More

    ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್​ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಗುಂಡಿನ ದಾಳಿ!

    ಉತ್ತರಪ್ರದೇಶ: ಬುಧವಾರ ಉತ್ತರಪ್ರದೇಶದ (Uttarpradesh) ಸಹರಾನ್‌ಪುರದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ (Chandrashekar Azad) ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ಬಕ್ರೀದ್‌ಗೆ ಮುಂಚಿತವಾಗಿ ಅಪಾರ್ಟ್ಮೆಂಟ್​ಗೆ ಮೇಕೆ ಕರೆ ತಂದ ವ್ಯಕ್ತಿಗೆ ತಟ್ಟಿತು ಪ್ರತಿಭಟನೆಯ ಬಿಸಿ!

    ಗುಂಡಿನ ದಾಳಿ ನಡೆಸಿದ ಕಿಡಿಗೇಡಿಗಳು ಹರಿಯಾಣ ರಿಜಿಸ್ಟ್ರೇಷನ್​ ಹೊಂದಿರುವ ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿ, ಚಂದ್ರಶೇಖರ್ ಆಜಾದ್ ಅವರ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಭೀಮ್ ಆರ್ಮಿ ಮುಖ್ಯಸ್ಥರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. “ಒಂದು ಗುಂಡು ಅವರ ದೇಹವನ್ನು ಪ್ರವೇಶಿಸಿದೆ! ಸದ್ಯ ಅವರು ಆರೋಗ್ಯವಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಸಿಎಚ್‌ಸಿಗೆ ಕರೆದೊಯ್ಯಲಾಗಿದೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂದು ಡಾ. ವಿಪಿನ್ ತಾಡಾ ಸ್ಥಳೀಯ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

    ದಾಳಿಯ ವೇಳೆ ಚಂದ್ರಶೇಖರ್ ಆಜಾದ್​ ಅವರು ಟೊಯೊಟಾ ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವಾಹನದ ಸೀಟ್ ಮತ್ತು ಡೋರ್ ಎರಡರಲ್ಲೂ ಬುಲೆಟ್ ತಗುಲಿರುವ ಗುರುತುಗಳಿವೆ. ದಾಳಿಕೋರರು ಕಾರಿನ ಹಿಂಬದಿಯಿಂದ ಚೇಸ್ ಮಾಡಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts