More

    ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ವಿಜಯನಗರ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    – ಇದು ಈ ಸಲದ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ. ಕರುಣಾಕರ ರೆಡ್ಡಿ ಅವರ ಸ್ಥಿತಿಗತಿ.

    ಚುನಾವಣೆಗೆ ಅಭ್ಯರ್ಥಿಯಾಗಿರುವ ಅವರು ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಆ ಪ್ರಕಾರ ಕರುಣಾಕರ ರೆಡ್ಡಿ ಮಾತ್ರವಲ್ಲದೆ ಅವರ ಇಬ್ಬರು ಮಕ್ಕಳು ಕೂಡ ಕೋಟ್ಯಧಿಪತಿಗಳು. ಜತೆಗೆ ಕರುಣಾಕರ ರೆಡ್ಡಿ ಅವರ ಪತ್ನಿ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ.

    ಇದನ್ನೂ ಓದಿ: ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಶಾಸಕ ಜಿ. ಕರುಣಾಕರ ರೆಡ್ಡಿ ಅವರ ಚರಾಸ್ತಿ-ಸ್ಥಿರಾಸ್ತಿ ಸೇರಿ ಒಟ್ಟು 40,84,11,271 ರೂ. ಆಸ್ತಿ ಹೊಂದಿದ್ದಾರೆ. ಇವರ ವಾರ್ಷಿಕ ಆದಾಯ 2021-22ರಲ್ಲಿ 3,12,920 ರೂ. ಇತ್ತು. ತಮ್ಮ ಹೆಸರಿಗೆ ಕಾರಿಲ್ಲದ ಇವರು 9,69,11,271 ರೂ. ಮೌಲ್ಯದ ಚರಾಸ್ತಿ, 31.15 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಕರುಣಾಕರ ರೆಡ್ಡಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಮತ್ತು ಇತರೆ ಮೂಲಗಳಿಂದ ಒಟ್ಟು 22,19,35,810 ರೂ. ಸಾಲ ಪಡೆದಿದ್ದಾರೆ. ಟ್ವಿಟರ್ ಖಾತೆ ಇಲ್ಲದ ಇವರ ಕೈಯಲ್ಲಿ 3,80,600 ರೂ. ನಗದು ಇದೆ.

    ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ಮುಂದಿನ 5 ದಿನ ರಾಜ್ಯದ ಎಲ್ಲೆಲ್ಲಿ ಮಳೆಯಾಗಲಿದೆ?

    ಶಾಸಕ ರೆಡ್ಡಿ ಅವರ ಪತ್ನಿ ಜಿ.ವನಜಾ ಅವರ ಹೆಸರಲ್ಲಿ 13,14,76,555 ರೂ. ಮೊತ್ತದ ಚರಾಸ್ತಿ ಹಾಗೂ ಸ್ಥಿರಾಸ್ತಿ ಹಾಗೂ ಕೈಯಲ್ಲಿ 2,20,400 ರೂ. ನಗದು ಇದೆ. ಇವರ ಪುತ್ರರಾದ ಜಿ. ಶಶಿಧರ ರೆಡ್ಡಿ 3,47,55,110 ರೂ. ಹಾಗೂ ಜಿ.ವಿಷ್ಣುವರ್ಧನ ರೆಡ್ಡಿ 2,51,83,922 ರೂ. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿ ಹೊಂದಿದ್ದಾರೆ. ಕರುಣಾಕರ ರೆಡ್ಡಿ 89.63 ಲಕ್ಷ ರೂ. ಮೊತ್ತದ ಚಿನ್ನಾಭರಣ ಹೊಂದಿದ್ದರೆ, ಅವರ ಪತ್ನಿ ಒಂದು ಕೋಟಿ ರೂ. ಮೊತ್ತದ ಆಭರಣಗಳನ್ನು ಹೊಂದಿದ್ದಾರೆ.

    ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts