More

    ಮಾಂಸ ತಿನ್ನಬೇಡಿ; ಬಂದಿದೆ ಮತ್ತೊಂದು ಮಹಾಮಾರಿ; ಚಿಕಿತ್ಸೆ ಲಭಿಸದಿದ್ದಲ್ಲಿ 24 ತಾಸಿನಲ್ಲಿ ಸಾವು; ಚೀನಾ ಎಚ್ಚರಿಕೆ

    ನವದೆಹಲಿ: ಕರೊನಾವನ್ನು ಜಗತ್ತಿಗೆಲ್ಲ ಹಂಚಿರುವ ಚೀನಾದಲ್ಲಿ ಮತ್ತೊಂದು ಮಹಾಮಾರಿ ಕಾಣಿಸಿಕೊಂಡಿದೆ. ಇದು ಸಾಂಕ್ರಾಮಿಕವಾಗಿದ್ದು, ಪ್ರಾಣಿಗಳ ಮೂಲಕ ಹರಡಲಿದೆ ಎಂದು ಎಚ್ಚರಿಕೆ ನೀಡಿದೆ.

    ಉತ್ತರ ಚೀನಾದ ಸ್ವಾಯತ್ತ ಪ್ರದೇಶ ಮಂಗೋಲಿಯಾದ ಬಯನ್ನೂರ್​ ಪ್ರದೇಶದ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಬಬೊನಿಕ್​ ಪ್ಲೇಗ್​ ಕಾಣಿಸಿಕೊಂಡಿದೆ. ಹೀಗಾಗಿ ದೇಶಾದ್ಯಂತ ಮೂರನೇ ಹಂತದ ಎಚ್ಚರಿಕೆಯನ್ನು ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾಗಿ ಚೀನಾ ಮಾಧ್ಯಮಗಳು ವರದಿ ಮಾಡಿವೆ.

    ಇದನ್ನೂ ಓದಿ; ಆರಂಭವಾಗಿದೆ ಲಸಿಕೆ ಸಂಶೋಧನಾ ಕಾರ್ಯದ ಅಂತ್ಯ; ಭಾರತದಲ್ಲಿ ನಾಲ್ಕರ ಉತ್ಪಾದನೆ ಖಚಿತ…!

    ಇಲಿ ಜಾತಿಯ (ಮಾರ್ಮೊಟ್​) ಹಾಗೂ ಇತರ ಪ್ರಾಣಿಗಳ ಮೈಮೇಲಿರುವ ಚಿಗಟಗಳಿಂದ ಬಬೋನಿಕ್​ ಪ್ಲೇಗ್​ ಎಂಬ ಹೆಸರಿನ ರೋಗ ಹರಡಲಿದೆ. ಹೀಗಾಗಿ ಈ ರೋಗಕಾರಕಗಳು ಇರುವ ಪ್ರಾಣಿಯನ್ನು ಬೇಟೆಯಾಡುವುದಾಗಲಿ, ತಿನ್ನುವುದನ್ನಾಗಲೀ ಮಾಡಬಾರದು ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ.

    ಈ ಪ್ರಾಣಿಯ ಮಾಂಸ ಸೇವಿಸಿದ ಇಬ್ಬರಲ್ಲಿ ರೋಗ ಕಂಡು ಬಂದಿದ್ದು, ಇವರ ಸಂಪರ್ಕದಲ್ಲಿ ಬಂದ 146 ಜನರಲ್ಲಿ ಪ್ರತ್ಯೇಕವಾಗಿ ಐಸೋಲೇಷನ್​ನಲ್ಲಿ ಇರಿಸಲಾಗಿದೆ ಎಂದು ಚೀನಾ ಅಧಿಕಾರಿಗಳು ಹೇಳಿದ್ದಾರೆ.

    ಇದನ್ನೂ ಓದಿ; ಎಂಟು ಪೊಲೀಸರನ್ನು ಕೊಂದ ವಿಕಾಸ್​ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು

    ಈ ಕಾಯಿಲೆಯ ಲಕ್ಷಣಗಳಾದ ಜ್ವರ, ವಾಂತಿ, ಮೈಮೇಲೆ ಗುಳ್ಳೆಗಳಾಗುವುದು ಅಥವಾ ಇನ್ನಾವುದೇ ರೀತಿಯ ಲಕ್ಷಣಗಳಿದ್ದಲ್ಲಿ ಕೂಡಲೇ ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.

    ಪ್ರಾಣಿಗಳಿಂದ ಮನುಷ್ಯನಿಗೆ ಇದು ವ್ಯಾಪಕವಾಗಿ ಹರಡುವುದರಿಂದ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಸೂಕ್ತ ಚಿಕಿತ್ಸೆ ಲಭಿಸದಿದ್ದಲ್ಲಿ 24 ತಾಸಿನಲ್ಲಿಯೇ ಈ ಕಾಯಿಲೆಗೆ ತುತ್ತಾದ ವ್ಯಕ್ತಿ ಸಾವನ್ನಪ್ಪಬಹುದು ಎಂಬುದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯಾಗಿದೆ.

    ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts