ಮಹಾನ್ ವಿದ್ವಾಂಸರಾದ ಚಾಣಕ್ಯರ ಅನುಭವದ ಮಾತುಗಳು ಎಲ್ಲಾ ಕಾಲದಲ್ಲಿ ಎಲ್ಲರೂ ಅನುಸರಿಸಬಹುದಾದಂತಹ ಸಂದೇಶಗಳು. ಚಾಣಕ್ಯರ ಪ್ರಕಾರ ಪತಿ ಮತ್ತು ಪತ್ನಿಯ ನಡುವಿನ ಸಂಬಂಧ ತುಂಬಾ ಸೂಕ್ಷ್ಮವಾಗಿರಬೇಕಂತೆ. ಇಬ್ಬರು ಸಹ ಒಬ್ಬರನೊಬ್ಬರನ್ನು ನಂಬಬೇಕು ಮತ್ತು ಗೌರವಿಸಬೇಕು. ಪವಿತ್ರವಾದ ಸಂಬಂಧದಲ್ಲಿ ಯಾವಾಗ ಗೌರವ ಮತ್ತು ನಂಬಿಕೆ ಕೊರತೆಯಾಗುತ್ತದೆಯೋ ಆವಾಗ ಪರಿಸ್ಥಿತಿ ದುರ್ಬಲವಾಗಿ ಇಬ್ಬರ ನಡುವೆ ಜಗಳ ಆರಂಭವಾಗುತ್ತದೆ.
ಮನುಷ್ಯನನ್ನು ಬಾಧಿಸುವ ಎಲ್ಲ ವಿಷಯಗಳನ್ನು ಚಾಣಕ್ಯ ಆಳವಾಗಿ ಅಧ್ಯಯನ ಮಾಡಿದ್ದಾರೆ. ಚಾಣಕ್ಯ ಪ್ರಕಾರ ವೈವಾಹಿಕ ಸಂಬಂಧದಲ್ಲಿ ಮಾಧುರ್ಯತೆ ಕಾಪಾಡಿಕೊಂಡು ಹೋಗುವ ವ್ಯಕ್ತಿ ಯಾವಾಗಲೂ ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ. ಇದಕ್ಕೆ ತದ್ವಿರುದ್ಧವಾಗಿ ಒಂದು ವೇಳೆ ವೈವಾಹಿಕ ಜೀವನದಲ್ಲಿ ಅಪಶ್ರುತಿ ಮತ್ತು ಒತ್ತಡ ಇದ್ದರೆ ಒಬ್ಬ ವ್ಯಕ್ತಿ ಎಷ್ಟೇ ಪ್ರತಿಭಾವಂತನಾಗಿದ್ದರೂ ಅವನ ಜೀವನದಲ್ಲಿ ತುಂಬಾ ನಿರಾಶೆ ಇರುತ್ತದೆ. ಇಂತಹ ಜನ ಮಾನಸಿಕ ಸಂತೋಷ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ.
ಇದನ್ನೂ ಓದಿರಿ: Web Exclusive: ಕೆ-ಸೆಟ್ ಪರೀಕ್ಷೆಗೆ ದೊರೆಯದ ಹಾಲ್ ಟಿಕೆಟ್, ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳು
ಚಾಣಕ್ಯನ ಪ್ರಕಾರ ಪತಿ ಮತ್ತು ಪತ್ನಿ ಇಬ್ಬರು ಸಂಬಂಧವನ್ನು ಗಟ್ಟಿಗೊಳಿಸುವ ಜವಬ್ದಾರಿಯನ್ನು ಹೊತ್ತುಕೊಂಡಿರುತ್ತಾರೆ. ಆದ್ದರಿಂದ ಇಂತಹ ಸಂಬಂಧವನ್ನು ಗಟ್ಟಿಗೊಳಿಸುವ ವಿಚಾರವನ್ನು ಯಾವಾಗಲೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಚಾಣಕ್ಯನ ಪ್ರಕಾರ ಈ ಕೆಳಗಿನ ಅಂಶಗಳು ಪತಿ ಮತ್ತು ಪತ್ನಿಯ ನಡುವಿನ ಸಂಬಂಧವನ್ನು ಬಲಗೊಳಿಸುತ್ತದೆ.
ಪ್ರತಿಯೊಂದು ಸಣ್ಣ ವಿಚಾರಗಳನ್ನು ಶೇರ್ ಮಾಡಿ
ಚಾಣಕ್ಯನ ಪ್ರಕಾರ ಪತಿ ಮತ್ತು ಪತ್ನಿ ನಡುವಿನ ಸಂಬಂಧದಲ್ಲಿ ಯಾವುದೇ ಐಡಿಯಾಗಳನ್ನು ಹಂಚಿಕೊಳ್ಳಲು ಯಾವುದೇ ಅಡೆತಡೆಗಳು ಇರಬಾರದು. ಪ್ರತಿಯೊಂದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇಬ್ಬರ ಸಮ್ಮತಿ ಬಹಳ ಮುಖ್ಯ. ಯಾವಾಗ ಈ ವಿಚಾರದಲ್ಲಿ ವಿಫಲವಾಗುತ್ತಾರೋ ಆವಾಗ ಇಬ್ಬರ ಸಂಬಂಧ ದುರ್ಬಲವಾಗಲು ಆರಂಭವಾಗುತ್ತದೆ.
ಪರಸ್ಪರ ಗೌರವಿಸಬೇಕು
ಚಾಣಕ್ಯನ ನೀತಿ ಪ್ರಕಾರ ಇಬ್ಬರು ಪರಸ್ಪರ ಗೌರವಿಸಬೇಕು. ಯಾವಾಗ ಗೌರವ ಕಡಿಯಾಗುತ್ತಾ ಸಾಗುತ್ತದೆಯೋ ಪವಿತ್ರ ಸಂಬಂಧವು ಸಹ ದುರ್ಬಲವಾಗುತ್ತಾ ಸಾಗುತ್ತದೆ. ಇಬ್ಬರ ಗೌರವವು ಸಹ ಸಮನಾಗಿರಬೇಕು ಯಾರೊಬ್ಬರ ಗೌರವಕ್ಕೂ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು.
ಇದನ್ನೂ ಓದಿರಿ: ಯುಗಾದಿಗೆ ಹೊಸ ಬಟ್ಟೆಯ ಆಸೆ: ಸಂಬಳ ಬರಲಿ ಇರು ಮಗಳೆ ಅಂದ್ರೂ ಕೇಳದೆ ಬಾಲಕಿ ಆತ್ಮಹತ್ಯೆ!
ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಶಕ್ತಿಯಾಗಿ
ಚಾಣಕ್ಯನ ಪ್ರಕಾರ ಕಷ್ಟದ ಸಮಯದಲ್ಲಿ ಸ್ನೇಹಿತ, ಪತ್ನಿ ಮತ್ತು ಬಂಧುಬಳಗದ ನಿಜವಾದ ಗುರುತು ತಿಳಿಯುತ್ತದೆ. ಆದ್ದರಿಂದ ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಬಿಟ್ಟುಕೊಡಬಾರದು. ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗಿದ್ದರೆ ಎಂತಹ ದೊಡ್ಡ ಸಮಸ್ಯೆಗಳು ಸಹ ಮಂಜಿನಂತೆ ಕರಗಿ ಹೋಗುತ್ತದೆ. ಯಾವುದೇ ಕಷ್ಟದ ಸಂದರ್ಭವಾಗಲಿ ಗಂಡ ಮತ್ತು ಹೆಂಡತಿ ಒಟ್ಟಿಗೆ ಎದುರಿಸಬೇಕು. (ಏಜೆನ್ಸೀಸ್)