More

    ಜಲಮಂಡಳಿಯ ನಿರ್ಲಕ್ಷ್ಯಕ್ಕೆ 2 ವರ್ಷದ ಮಗು ಬಲಿ; ಗುಂಡಿ ತೆಗೆದು ತಿಂಗಳಾದರೂ ಮುಚ್ಚಿರಲಿಲ್ಲ!

    ಬೆಂಗಳೂರು: ಜಲಮಂಡಳಿಯು ಪೈಪ್‌ಲೈನ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು 2 ವರ್ಷ 4 ತಿಂಗಳ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಪ್ರಕರಣ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ದೊಡ್ಡಗೊಲ್ಲರಹಟ್ಟಿಯ ಪೈಪ್‌ಲೈನ್ ರಸ್ತೆ ನಿವಾಸಿಗಳಾದ ಹನುಮಾನ್-ಹಂಸ ದಂಪತಿಯ ಪುತ್ರ ಕಾರ್ತಿಕ್ ಮೃತಪಟ್ಟ ಮಗು.

    ದೊಡ್ಡಗೊಲ್ಲರಹಟ್ಟಿಯ ಪೈಪ್‌ಲೈನ್ ರಸ್ತೆ ಬಳಿ 1 ತಿಂಗಳ ಹಿಂದೆ ಬಿಡಬ್ಲ್ಯೂಎಸ್‌ಎಸ್‌ಬಿ ಅವರು ನೀರಿನ ಪೈಪ್ ಅಳವಡಿಸಲು ಗುಂಡಿ ತೆಗೆದಿದ್ದರು. ಆದರೆ, ಆ ಗುಂಡಿಯನ್ನು ಮುಚ್ಚಿರಲಿಲ್ಲ. ಈ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು. ಗುಂಡಿ ಬಳಿ ಯಾರೂ ಹೋಗದಂತೆ ಸುರಕ್ಷತೆಗಾಗಿ ಯಾವುದೇ ತಡೆಗೋಡೆಯಾಗಲಿ ಅಥವಾ ಕಟ್ಟೆಯನ್ನಾಗಲಿ ನಿರ್ಮಿಸಿರಲಿಲ್ಲ.

    ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!

    ಸೋಮವಾರ ಬೆಳಗ್ಗೆ 9.30ಕ್ಕೆ ಕಾರ್ತಿಕ್ ತಂದೆ ಹನುಮಾನ್ ಮೇಸ್ತ್ರಿಯೊಬ್ಬರಿಂದ ಹಣ ಪಡೆಯಲು ಹೊರ ಹೋಗಿದ್ದರು. ಆ ವೇಳೆ ಕಾರ್ತಿಕ್ ಮನೆ ಮುಂದೆ ಆಟವಾಡುತ್ತ ಕಾಂಪೌಂಡ್‌ನಿಂದ ಹೊರಗೆ ಹೋಗಿ ಪೈಪ್‌ಲೈನ್ ರಸ್ತೆಯಲ್ಲಿ ಜಲಮಂಡಳಿ ತೆರೆದಿದ್ದ ಗುಂಡಿಗೆ ಬಿದ್ದಿದ್ದಾನೆ. ಆದರೆ, ಮಗು ಗುಂಡಿಗೆ ಬಿದ್ದಿರುವ ಸಂಗತಿ ಯಾರ ಗಮನಕ್ಕೂ ಬಂದಿರಲಿಲ್ಲ.

    ಇದನ್ನೂ ಓದಿ: ಶೆಟ್ಟರ್ ಹೇಗೆ ಜಾರಿಬಿದ್ರೋ ಗೊತ್ತಿಲ್ಲ; ನಾವು ಹೊಸ ಪಕ್ಷ ಕಟ್ಟಿದ್ವೆ ಹೊರತು ಬೇರೆ ಪಕ್ಷಕ್ಕೆ ಹೋಗಿರ್ಲಿಲ್ಲ: ಶೋಭಾ ಕರಂದ್ಲಾಜೆ

    ಬೆಳಗ್ಗೆ 10.30ಕ್ಕೆ ಪುತ್ರ ಕಾರ್ತಿಕ್ ಕಾಣಿಸದಿದ್ದಾಗ ತಾಯಿ ಹಂಸ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆ ವೇಳೆ ನೀರು ತುಂಬಿದ್ದ ಗುಂಡಿಯಲ್ಲಿ ಮಗು ಬಿದ್ದಿರುವುದನ್ನು ಗಮನಿಸಿ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಹನುಮಾನ್ ಬಂದು ನೋಡಿದಾಗ ಗುಂಡಿಯ ನೀರಿನಲ್ಲಿ ಕಾರ್ತಿಕ್ ಶವ ತೇಲುತ್ತಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ಗುಂಡಿಯಿಂದ ಹೊರಗೆ ತೆಗೆದು ನೋಡಿದ್ದಾಗ ಮಗು ಮೃತಪಟ್ಟಿತ್ತು.

    ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

    ಈ ಸಂಬಂಧ ಹನುಮಾನ್ ಅವರು ಗುಂಡಿಯನ್ನು ಮುಚ್ಚದೆ ನಿರ್ಲಕ್ಷ್ಯತೆ ತೋರಿದ ಬಿಡಬ್ಲ್ಯುಎಸ್‌ಎಸ್‌ಬಿ ಇಂಜಿನಿಯರ್, ಕಂಟ್ರಾಕ್ಟರ್‌ಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

    ಮುಗಿಲು ಮುಟ್ಟಿದ ಆಕ್ರಂದನ: ಮೂರು ವರ್ಷಗಳ ಹಿಂದೆ ಹನುಮಾನ್ ಕೆಲಸ ಹುಡುಕಿಕೊಂಡು ಪತ್ನಿ ಹಂಸ ಜತೆ ಬೆಂಗಳೂರಿಗೆ ಬಂದು ರತ್ನನಗರದಲ್ಲಿ ವಾಸವಾಗಿದ್ದು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಮನೆಯನ್ನು ಖಾಲಿ ಮಾಡಿಕೊಂಡು ದೊಡ್ಡಗೊಲ್ಲರಹಟ್ಟಿಯ ಪೈಪ್‌ಲೈನ್ ರಸ್ತೆಯಲ್ಲಿ ಬಾಡಿಗೆ ಮನೆಗೆ ಬಂದಿದ್ದರು. ಹಂಸ 8 ತಿಂಗಳ ಗರ್ಭಿಣಿಯಾಗಿದ್ದು, ಕಂದನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

    ಶ್ರೀರಾಮುಲು ಮಾತ್ರವಲ್ಲ, ಅವರ ಪತ್ನಿ ಮತ್ತು ಮಕ್ಕಳಿಬ್ಬರೂ ಕೋಟ್ಯಧಿಪತಿಗಳು!

    ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts