More

    ದೆಹಲಿ ಸಿಎಂ ಕೇಜ್ರಿವಾಲ್​ಗೆ ‘ಲಸಿಕೆಯಲ್ಲೇ ಚುಚ್ಚಿದ’ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

    ನವದೆಹಲಿ: ಕೋವಿಡ್​-19 ವಿರುದ್ಧ ಭಾರತ ಆರಂಭಿಸಿರುವ ಬೃಹತ್ ಲಸಿಕೆ ಅಭಿಯಾನ ನಿನ್ನೆ ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ಯಶಸ್ಸು ಕಂಡಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ‘ಲಸಿಕೆಯಲ್ಲೇ ಚುಚ್ಚಿದ್ದಾರೆ’.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಹಿಂದೆ ಘೋಷಿಸಿರುವಂತೆ ಹೊಸ ಮಾರ್ಗಸೂಚಿಗಳೊಂದಿಗೆ ಲಸಿಕೆ ನೀಡುವ ಪ್ರಕ್ರಿಯೆ ಜೂ. 21ರಂದು ವಿಶೇಷವಾಗಿ ಆರಂಭವಾಗಿದೆ. ಬೃಹತ್ ಅಭಿಯಾನವಾಗಿ ಆರಂಭಗೊಂಡಿರುವ ಲಸಿಕೀಕರಣವನ್ನು ಸರ್ಕಾರ ವ್ಯವಸ್ಥಿತವಾಗಿ ಕೈಗೊಂಡಿದ್ದಷ್ಟೇ ಅಲ್ಲದೆ, ಜನರೂ ಉತ್ತಮವಾಗಿ ಪ್ರತಿಕ್ರಿಯಿಸಿರುವುದರಿಂದ ದಾಖಲೆ ಮಟ್ಟದಲ್ಲಿ ಲಸಿಕೆಯನ್ನು ಹಾಕಿಸುವುದು ಸಾಧ್ಯವಾಗಿದೆ. ಪರಿಣಾಮವಾಗಿ ಒಂದೇ ದಿನದಲ್ಲಿ 88.09 ಡೋಸ್​ ಲಸಿಕೆ ಹಾಕಿಸಲಾಗಿದೆ.

    ಇದನ್ನೂ ಓದಿ: ಭಾರತದಲ್ಲಿ ಇಂದು ಒಂದು ಸೆಕೆಂಡ್​ನಲ್ಲಿ ಹಾಕಿಸಿದ ಲಸಿಕೆ ಎಷ್ಟು ಗೊತ್ತೇ!?

    ಲಸಿಕೀಕರಣದಲ್ಲಿ ಮೊದಲ ದಿನವೇ ಮಧ್ಯಪ್ರದೇಶ 17 ಲಕ್ಷದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ 11 ಲಕ್ಷ ಡೋಸ್ ಲಸಿಕೆಯೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಅತಿಹೆಚ್ಚು ಲಸಿಕೆ ಹಾಕಿಸಿದ ಟಾಪ್​-10 ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ, ಬಿಹಾರ, ಗುಜರಾತ್, ಹರಿಯಾಣ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಮ್ ಇವೆ.

    ಇನ್ನು ದೇಶ 88.09 ಲಸಿಕೆಗಳನ್ನು ಅಭಿಯಾನದ ಮೊದಲ ದಿನವೇ ಕೊಟ್ಟಿದ್ದರೂ ದೆಹಲಿ ಸರ್ಕಾರ ಮೊದಲ ದಿನ ಬರೀ 76,289 ಲಸಿಕೆಗಳನ್ನಷ್ಟೇ ನೀಡಿರುವುದನ್ನೇ ಬೊಟ್ಟು ಮಾಡಿ ತೋರಿಸಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ಗೆ ಸರಿಯಾಗಿ ನಾಟುವಂಥ ಉತ್ತರ ಕೊಟ್ಟಿದ್ದಾರೆ.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ದೇಶ 86 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆಯನ್ನು ಒಂದೇ ದಿನದಲ್ಲಿ ಕೊಟ್ಟಿದ್ದರೂ ದೆಹಲಿ ಸರ್ಕಾರ ಬರೀ 76,289 ಡೋಸ್ ನೀಡಿದೆ. ದೆಹಲಿಯ ಉಪಮುಖ್ಯಮಂತ್ರಿ ಟಿವಿಯಲ್ಲಿ ಸುಳ್ಳು ಹೇಳಿ ಅಳುತ್ತಿರುತ್ತಾರೆ, ಮುಖ್ಯಮಂತ್ರಿ ಬೇರೆ ರಾಜ್ಯಗಳ ಬಗ್ಗೆ ಟೀಕೆ ಮಾಡುತ್ತಿರುತ್ತಾರೆ. ಆದರೆ ಕೇಂದ್ರ 11 ಲಕ್ಷ ಲಸಿಕೆ ಒದಗಿಸಿದ್ದರೂ ದೆಹಲಿ ಸರ್ಕಾರ ಬರೀ 76,289 ನೀಡಿದೆ ಎಂದು ಹರ್ಷವರ್ಧನ್ ಟೀಕಿಸಿದ್ದಾರೆ.

    ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…

    ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

    ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts