ಯುತ್ ಉಚಿತ ನೀಡಿದರೂ ಅನಿಯಮಿತ ವಿದ್ಯುತ್ ಸಮಸ್ಯೆ ನಿರಂತರವಾಗಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಬಳ್ಳಿಗಳಿವೆ, ಇದನ್ನು ತೆರವುಗೊಳಿಸಿಲ್ಲ. ಸ್ಥಳೀಯ ಲೈನ್‌ಮನ್ ರಾಜು ಎಂಬುವರಲ್ಲಿ ಗ್ರಾಹಕರು ವಿದ್ಯುತ್ ಕಡಿತದ ಕುರಿತು ವಿಚಾರಿಸಿದರೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಊರಿನ ಮಂದಿ ಕೇಳುವಾಗ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

    ಬೆಳ್ತಂಗಡಿ ವಿಭಾಗ ಮೆಸ್ಕಾಂ ಇಲಾಖೆ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರಾಸ್ಕ್ ಉತ್ತರಿಸಿ, ಕಳೆದ ನವೆಂಬರ್ ತಿಂಗಳಿಂದ ಟ್ರೀ ಕಟ್ಟಿಂಗ್ ಮಾಡಲು ಸಾಧ್ಯವಾಗಿಲ್ಲ. ಟ್ರೀ ಟ್ರಿಮ್ಮಿಂಗ್ ಕಾರ್ಯಕ್ಕೆ ಸೆಕ್ಷನ್‌ಗೆ 2 ಮಂದಿ ನೌಕರರನ್ನು ನೀಡಲಾಗಿದೆ. ಒಂದು ದಿನಕ್ಕೆ ಇಬ್ಬರನ್ನು ಕಳುಹಿಸಿ ಟ್ರೀ ಟ್ರಿಮ್ಮಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕನಿಷ್ಠ ಪಕ್ಷ 5 ಮಂದಿ ಬೇಕು. ಜೂನ್‌ನಿಂದ ಕೊಡುವುದಾಗಿ ತಿಳಿಸಿದ್ದಾರೆ. ಈ ನೆಲೆಯಲ್ಲಿ ತಕ್ಷಣ ಲೈನ್‌ಮನ್‌ಗಳ ಸಭೆ ಕರೆಯುತ್ತೇವೆ. ವಿಷಯವನ್ನು ಅಲ್ಲಿ ಪ್ರಸ್ತಾಪಿಸೋಣ ಎಂದರು.

    ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಭರತ್ ಬಂಗಾಡಿ, ಮಾಜಿ ತಾ.ಪಂ. ಅಧ್ಯಕ್ಷ ಮುಕುಂದ ಸುವರ್ಣ, ವೆಂಕಪ್ಪ ಕೋಟ್ಯಾನ್, ಚಂದ್ರಶೇಖರ, ಕರೀಮ್, ನವೀನ್, ಗ್ರಾ.ಪಂ. ಮಾಜಿ ಸದಸ್ಯ ಮೋನು ಮತ್ತಿತರರು ಉಪಸ್ಥಿತರಿದ್ದರು.

    ಆಗಾಗ ವಿದ್ಯುತ್ ಸಮಸ್ಯೆ ಉಂಟಾಗಲು ಟ್ರೀ ಟ್ರಿಮ್ಮಿಂಗ್ ಮಾಡದಿರುವುದು ಕಾರಣ. 11 ಕೆವಿ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಟ್ರೀ ಟ್ರಿಮ್ಮಿಂಗ್ ಮಾಡಿಲ್ಲ. ಕೊಲ್ಲಿ ಫೀಡರ್ ಒಂದರಲ್ಲೇ 80 ಕಿ.ಮೀ. ಉದ್ದ ಸಂಪರ್ಕವಿದೆ. ಕೊಲ್ಲಿ ಫೀಡರ್ ಒಂದರದ್ದೇ ಟ್ರೀ ಟ್ರಿಮ್ಮಿಂಗ್ ನಡೆಸಲು ಒಂದು ತಿಂಗಳು ಬೇಕಿದೆ. ಒಂದೆಡೆ ಓವರ್‌ಲೋಡ್ ಇದ್ದು, ಚುನಾವಣೆ ಬಂದಿದ್ದರಿಂದ ವಿಳಂಬವಾಗಿದೆ. ನಾವು ಲೈನ್ ಆಫ್ ಮಾಡಿ ಕಟ್ಟಿಂಗ್ ಆರಂಭಿಸಿದರೆ ಓವರ್ ಲೋಡ್ ಸಮಸ್ಯೆ ಎದುರಿಸಬೇಕಾಗುತ್ತದೆ. ಈಗಾಗಲೆ 33 ಕೆ.ವಿ. ಕಳೆದ ವಾರದಿಂದ ಮರದ ಗೆಲ್ಲು ತೆರವು ಕಾರ್ಯ ಆರಂಭಿಸಲಾಗಿದೆ.
    – ಕ್ಲೆಮೆಂಟ್ ಬೆಂಜಮಿನ್ ಬ್ರಾಸ್ಕ್, ಬೆಳ್ತಂಗಡಿ ವಿಭಾಗ ಮೆಸ್ಕಾಂ ಇಲಾಖೆ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts