More

    ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮೋದಿ ಸಜ್ಜು; ಭೌತಿಕ ತರಗತಿಗಳೇ ಇರಲ್ಲ, ಆನ್​ಲೈನ್​ ಕ್ಲಾಸ್​ಗಳೇ ಎಲ್ಲ….!

    ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ಬೆನ್ನಲ್ಲೇ, ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಕ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಇದಕ್ಕಾಗಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸಲಹೆ ಬಯಸಿದ್ದಾರೆ.

    ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಆನ್​ಲೈನ್​ ಶಿಕ್ಷಣ ವ್ಯವಸ್ಥೆಯಾಗಿ ರೂಪಿಸುವ ಮಹತ್ತರ ಉದ್ದೇಶ ಹೊಂದಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಅಗತ್ಯವೇ ಇರುವುದಿಲ್ಲ. ಜತೆಗೆ, ಶಿಕ್ಷಣ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆಯನ್ನು ಇದು ಕಡಿಮೆ ಮಾಡಲಿದೆ.

    ಇದನ್ನೂ ಓದಿ; ಶ್ರೀಲಂಕಾದಲ್ಲಿ ಪೂರ್ಣಪ್ರಮಾಣದಲ್ಲಿ ಶುರುವಾಗಿವೆ ಶಾಲೆಗಳು; ನಿಯಮಗಳು ಹೀಗಿವೆ…. 

    ಇದಷ್ಟೇ ಅಲ್ಲ, ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ ಹಾಗೂ ಐಐಎಂಗಳನ್ನು ಕೂಡ ಈ ಆನ್​ಲೈನ್​ ಶಿಕ್ಷಣ ವ್ಯವಸ್ಥೆಯ ಭಾಗವನ್ನಾಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪ್ರಧಾನ ಮಂತ್ರಿ ಕಚೇರಿ ಹಾಗೂ ಹಾಗೂ ನೀತಿ ಆಯೋಗವು ಯುಜಿಸಿ ಹಾಗೂ ಎಐಸಿಟಿಇಗೆ ಸಲಹೆ ಹಾಗೂ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.

    ಈ ನಿಟ್ಟಿನಲ್ಲಿ ನೀಲಿನಕ್ಷೆ ತಯಾರಿಸಲು ಎಐಸಿಟಿಇ ಅಧ್ಯಕ್ಷ ಅನಿಲ್​ ಸಹಸ್ರಬುದ್ಧೆ ಹಾಗೂ ಯುಜಿಸಿ ಉಪಾಧ್ಯಕ್ಷ ಡಾ. ಎಂ.ಪಿ. ಪೂನಿಯಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆನ್​ಲೈನ್​ ಶಿಕ್ಷಣ ಒದಗಿಸುವ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಡಿಜಿಟಲ್​ ವೇದಿಕೆಯನ್ನು ರೂಪಿಸುವ ಹೊಣೆ ನೀಡಲಾಗಿದೆ.

    ಇದನ್ನೂ ಓದಿ; ಕಡತಗಳಿಗೆ ಸಹಿ ಹಾಕಲೆಂದೆ ಐಎಎಸ್ ಅಧಿಕಾರಿಯಾದೆ; ಅಪ್ಪನ ಕನಸು ನನಸಾದ ಸಾರ್ಥಕತೆ 

    ಎಲ್ಲ ವಿವಿಗಳ ಕುಲಪತಿಗಳು, ಶಿಕ್ಷಣ ಸಂಸ್ಥೆಗಳ ನಿರ್ದೇಶಕರಿಗೆ ಅನಿಲ್​ ಸಹಸ್ರಬುದ್ಧೆ ಇತ್ತೀಚೆಗೆ ಪತ್ರವೊಂದನ್ನು ಬರೆದಿದ್ದರು. ಸ್ವಾವಲಂಬಿ ಭಾರತಕ್ಕಾಗಿ ಶ್ರಮಿಸುವಂತೆ ಕರೆ ನೀಡಿದ್ದರು. ಶಿಕ್ಷಕರು, ವಿದ್ಯಾರ್ಥಿಗಳಿಗೆ ಪರ್ಯಾಯ ಆ್ಯಪ್, ಇತರ ಉತ್ಪನ್ನಗಳು ಹಾಗೂ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಿ ಎಮದು ಸಲಹೆ ನೀಡಿದ್ದರು.

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts