More

    ಕಡತಗಳಿಗೆ ಸಹಿ ಹಾಕಲೆಂದೆ ಐಎಎಸ್ ಅಧಿಕಾರಿಯಾದೆ; ಅಪ್ಪನ ಕನಸು ನನಸಾದ ಸಾರ್ಥಕತೆ

    ಬೆಂಗಳೂರು: ನಮ್ಮ ತಂದೆ ಶಾಲಾ ಕಾಲೇಜು ಹಾಗೂ ಸ್ಥಳೀಯ ಕೆಲವು ಸಂಘದ ಕುರಿತ ಕಡತಗಳನ್ನು ಅಧಿಕಾರಿಗಳಿಂದ ಸಹಿ ಪಡೆಯಲು ತೆಗೆದುಕೊಂಡು ಹೋಗುತ್ತಿದ್ದರು. ನಾನು, ಜತೆಯಲ್ಲಿ ಹೋದಾಗ ಸಹಿ ಹಾಕದೆ ಸತಾಯಿಸುತ್ತಿದ್ದ ಕಾರಣದಿಂದಲೆ, ಐಎಎಸ್ ಅಧಿಕಾರಿಯಾಗಬೇಕು ಎಂಬ ಛಲ ಮೂಡಿತ್ತು, ಅದು ಈಗ ಈಡೇರಿದೆ. ನನ್ನ ತಂದೆ ರೀತಿಯಲ್ಲಿ ಕಡತ ಹಿಡಿದು ಬರುವ ಸಾಕಷ್ಟು ಜನರಿಗೆ ನೆರವಾಗುತ್ತೇನೆ ಎಂದು 2019ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್​ಸಿ) 845ನೇ ರ್ಯಾಂಕ್ ಪಡೆದ ಡಾ.ಎನ್. ವಿವೇಕ್ ರೆಡ್ಡಿ ಮನದಾಳವನ್ನು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

    ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಗ್ರಾಮೀಣ ಪ್ರದೇಶದ ಯುವಕ ಡಾ.ಎನ್.ವಿವೇಕ್ ರೆಡ್ಡಿ 2019ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್​ಸಿ) 845ನೇ ರ್ಯಾಂಕ್ ಪಡೆದು, ಐಎಎಸ್ ಅಧಿಕಾರಿಯಾಗುವ ಕನಸು ಈಡೇರಿಸಿಕೊಂಡಿದ್ದಾರೆ. ಕೇವಲ ಉನ್ನತ ಅಧಿಕಾರಿಗಳ ಮಕ್ಕಳು ಮಾತ್ರ ಉನ್ನತ ಹುದ್ದೆ ಅಲಂಕರಿಸುತ್ತಾರೆ ಎಂಬ ಮಾತನ್ನು ಒಬ್ಬ ಸಾಮಾನ್ಯ ಪ್ರೌಢಶಾಲಾ ಶಿಕ್ಷಕನ ಪುತ್ರ ಸುಳ್ಳು ಮಾಡಿ, ತಮ್ಮ ಯಶಸ್ಸಿನಲ್ಲಿ ತಂದೆಯೆ ಹೀರೋ ಎಂದು ಮನಬಿಚ್ಚಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ; ದನ ಕಾಯೋ ಕೆಲ್ಸ ಮಾಡುತ್ತಲೇ ಯುಪಿಎಸ್ಸಿ ಪಾಸ್​: ದರ್ಶನ್​ರ ಸ್ಪೂರ್ತಿಯ ಕತೆ ಇದು!

    ವೈದ್ಯ ವೃತ್ತಿಯ ಉನ್ನತ ಹುದ್ದೆ ಬೇಡ: ವಿವೇಕ್ ಅವರದ್ದು, ಮಧ್ಯಮ ವರ್ಗದ ಕುಟುಂಬವಾಗಿದ್ದು ವೈದ್ಯಕೀಯ ಶಿಕ್ಷಣ ಪಡೆಯುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ, ಎಂಬಿಬಿಎಸ್ ಮುಗಿಸಿ ನಂತರ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕಿರಿಯ ನಿವಾಸಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಎಲ್ಲ ಸ್ನೇಹಿತರು ಹಾಗೂ ಸಂಬಂಧಿಕರು, ಎಂ.ಎಸ್ ಅಥವಾ ಎಂ.ಡಿ ಅಭ್ಯಾಸ ಮಾಡುವಂತೆ ಸೂಚಿಸಿದರೂ ತಂದೆ ಆಸೆ ಈಡೇರಿಸಲು ಯುಪಿಎಸ್​ಸಿ ಅಭ್ಯಾಸ ಆರಂಭಿಸಿದರು. ಯುಪಿಎಸ್​ಸಿ ಅಭ್ಯಾಸ ತೀರ್ವನಜಕ್ಕೆ ಮೊದಲು ಸ್ನೇಹಿತರಿಂದ ವಿರೋಧವಾದರೂ, ಯಶಸ್ಸು ನೋಡಿ ಬೆನ್ನುತಟ್ಟುತ್ತಿದ್ದಾರೆ. ವೈದ್ಯ ವೃತ್ತಿ ಮಾಡಿಕೊಂಡು ಐಎಎಸ್ ಪಾಸಾಗುವ ಮೂಲಕ ಗ್ರಾಮೀಣ ಭಾಗದ ವಿವೇಕರೆಡ್ಡಿ ಸಾಧನೆ ಶಿಖರವನ್ನು ತಲುಪಿರುವುದು ಯಶೋಗಾಥೆಯಾಗಿದೆ.

    ತಂದೆಯೇ ಐಎಎಸ್ ಕನಸಿಗೆ ನೀರೆರೆದರು: ಪ್ರೌಢಶಾಲಾ ಹಂತದಲ್ಲಿ ಐಎಎಸ್ ಹುದ್ದೆಗೇರುವ ಕನಸು ಮೂಡಿತ್ತು. ಅದನ್ನು ಸಾಕಾರ ಮಾಡಿಕೊಳ್ಳುವಲ್ಲಿ ನನ್ನ ತಂದೆ ಪ್ರೌಢಶಾಲಾ ಶಿಕ್ಷಕನಾಗಿದ್ದರೂ, ಎಲ್ಲ ಅನುಕೂಲ ಮಾಡಿಕೊಟ್ಟಿದ್ದಾರೆ. ಐಎಎಸ್ ತರಬೇತಿಗಾಗಿ ದೆಹಲಿಗೆ ಹೋಗಿ ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ 8 ತಿಂಗಳಿಗೆ ವಾಪಸಾದೆ. ಆನಂತರ ಕೆಲವು ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ, ಟೆಸ್ಟ್ ಸಿರೀಸ್, ಅಣಕು ಸಂದರ್ಶನದಲ್ಲಿ ಭಾಗವಹಿಸಿದೆ. ಸತತ ಮೂರನೇ ಪ್ರಯತ್ನದಲ್ಲಿ ಪಾಸ್ ಆಗಿದ್ದೇನೆ. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರಬೇಕೆಂಬುದು ನನ್ನ ಆಸೆ ಎನ್ನುತ್ತಾರೆ.

    ಅಂಧತ್ವಕ್ಕೆ ಸವಾಲು ಹಾಕಿ ಬಾಳು ಬೆಳಗಿಸಿಕೊಂಡ ಮೇಘನಾ; ಯುಪಿಎಸ್​ಸಿಯಲ್ಲಿ 465ನೇ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts