More

    ಭಾರತದ ಏಟಿಗೆ ಬೆದರಿದ ಚೀನಾ ಹೇಳ್ತಿದೆ.., ‘ನಾವು ಅಂಥವರಲ್ಲ’…!

    ನವದೆಹಲಿ: ಲಡಾಖ್​ನ ಗಾಲ್ವಾನ್​ ಅತಿಕ್ರಮಿಸಿ ಹಿಂಸಾತ್ಮಕ ಸಂಘರ್ಷ ನಡೆಸಿದ ಚೀನಾ, ನೇಪಾಳದ ಭೂಭಾಗವನ್ನು ಅಕ್ರಮಿಸಿತು. ಜತೆಗೆ ಭೂತಾನ್​ ಗಡಿಯನ್ನೂ ತನ್ನದೆಂದಿತು. ಅತ್ತ ಜಪಾನ್​ನಲ್ಲೂ ದ್ವೀಪವನ್ನು ತನ್ನ ವ್ಯಾಪ್ತಿಗೆ ಸೇರಿದ್ದು ಎಂದು ವಾದಿಸಿತು. ಇಷ್ಟೆಲ್ಲ ಆದರೂ ಜಗತ್ತಿಗೆ ಮಾತ್ರ ತಾನು ಅಕ್ರಮಣಶೀಲತೆ ಹೊಂದಿಲ್ಲ ಎಂದೇ ಬಿಂಬಿಸಲು ಮುಂದಾಗಿದೆ.

    ಅಕ್ರಮಣಶೀಲತೆ ಹಾಗೂ ವಿಸ್ತರಣಾವಾದದ ಗುಣಗಳೇ ಚೀನಾದ 5000 ವರ್ಷಗಳ ಸಂಸ್ಕೃತಿಯಲ್ಲಿಲ್ಲ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್​ ಯೀ ಹೇಳಿದ್ದಾರೆ. ಜತೆಗೆ, ಚೀನಾ ಎಂದಿಗೂ ಇನ್ನೊಂದು ಅಮೆರಿಕ ಆಗಲಾರದು, ಆಗುವುದಿಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ; ಭಾರತವಷ್ಟೇ ಅಲ್ಲ, ಭಾರತದ ಔಷಧದ ಮೇಲೂ ಅತೀವ ನಂಬಿಕೆ ಬ್ರೆಜಿಲ್​ ಅಧ್ಯಕ್ಷರಿಗೆ…!

    ಅಮೆರಿಕ ಹಾಗೂ ಚೀನಾದ ಸಂಬಂಧಗಳ ಕುರಿತು ಮಾತನಾಡಿ, ಈ ಹೇಳಿಕೆ ನೀಡಿದ್ದಾರೆ. ಅಮೆರಿಕ ವಸ್ತುನಿಷ್ಠವಾಗಿ ಚೀನಾವನ್ನು ಅರಿಯಬೇಕು ಹಾಗೂ ಚೀನಾದತ್ತ ಹೆಚ್ಚು ವೈಚಾರಿಕ ನೀತಿ ಹೊಂದಬೇಕು ಎಂದು ಅಭಿಪ್ರಾಯಪಟ್ಟರು.

    ಕರೊನಾ ಸಂಕಷ್ಟದಿಂದಾಗಿ ಅಮೆರಿಕ ಚೀನಾದತ್ತ ಕೆಂಗಣ್ಣು ಬೀರುತ್ತಿದೆ. ಅಲ್ಲದೇ, ಹಿಮಾಲಯದಲ್ಲಿ ನೆರೆಯ ರಾಷ್ಟ್ರಗಳ ಗಡಿಯನ್ನು ಅತಿಕ್ರಮಿಸಿದ್ದಕ್ಕೆ ದಕ್ಷಿಣ ಚೀನಾದಲ್ಲಿ ಸೇನೆಯನ್ನು ಜಮಾಯಿಸಿತ್ತು.

    ಇದನ್ನೂ ಓದಿ; ಚೀನಾ ಕಳ್ಳಾಟವನ್ನು ಜಗತ್ತಿಗೆ ಸಾರಿದ ಕೆನಡಾ; ಒತ್ತೆಯಾಳು ರಾಯಭಾರಕ್ಕೆ ಮಣಿಯಲ್ಲ ಎಂದ ಪ್ರಧಾನಿ

    ಲೇಹ್​ ಗಡಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಕ್ರಮಣಶೀಲತೆ, ವಿಸ್ತರಣಾವಾದದ ಕಾಲ ಇದಲ್ಲ ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ನೀಡಿದ್ದರು. ಬಳಿಕ, ಚೀನಾ ತಾನು ಆಕ್ರಮಿಸಿದ ಭಾರತದ ಗಡಿಯಿಂದ ಹಿಂದೆಗೆಯುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ.

    ಭಾರತದ ಪರ ದನಿ ಎತ್ತಿದ ಸಂಸದೆಯ ಲೋಕಸಭಾ ಸದಸ್ಯತ್ವವನ್ನೇ ಕಸಿದ ನೇಪಾಳ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts