More

    ಟೆಸ್ಟ್​ ವಿಶ್ವಕಪ್​ ಫೈನಲ್​ಗೆ ಮುನ್ನ ಕಿವೀಸ್​ಗೆ ಚೇತೇಶ್ವರ ಪೂಜಾರ ಎಚ್ಚರಿಕೆ!

    ನವದೆಹಲಿ: ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​  ಫೈನಲ್​ಗೆ ದಿನಗಣನೆ ಶುರುವಾಗಿದೆ. ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳು ಚೊಚ್ಚಲ ಟೆಸ್ಟ್​ ವಿಶ್ವ ಚಾಂಪಿಯನ್​ ಪಟ್ಟಕ್ಕಾಗಿ ಕ್ರಿಕೆಟ್​ ಜನಕರ ನಾಡಿನಲ್ಲಿ ಸೆಣಸಲಿವೆ. ಭಾರತದ ಟೆಸ್ಟ್​ ಪರಿಣತ ಬ್ಯಾಟ್ಸ್​ಮನ್​ ಚೇತೇಶ್ವರ ಪೂಜಾರ ಈ ಪಂದ್ಯದಲ್ಲಿ ಆಡಲು ಉತ್ಸುಕರಾಗಿದ್ದು, ಎದುರಾಳಿ ನ್ಯೂಜಿಲೆಂಡ್​ ತಂಡಕ್ಕೆ ದೊಡ್ಡ ಎಚ್ಚರಿಕೆಯೊಂದನ್ನೂ ರವಾನಿಸಿದ್ದಾರೆ.

    ಪಂದ್ಯ ವೇಗದ ಬೌಲಿಂಗ್​ ಸ್ನೇಹಿ ಇಂಗ್ಲೆಂಡ್​ನ ಪಿಚ್​ನಲ್ಲಿ ನಡೆಯುತ್ತಿರುವುದರಿಂದ ನ್ಯೂಜಿಲೆಂಡ್​ ತಂಡಕ್ಕೆ ಹೆಚ್ಚಿನ ಲಾಭವಿದೆ ಎಂಬುದು ಹೆಚ್ಚಿನವರ ಲೆಕ್ಕಾಚಾರವಾಗಿದೆ. ಆದರೆ ಇದನ್ನು ಒಪ್ಪದ ಚೇತೇಶ್ವರ ಪೂಜಾರ, ಭಾರತ ತಂಡ ಎಲ್ಲ ರೀತಿಯ ವಾತಾವರಣದಲ್ಲೂ ಆಡಬಲ್ಲಷ್ಟು ಸಶಕ್ತವಾಗಿದೆ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ, ವಿಶ್ವದ ಯಾವುದೇ ತಂಡವನ್ನು ಬೇಕಾದರೂ ಸೋಲಿಸಬಲ್ಲೆವು ಎಂದು ಕೇನ್​ ವಿಲಿಯಮ್ಸನ್​ ಬಳಗಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಇದನ್ನೂ ಓದಿ: ಆಟೋ ಚಾಲಕರಿಗೆ ಆಹಾರದ ಕಿಟ್​ ನೀಡಿ ನೆರವಾದ ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್​

    ಕರೊನಾ ಹಾವಳಿಯಿಂದಾಗಿ ಸಿದ್ಧತೆಯಲ್ಲಿ ಸ್ವಲ್ಪ ಹಿನ್ನಡೆಯಾಗಿರುವುದು ನಿಜ. ಆದರೆ ಬಲಿಷ್ಠ ನಿರ್ವಹಣೆ ತೋರಬಲ್ಲಷ್ಟು ಅನುಭವ ತಂಡಕ್ಕಿದೆ. ಎಲ್ಲ ರೀತಿಯ ಪಿಚ್​ನಲ್ಲೂ ಗೆಲ್ಲಬಲ್ಲೆವು ಭಾರತ ತಂಡ ಇತ್ತೀಚೆಗಷ್ಟೇ ನಿರೂಪಿಸಿ ತೋರಿಸಿದೆ. ಆಸ್ಟ್ರೆಲಿಯಾದಲ್ಲೂ ಜಯ ದಾಖಲಿಸಿದ್ದೇವೆ. ಅದೇ ವಿಶ್ವಾಸದೊಂದಿಗೆ ನ್ಯೂಜಿಲೆಂಡ್​ ವಿರುದ್ಧವೂ ಕಣಕ್ಕಿಳಿಯಲಿದ್ದೇವೆ ಎಂದು ಪೂಜಾರ ತಿಳಿಸಿದ್ದಾರೆ.

    ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಪ್ರಶಸ್ತಿ ಸುತ್ತಿನ ಹೋರಾಟ ಎರಡು ಸಮಾನ ಗುಣಮಟ್ಟದ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯವಾಗಿದೆ. ಪಂದ್ಯದಲ್ಲಿ ಸಮಬಲದ ಹೋರಾಟ ನಡೆಯುವ ನಿರೀಕ್ಷೆ ಇದೆ. ಆದರೆ ಭಾರತ ತಂಡ ಬಲಿಷ್ಠವಾದ ಮೀಸಲು ಪಡೆಯನ್ನೂ ಹೊಂದಿದೆ ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

    33 ವರ್ಷದ ಪೂಜಾರ ಇದುವರೆಗೆ ಭಾರತ ಪರ 85 ಟೆಸ್ಟ್​ ಆಡಿದ್ದು, 18 ಶತಕಗಳ ಸಹಿತ 6,244 ರನ್​ ಬಾರಿಸಿದ್ದಾರೆ. ಆದರೆ ಇಂಗ್ಲೆಂಡ್​ನಲ್ಲಿ ಆಡಿರುವ ಟೆಸ್ಟ್​ಗಳಲ್ಲಿ ಅವರ ನಿರ್ವಹಣೆ ಅಷ್ಟೇನೂ ಉತ್ತಮವಾಗಿಲ್ಲ. 18 ಇನಿಂಗ್ಸ್​ಗಳ ಪೈಕಿ 11ರಲ್ಲಿ 25ಕ್ಕಿಂತ ಕಡಿಮೆ ರನ್​ ಮಾಡಿದ್ದಾರೆ. ಅದರಲ್ಲೂ 6ರಲ್ಲಿ ಒಂದಂಕಿ ಗಳಿಸಿದ್ದಾರೆ. ಆದರೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಪಂದ್ಯ ನಡೆಯಲಿರುವ ಸೌಥಾಂಪ್ಟನ್​ ಮೈದಾನದಲ್ಲಿ ಆಡಿದ ಕಡೇ ಇನಿಂಗ್ಸ್​ನಲ್ಲಿ 132 ರನ್​ ಬಾರಿಸಿದ್ದು, ಈ ಬಾರಿ ಅದೇ ಆಟ ಮರುಕಳಿಸುವ ವಿಶ್ವಾಸದಲ್ಲಿದ್ದಾರೆ.

    ಪತ್ನಿಯ ಬ್ಲರ್​ ಚಿತ್ರಕ್ಕೆ ಟ್ರೋಲ್​, ಇರ್ಫಾನ್​ ಪಠಾಣ್​ ನೀಡಿದ ಉತ್ತರವೇನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts