More

    ದೇಗುಲ ಮರುನಿರ್ಮಾಣಕ್ಕೆ ಪಾಕ್​ ಸರ್ಕಾರದಿಂದ ರೂ 3.48 ಕೋಟಿ ಬಿಡುಗಡೆ

    ಪೇಶಾವರ: ಕಳೆದ ವರ್ಷ ಡಿಸೆಂಬರ್​ನಲ್ಲಿ ಜಮಾಯಿತ್ ಉಲೇಮಾ ಏ ಇಸ್ಲಾಂ ಸಂಘಟನೆಯ ಸದಸ್ಯರು ಮತ್ತು ಸ್ಥಳೀಯ ಧಾರ್ವಿುಕ ನಾಯಕರ ಗುಂಪು ನಾಶ ಮಾಡಿದ್ದ ಹಿಂದು ದೇಗುಲದ ಮರು ನಿರ್ಮಾಣಕ್ಕೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯ ಸರ್ಕಾರ 3.48 ಕೋಟಿ ಪಾಕಿಸ್ತಾನಿ ರೂಪಾಯಿ ಬಿಡುಗಡೆ ಮಾಡಿದೆ.

    ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕಾರಕ್ ಜಿಲ್ಲೆಯ ತೆರ್ರಿ ಗ್ರಾಮದಲ್ಲಿರುವ ದೇವಸ್ಥಾನ ಮತ್ತು ಶ್ರೀ ಪರಮಹಂಸ ಜೀ ಮಹಾರಾಜ್ ಅವರ ಸಮಾಧಿಯನ್ನು ಜಮಾಯಿತ್ ಉಲೇಮಾ ಏ ಇಸ್ಲಾಂ ಸಂಘಟನೆ ಸದಸ್ಯರು ಹಾಳು ಮಾಡಿದ್ದರು. ಅವರ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಶತಮಾನದಷ್ಟು ಹಳೆಯ ದೇಗುಲ ಮತ್ತು ಸಮಾಧಿಯನ್ನು ಹಾಳುಗೆಡವಿದ್ದಕ್ಕಾಗಿ ಅಲ್ಪ ಸಂಖ್ಯಾತರಾದ ಹಿಂದು ಸಮುದಾಯ ನಾಯಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ನಿರ್ದೇಶನದ ಮೇರೆಗೆ ಖೈಬರ್ ಪಕ್ತುನ್​ಖ್ವಾ ಪ್ರಾಂತೀಯ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ದೇವಸ್ಥಾನದ ಮರುನಿರ್ವಣವನ್ನು ಖಾತರಿಗೊಳಿಸಬೇಕು ಎಂದು ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.

    ಸಾಮಾನ್ಯವಾಗಿ ಇಂತಹ ದಾಳಿ ನಡೆದ ಬಳಿಕ ಅನೌಪಚಾರಿಕ ಮಾತುಕತೆ ‘ಜಿಗ್ರಾ’ ನಡೆಯುತ್ತದೆ. ಅಲ್ಲಿ ಆರೋಪಿಗಳು ದಾಳಿಗೆ ಕ್ಷಮಾಪಣೆ ಕೇಳುತ್ತಾರೆ. ಇಂಥದ್ದೇ ಘಟನೆ 1997ರಲ್ಲೂ ನಡೆದಿತ್ತು. ಅಂದು ಕೂಡ ದೇಶದ ಸಂವಿಧಾನ ಪ್ರಕಾರ ಅಲ್ಪಸಂಖ್ಯಾತರಾದ ಹಿಂದುಗಳಿಗೆ ಪೂರ್ಣ ಪ್ರಮಾಣದ ಭದ್ರತೆಯನ್ನು ಖಾತರಿಪಡಿಸುವುದಾಗಿ ಸ್ಥಳೀಯ ಮುಸ್ಲಿಂ ಧಾರ್ವಿುಕ ಮುಖಂಡರು ಭರವಸೆ ನೀಡಿದ್ದರು. ಆದರೆ, ಇದಾವುದೂ ಪಾಲನೆಯಾಗಿರಲಿಲ್ಲ.

    ‘ದೀದಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರಾ ?’ : ಅಮಿತ್​ ಷಾ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts